Tap to Read ➤

'ಮಹಿಳೆಯರ ದಿನ' ವಿಶೇಷ: ಮಹಿಳೆಯರಿಗೆ ಮಾದರಿ ಈ 10 ಮಹಿಳಾ ರತ್ನಮಣಿಗಳು

ಈ ಸಾಧಕಿಯರು ಪ್ರತಿಯೊಬ್ಬ ಮಹಿಳೆಗೆ ಆತ್ಮಸ್ಥೈರ್ಯ ತುಂಬುವರು. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆ ಸಾಧಕಿಯರ ಪಟ್ಟಿ ನೀಡಿದ್ದೇವೆ ನೋಡಿ:
Reena TK
2000 ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಬ್ಬರೇ ಮಹಿಳಾ ಸ್ಪರ್ಧಿ ಇವರಾಗಿದ್ದರು. ಸೀನಿಯರ್‌ ನ್ಯಾಷನಲ್‌ ಲೆವಲ್‌ನಲ್ಲಿ ಎಲ್ಲಾ ಫ್ರೀಸ್ಟೈಲ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
ಇನ್ಫೋಸಿಸ್‌ನಂಥ ಮಲ್ಟಿ ನ್ಯಾಷನಲ್‌ ಕಂಪನಿ ಕಟ್ಟಿ ಬೆಳೆಸಲು ನಾರಾಯಣ ಮೂರ್ತಿಯವರಿಗೆ ಬೆನ್ನೆಲುಬಾಗಿ ನಿಂತವರು. ಟೀಚರ್, ಸೋಷಿಯಲ್ ವರ್ಕರ್, ಬರಹಗಾರ್ತಿಯಾಗಿ, ಉತ್ತಮ ಬಾಷಣಗಾರರಾಗಿ, ಮೋಟಿವೇಟ್‌ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ.
ಬಿಎಂಟಿಟಿಸಿಯ ಮೊದಲ ಮಹಿಳಾ ಡ್ರೈವರ್ ಆಗಿರುವ ಪ್ರೇಮಾ ನಂದಪಟ್ಟಿ ಪುರುಷರು ಮಾತ್ರ ಬಸ್‌ ಓಡಿಸುತ್ತಿದ್ದ ಕಾಲದಲ್ಲಿ ಹೆಣ್ಣಿಗೂ ಸಾಧ್ಯ ಎಂದು ತೋರಿಸಿಕೊಟ್ಟವರು.
ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್‌ ಆಗಿದ್ದಾರೆ. ಚಿಕ್ಕದಿರುವಾಗಲೇ ಸಾಹಸ ಇಷ್ಟ ಪಡುತ್ತಿದ್ದ ಮೇಘನಾ ಭಾರತದ 6ನೇ ಮಹಿಳಾ ಫೈಟರ್ ಪೈಲೆಟ್ ಆಗಿದ್ದಾರೆ.
ಅಗಾಧ ನೋವು, ಆರ್ಥಿಕ ಸಂಕಟ ಎಲ್ಲವನ್ನೂ ಎದುರಿಸಿ ತನ್ನ ಕನಸ್ಸಿನ ಕೂಸು ರಂಗ ಶಂಕರ ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡರೂ ಧೃತಿಗೆಡದೆ ಬೆಳೆದ ಸಾಧಕಿ.
ಇವರ ಜೀವನಕತೆ ತಿಳಿದರೆ ತುಂಬಾ ಕಷ್ಟದಲ್ಲಿರುವ ಮಹಿಳೆಗೆ ಕೂಡ ನನ್ನಿಂದ ಕೂಡ ಏನಾದರೂ ಸಾಧಿಸಲು ಸಾಧ್ಯ ಎಂಬ ಆತ್ಮವಿಶ್ವಾಸ ತುಂಬುವುದು. ಇವರಿಗೆ 2013ರಲ್ಲಿ ಪದ್ಮಶ್ರಿ ಪ್ರಶಸ್ತಿ ಲಭಿಸಿದೆ.
ಕನ್ನಡ ಸಿನಿರಂಗದ ಮೊದಲ ಮಹಿಳಾ ಫಿಲ್ಮಂ ಮೇಕರ್,ಇವರು ಪ್ರಸಿದ್ಧ ರಂಗಕರ್ಮಿಯೂ ಹೌದು. ಮಕ್ಕಳ ನಾಟಕಗಳಿಗೆ ಇವರು ಪ್ರಸಿದ್ಧರು.
ಭಾರತದ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಮಿಂಚಿದ ನಮ್ಮ ಕನ್ನಡದ ಹುಡುಗಿ ವೇದಾ ಕೃಷ್ಣ ಮೂರ್ತಿ. ಇವರು 2011ರಲ್ಲಿ ಒನ್‌ಡೇ ಇಂಟರ್‌ನ್ಯಾಷನಲ್‌ ಮ್ಯಾಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿ ಮೊದಲ ಮ್ಯಾಚ್‌ನಲ್ಲಿಯೇ 51 ರನ್‌ಗಳಿಸಿ ಎಲ್ಲರ ಗಮನ ಸೆಳೆದಿದ್ದರು.
ಮಕ್ಕಳಿಲ್ಲ ಎಂದು ಗಿಡಗಳನ್ನೇ ಮಕ್ಕಳನ್ನಾಗಿ ಪ್ರೀತಿಸಿ, ಬೆಳೆಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ. ಇವರು ಬೆಳೆಸಿದ ಸಾವಿರಾರು ಗಿಡಗಳು ಇಂದು ನೆರಳಿನ ಆಶ್ರಯ ನೀಡುತ್ತಿದೆ.