Tap to Read ➤

ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸಿ- ಆರೋಗ್ಯಕ್ಕೆ ಬಹಳ ಒಳ್ಳೆಯದು

ಒಣದ್ರಾಕ್ಷಿಯಲ್ಲಿ ಹೆಚ್ಚಿನ ಮಟ್ಟದ ಕ್ಯಾಲರಿ ಇರುವ ಕಾರಣದಿಂದಾಗಿ ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು.
Preethin Veigas
ಅತಿಯಾಗಿ ಉಪ್ಪನ್ನು ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡವು ಅಧಿಕವಾಗುವುದು. ಅದಾಗ್ಯೂ, ಇದರಲ್ಲಿ ಇರುವಂತಹ ಪೊಟಾಶಿಯಂ ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ಸಮತೋಲದಲ್ಲಿಡಲು ನೆರವಾಗುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವುದು.
ಒಣದ್ರಾಕ್ಷಿಯಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದನ್ನು ನೀರಿನಲ್ಲಿ ನೆನೆಸಿದಾಗ ನೈಸರ್ಗಿಕ ವಿರೇಚಕವು ಲಭ್ಯವಾಗುವುದು. ಇದರಿಂದ ನೆನೆಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಅದರಿಂದ ಮಲಬದ್ಧತೆ ತಡೆಯಬಹುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವುದು ಮತ್ತು ತಿನ್ನುವ ಬಯಕೆ ಕಡಿಮೆ ಮಾಡುವುದು. ಇದು ತೂಕ ಇಳಿಸಿಕೊಳ್ಳಲು ಸಹಕಾರಿ.
ಮೂಳೆಗಳ ಬೆಳವಣಿಗೆಗೆ ಬೇಕಾಗಿರುವಂತಹ ಬೊರೊನ್ ಎನ್ನುವ ಅಂಶವು ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಒಣದ್ರಾಕ್ಷಿಯಲ್ಲಿ ಇರುವಂತಹ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುವುದು.
ಒಣದ್ರಾಕ್ಷಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆ ಕಾಪಾಡಿಕೊಂಡು ದುರ್ವಾಸನೆ ನಿವಾರಿಸುವುದು.
ದೇಹದಲ್ಲಿ ಕೆಂಪುರಕ್ತದ ಕಣಗಳು ಉತ್ಪತ್ತಿಯಾಗಲು ಮುಖ್ಯವಾಗಿ ಕಬ್ಬಿನಾಂಶವು ಬೇಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ದೇಹದಲ್ಲಿ ರಕ್ತಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತಹೀನತೆ ನಿವಾರಿಸುವುದು.
ನಾರಿನಾಂಶ ಮತ್ತು ಇತರ ಕೆಲವೊಂದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು ಮತ್ತು ಹೃದಯದ ಕಾಯಿಲೆಗಳನ್ನು ತಡೆಯುವುದು.