Tap to Read ➤

ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ತಡೆಗಟ್ಟುವ 9 ವಿಧಾನಗಳು

ಭಾರತದಲ್ಲಿ ಅತೀ ಹೆಚ್ಚು ಮಂದಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?
Preethin Veigas
ಮಹಿಳೆಯರು ತಮಗೆ ತಾವು ಒತ್ತಡ ಹೇರಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಯಾಕೆಂದರೆ ಒತ್ತಡವು ಅವರ ದೇಹದಲ್ಲಿ ಹಲವು ರೀತಿಯ ಹಾರ್ಮೋನುಗಳ ವ್ಯತ್ಯಯಕ್ಕೆ ಕಾರಣವಾಗುತ್ತೆ.
ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ:  ತುಂಬಾ ಒಳ್ಳೆಯ ವಿಧಾನವೆಂದರೆ ಗ್ಲೂಟೀನ್ ಅಂಶವಿರುವ ಆಹಾರ ಸೇವನೆಯನ್ನು ಕಡಿತಗೊಳಿಸುವುದು. ಉದಾಹರಣೆಗೆ ಸಕ್ಕರೆ, ಡೈರಿ ಪದಾರ್ಥಗಳು, ಸ್ವೀಟ್ಸ್, ಆಲ್ಕೋಹಾಲ್ ಇತ್ಯಾದಿಗಳು.
ಉರಿಯೂತ ನಿಯಂತ್ರಣ: ಎಣ್ಣೆಯಂಶದಿಂದ ಕೂಡಿರುವ ಮೀನುಗಳು ಉದಾಹರಣೆಗೆ ಸಲಮಾನ್ ಗಳು ಪಾಕೃತಿಕವಾಗಿ ದೊರೆಯುವ ಆಂಟಿ ಇನ್ ಫ್ಲಮೇಟರಿ ಆಹಾರ ಪದಾರ್ಥಗಳಾಗಿವೆ.
ವಿಟಮಿನ್ ಡಿ ಅಂಶವಿರುವ ಆಹಾರ ಪದಾರ್ಥಗಳ ಸೇವನೆ ಬಹಳ ಮುಖ್ಯ. ಯಾಕೆಂದರೆ ವಿಟಮಿನ್ ಡಿ ಅಂಶವು ಥೈರಾಯ್ಡ್ ಗಳ ಕಾರ್ಯನಿರ್ವಹಣೆಗೆ ಬಹಳ ಮುಖ್ಯ.
ಅತಿಯಾಗಿ ಅಯೋಡಿನ್ ಸೇವಿಸಬೇಡಿ. ಅತಿಯಾದರೆ ಹೈಪರ್ ಥೈರಾಯಿಡಿಸಂ ಕಾಣಿಸಿಕೊಳ್ಳಬಹುದು. ಮೊಟ್ಟೆ, ಚೀಝ್ ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯ ಅಯೋಡಿನ್ ಅಂಶ ಲಭ್ಯವಾಗುತ್ತೆ.
ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದಾದ ಪ್ರಮುಖ ಪ್ರೋಟೀನ್ ಯುಕ್ತ ಆಹಾರಗಳೆಂದರೆ ಮೊಟ್ಟೆಗಳು, ಬೀಜಗಳು, ಕಾಳುಗಳು, ಮೀನು, ಮತ್ತು ಲೆಗ್ಯೂಮಿನ್ಸ್. ಸೋಯಾ ಪದಾರ್ಥಗಳಾದ ಸೋಯಾ ಮಿಲ್ಕ್, ಟೋಫು, ಇತ್ಯಾದಿಗಳಲ್ಲೂ ಕೂಡ ಉತ್ತಮ ಪ್ರೋಟೀನ್ ಅಂಶಗಳಿವೆ,
ಹೆಚ್ಚಿನ ಧೂಮಪಾನ ಮಾಡುವವರಲ್ಲಿ ಥೈರಾಯ್ಡ್ ನಿಂದ ಉಂಟಾಗುವ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ ಮತ್ತು ಅದಕ್ಕೆ ಯಾವುದೇ ಚಿಕಿತ್ಸೆಯೂ ಅಷ್ಟು ಪರಿಣಾಮಕಾರಿಯಾಗಿ ವರ್ತಿಸುವುದಿಲ್ಲ.ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರಿ ಮತ್ತು ಧೂಮಪಾನ ನಿಲ್ಲಿಸುವುದೇ ಸೂಕ್ತ.