Tap to Read ➤

ನನ್ನಮ್ಮ ಸೂಪರ್‌ ಸ್ಟಾರ್ ವಿನ್ನರ್ ವಂಶಿಕಾಳ ಕ್ಯೂಟ್‌ ಫೋಟೋಗಳು

ನನ್ನಮ್ಮ ಸೂಪರ್‌ ಸ್ಟಾರ್ ವಿನ್ನರ್ ಸ್ಟಾರ್ ಕಿಡ್ ವಂಶಿಕಾ ಚಿನಕುರುಳಿಯಂಥ ಮಾತು, ಮುದ್ದಾದ ಸ್ಟೈಲ್, ಅಭಿನಯದಿಂದ ವೀಕ್ಷಕರ ಮನ ಗೆದ್ದಿದ್ದಾರೆ.
Reena TK
ನನ್ನಮ್ಮ ಸೂಪರ್‌ ಸ್ಟಾರ್ ರಿಯಾಲಿಟಿ ಶೋಗೆ ಬಂದ ಮೊದಲ ಎಪಿಸೋಡ್‌ನಲ್ಲೇ ಮುದ್ದು-ಮುದ್ದಾಗಿ ನನ್ನನ್ನು ಮಾಸ್ಟರ್‌ ಆನಂದ್‌ ಮಗಳು ಅಂತಾರೆ, ಆದರೆ ವಂಶಿಕಾ ಅವರ ಅಪ್ಪ ಮಾಸ್ಟರ್ ಆನಂದ್ ಅಂತ ಹೇಳಬೇಕು ಎಂದು ಕಂಪ್ಲೇಂಟ್‌ ಮಾಡುವಾಗ ಅವಳ ಮುಗ್ಧತೆಗೆ ಎಲ್ಲರೂ ನಕ್ಕಿದ್ದರು.
ಈಗ ಎಲ್ಲರೂ ವಂಶಿಕಾಳ ತಂದೆ ಮಾಸ್ಟರ್ ಆನಂದ್ ಎನ್ನುವಂತೆ ಮಾಡಿದ್ದಾರೆ, ಅಷ್ಟರ ಮಟ್ಟಿಗೆ ತನ್ನ ಹವಾ ಮೂಲಕ ಸೆಲೆಬ್ರಿಟಿ ಕಿಡ್‌ ಆಗಿದ್ದಾರೆ.
ರಕ್ತದಲ್ಲಿಯೇ ಬಂದಿರುವ ಅಭಿನಯ ಕಲೆ ವಂಶಿಕಾಳ ಪ್ಲಸ್‌ ಪಾಯಿಂಟ್..
ಅಪ್ಪನಂತೆಯೇ ಪಟ್‌-ಪಟ್ ಅಂತ ಮಾತನಾಡುವ ಮೂಲಕ ಗಮನ ಸೆಳೆಯುತ್ತಾರೆ.
ಕೆಲವೊಮ್ಮೆ ತುಂಬಾ ಮುಗ್ಧತೆಯಿಂದ ಇನ್ನು ಕೆಲವೊಮ್ಮೆ ಅತೀಯಾದ ಬುದ್ಧಿವಂತಿಕೆಯಿಂದ ಮಾತನಾಡುವ ಮೂಲಕ ಎಲ್ಲರೂ ಅಚ್ಚರಿಯಿಂದ ಕಣ್ಣರಳಿಸುವಂತೆ ಮಾಡುತ್ತಾಳೆ ಈ ಪುಟ್ಟ ಪೋರಿ.
ನನ್ನಮ್ಮ ಸೂಪರ್‌ ಸ್ಟಾರ್ ರಿಯಾಲಿಟಿ ಶೋ ವಂಶಿಕಾಳ ಪಾಲಿಗೆ ಭಾಗ್ಯದ ಬಾಗಿಲನ್ನೇ ತೆರೆದಿದೆ. ಈಕೆಯ ಅಭಿನಯ ಕೌಶಲ್ಯ ನೋಡಿದವರು ಅಪ್ಪನಂತೆಯೇ ಬಾಲ ನಟಿಯಾಗಿ ಮಿಂಚಬಹುದು ಎನ್ನುತ್ತಿದ್ದಾರೆ....
ವಂಶಿಕಾ ತನ್ನ ಪ್ರತಿಭೆ, ಕೌಶಲ್ಯದಿಂದ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುವಂತೆ ಆಗಲಿ, ಆಕೆಯಲ್ಲಿನ ಮುಗ್ಧತೆ ಹಾಗೆಯೇ ಉಳಿಯಲಿ... ಆಲ್ ದಿ ಬೆಸ್ಟ್ ವಂಶಿಕಾ....