Tap to Read ➤

ಕಂಕುಳಡಿಯ ದುರ್ವಾಸನೆಗೆ ಸುಲಭ ಮನೆಮದ್ದು

ಬೇಸಿಗೆಯಲ್ಲಿ ಕಂಕುಳಿಂದ ಬರುವ ಬೆವರಿನ ವಾಸನೆಯು ಮುಜುಗರಕ್ಕೆ ಕಾರಣವಾಗುವ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಡಿಯೋಡ್ರೆಂಟ್ ಗಳು ಲಭ್ಯವಿದ್ದರೂ, ಅವುಗಳಿಂದ ಮನೆಮದ್ದುಗಳೇ ಹೆಚ್ಚು ಪರಿಣಾಮಕಾರಿ. ಅಂತಹ ಮನೆಮದ್ದುಗಳು ಹೀಗಿವೆ:
Shreeraksha Rao
ಆಲೂಗಡ್ಡೆ:
 ಕಂಕುಳಡಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಒಂದು ಆಲೂಗೆಡ್ಡೆ ಸ್ಲೈಸ್ ತೆಗೆದುಕೊಂಡು ಅದನ್ನು ಸ್ವಲ್ಪ ಸಮಯದವರೆಗೆ ಕಂಕುಳಡಿಯಲ್ಲಿ ಇಡಿ. ಇದರಿಂದ ಬಿಸಿಲ ಬೇಗೆಯಿಂದ ಉಂಟಾಗುವ ವಾಸನೆಯನ್ನು ಹೋಗಲಾಡಿಸಬಹುದು.
ತೆಂಗಿನೆಣ್ಣೆ:
 ನಿಮ್ಮ ಕೈಯಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕಂಕುಳಡಿಗೆ ಮಸಾಜ್ ಮಾಡಿ. ಎಣ್ಣೆಯನ್ನು ಕೆಲವು ನಿಮಿಷಗಳ ಕಾಲ ಎಣ್ಣೆ ಹೀರಿಕೊಳ್ಳಲು ಬಿಡಿ, ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
ಟೊಮೆಟೊ ಜ್ಯೂಸ್:
 ಈ ಮನೆಮದ್ದು ಬೇಸಿಗೆಯಲ್ಲಿ ಕಂಕುಳಿನಿಂದ ಬರುವ ವಾಸನೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ, ಟೊಮೆಟೊವನ್ನು ತುರಿದು, ಅದರ ರಸವನ್ನು ಪಾತ್ರೆಯಲ್ಲಿ ಹಾಕಿ. ಈಗ ಹತ್ತಿ ಉಂಡೆಯ ಸಹಾಯದಿಂದ ಕಂಕುಳಡಿ ಮಸಾಜ್ ಮಾಡಿ.
ನಿಂಬೆ:
 ಒಂದು ಟೀಚಮಚ ನಿಂಬೆ ರಸಕ್ಕೆ ಅರ್ಧ ಟೀಚಮಚ ಅಡುಗೆ ಸೋಡಾವನ್ನು ಬೆರೆಸಬೇಕು. ಈ ಪೇಸ್ಟ್‌ನ್ನು ತೋಳುಗಳ ಕೆಳಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆದು, ಸ್ವಚ್ಛಗೊಳಿಸಿ.
ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅಂಡರ್ ಆರ್ಮ್ಸ್ ವಾಸನೆಯನ್ನು ತೆಗೆದುಹಾಕಲು ಸಹಕಾರಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈಗ ಈ ನೀರಿನಿಂದ ನಿಮ್ಮ ಕಂಕುಳನ್ನು ತೊಳೆಯಿರಿ.
ಲ್ಯಾವೆಂಡರ್ ಸಾರಭೂತ ತೈಲ:
ಒಂದು ಪಿಂಗಾಣಿಯಲ್ಲಿ, 2 ಚಮಚ ಅಡುಗೆ ಸೋಡಾ ಮತ್ತು ಮೂರು ಚಮಚ ಕಾರ್ನ್‌ಫ್ಲೋರ್ ಹಾಕಿ, ಮಿಶ್ರಣ ಮಾಡಿಕೊಳ್ಳಿ. ಬಳಿಕ 8-10 ಹನಿ ಲ್ಯಾವೆಂಡರ್ ತೈಲ ಹಾಕಿ. ಮತ್ತೆ ಮಿಶ್ರನ ಮಾಡಿ. ಈ ಮಿಶ್ರಣದಿಂದ ದಿನನಿತ್ಯವೂ ಸ್ಕ್ರಬ್ ಮಾಡಿದರೆ ದುರ್ವಾಸನೆ ಮಾಯವಾಗುವುದು.