Tap to Read ➤

ಯುಗಾದಿ ಸ್ಪೆಷಲ್‌: ಕಾಯಿ ಹೋಳಿಗೆ ರೆಸಿಪಿ

ನಾವಿಲ್ಲ ಯುಗಾದಿ ಸ್ಪೆಷಲ್ ಆಗಿ ಕಾಯಿ ಹೋಳಿಗೆ ರೆಸಿಪಿಯನ್ನು ನೀಡಿದ್ದೇವೆ ನೋಡಿ:
Preethin Veigas
ಬೇಕಾಗುವ ಸಾಮಗ್ರಿ:

-ಚಿರೋಟಿ ಅಥವಾ ಸೂಜಿ ರವೆ 1 ಕಪ್ -ಮೈದಾ 1/2 ಕಪ್‌
-ಅರಿಶಿಣ ಪುಡಿ 1/4 ಚಮಚ
-ನೀರು 1 1/4 ಕಪ್‌
-ತುರಿದ ತೆಂಗಿನಕಾಯಿ 1 ಬೌಲ್‌
-ಬೆಲ್ಲ 1 ಕಪ್‌
-ಏಲಕ್ಕಿ ಪುಡಿ 1/2 ಚಮಚ
-ಎಣ್ಣೆ 1 ಕಪ್‌
-ಪ್ಲಾಸ್ಟಿಕ್‌ ಶೀಟ್‌
* ಒಂದು ದೊಡ್ಡ ಬೌಲ್‌ಗೆ ಸೂಜಿ ರವೆ ಹಾಕಿ.
* ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* 2 ಚಮಚ ಎಣ್ಣೆ ಹಾಕಿ
* ನಂತರ ಮುಕ್ಕಾಲು ಕಪ್‌ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.


Boldsky Kannada
* ನಂತರ 2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ
* ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.
* ನಂತರ ಬೌಲ್‌ನ ಮುಚ್ಚಿ 5 ನಿಮಿಷ ಬಿಡಿ.

ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇಡಿ. ನಿಮಗೆ ತೆಂಗಿನ ತುರಿ ಬಾಯಿಗೆ ಸಿಗಬಾರದು ಎಂದಾದರೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಆದರೆ ರುಬ್ಬಿದ ಮಿಶ್ರಣ ನೀರಾಗಿರಬಾರದು.
ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.


* ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.

* ಒಂದು ಪ್ಲೇಟ್‌ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್‌ ಹಾಕಿ ಎಣ್ಣೆ ಸವರಿ ಮೈದಾ ಮಿಶ್ರಣ ಲಟ್ಟಿಸಿ. 

ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ ಕಟ್ಟಿ ಲಟ್ಟಿಸಿ....
ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.
ರೆಡಿಯಾದ ಕಾಯಿ ಹೋಳಿಗೆಯನ್ನು ಬಿಸಿ ತುಪ್ಪದ ಜೊತೆ ಸವಿಯಿರಿ.