Tap to Read ➤

ಯುಗಾದಿ ಪಂಚಾಂಗ ಪ್ರಕಾರ 2022 ತುಲಾ ರಾಶಿಯ ವಾರ್ಷಿಕ ಫಲ

ಯುಗಾದಿ ಪಂಚಾಂಗ ಪ್ರಕಾರ, ತುಲಾ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Shreeraksha Rao
ತುಲಾ ರಾಶಿಯವರ ಅಧಿಪತಿ ಶುಕ್ರ. ಇವರಿಗೆ ಆದಾಯ 8 ವ್ಯಯ 8 ಇದೆ. ಆದ್ದರಿಂದ ಈ ವರ್ಷ ನಿಮಗೆ ಆರ್ಥಿಕವಾಗಿ ಮಿಶ್ರವಾಗಿರುತ್ತದೆ. ಯೋಗ 7 ಹಾಗೂ ಅವಮಾನ 5 ಇದೆ.
ಪ್ರಾರಂಭದ ತಿಂಗಳುಗಳಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ಜೊತೆಗೆ ದ್ವಿತೀಯಾರ್ಧದಲ್ಲಿ ಉದ್ಯೋಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಬಹುದು. ಉದ್ಯೋಗ ಬದಲಾವಣೆಯ ಯೋಚನೆಯಿದ್ದರೆ, ಸರಿಯಾಗಿ ವಿಶ್ಲೇಷಣೆ ಮಾಡಿ ನಿರ್ಧರಿಸಿ.
ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಭವಾಗಿರುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಶುಭಸುದ್ದಿ ದೊರೆಯಲಿದೆ.
ಆರ್ಥಿಕ ವಿಷಯಗಳಲ್ಲಿ, ಸ್ಥಿರತೆ ಕಾಣಬಹುದು, ಆದರೂ ಜಾಗರೂಕರಾಗಿರಿ. ವರ್ಷದ ದ್ವಿತೀಯಾರ್ಧದಲ್ಲಿ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ. ದೊಡ್ಡ ಹೂಡಿಕೆ ಬೇಡ. ಕೌಟುಂಬಿಕ ವಿಷಯದಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ
ಕುಟುಂಬ ಜೀವನ ಉತ್ತಮವಾಗಿರುತ್ತದೆ. ತಮ್ಮ ಮನೆಯನ್ನು ಸಂತೋಷವಾಗಿಡಲು ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮಕ್ಕಳು ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ.
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಜಾಗರೂಕರಾಗಿರಿ. ಹೊಸ ವ್ಯಾಪಾರ ಆರಂಭಿಸಬೇಕೆನ್ನುವವರೂ ಎಚ್ಚರವಾಗಿರಿ. ಆಸ್ತಿ ಖರೀದಿಸುವುದಾದರೆ ಯಶಸ್ಸು ಸಿಗುವುದು. ಆದರೆ, ಪಿತ್ರಾರ್ಜಿತ ಆಸ್ತಿಯ ಮಾರಾಟ ಬೇಡ, ನಷ್ಟವಾಗುವ ಸಾಧ್ಯತೆ ಇದೆ.
ಆರೋಗ್ಯ ಚೆನ್ನಾಗಿರುವುದು, ಆದರೆ, ಜೀರ್ಣಕ್ರಿಯೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಅದಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡಿ.

 ಅದೃಷ್ಟ ಸಂಖ್ಯೆ -7
ಪರಿಹಾರ:
 ಶನಿವಾರದಂದು, ಶನಿದೇವನ ದರ್ಶನ ಮಾಡಿ, ಅಗತ್ಯವಿರುವವರಿಗೆ ಆಹಾರ ದಾನ ಮಾಡಿ.