Tap to Read ➤

ಮುಟ್ಟಿನ ನೋವು ಎಷ್ಟೇ ಇದ್ದರೂ, ಹೀಗೆ ಮಾಡಿದರೆ ನೋವು ಕಡಿಮೆಯಾಗುತ್ತೆ

Reena TK
ಹೀಟ್‌ ಪ್ಯಾಚ್: ಹೀಟ್‌ ಪ್ಯಾಚ್ ಇಟ್ಟುಕೊಳ್ಳುವುದರಿಂದ ನೋವು ತುಂಬಾನೇ ಕಡಿಮೆಯಾಗುವುದು.
ಕಾಫಿ: ಈ ಸಮಯದಲ್ಲಿ ಕೆಫೀನ್ ಪದಾರ್ಥಗಳನ್ನು ಸೇವಿಸಬೇಡಿ, ನೋವು ಹೆಚ್ಚಾಗುವುದು. ಜಂಕ್ಸ್ ಫುಡ್ಸ್ ತಿನ್ನಬೇಡಿ.
ಹೊಟ್ಟೆಗೆ ಮಸಾಜ್: ತುಂಬಾ ನೋವು ಇದ್ದಾಗ ಹೊಟ್ಟೆಗೆ ಸ್ವಲ್ಪ ಮಸಾಜ್ ಮಾಡಿದರೆ ನೋವು ಕಡಿಮೆಯಾಗುವುದು.
ನೀರು: ಈ ದಿನ ಸಾಕಷ್ಟು ನೀರು ಕುಡಿಯಿರಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ.
ಎಳನೀರು: ಮುಟ್ಟಾಗುವ ಒಂದು ದಿನ ಮೊದಲೇ ಎಳನೀರು ಕುಡಿಯಿರಿ. ಮುಟ್ಟಾದ ದಿನ 2 ಎಳನೀರು ಕುಡಿಯಿರಿ.
ಜೀರಿಗೆ ನೀರು: ಜೀರಿಗೆ ನೀರು ಮಾಡಿ ಎರಡು ಲೋಟ ಬಿಸಿ-ಬಿಸಿಯಾಗಿ ಕುಡಿದರೆ ನೋವು ಕಡಿಮೆಯಾಗುವುದು.
ತುಂಬಾ ನೋವಿದ್ದರೆ ನೋವು ನಿವಾರಕ ತೆಗೆದುಕೊಳ್ಳಿ, ಆದರೆ ಆದಷ್ಟು ಇತರ ಟಿಪ್ಸ್ ಮೊದಲು ಪಾಲಿಸಿ, ಆದರೂ ನೋವಿದ್ದರೆ ಮಾತ್ರ ಸೇವಿಸಿ.