Tap to Read ➤

ಹೋಲಿಕಾ ದಹನ್‌: ಈ ಪರಿಹಾರದಿಂದ ಸಂಪತ್ತು ವೃದ್ಧಿಯಾಗುವುದು

ಹೋಲಿಕಾ ದಹನದಂದು ಹನುಮಂತನ ಪೂಜೆ ಮಾಡಬೇಕು, ಜೊತೆಗೆ ಕೆಲವು ಪರಿಹಾರಗಳನ್ನು ಮಾಡುವುದರಿಂದ ದಾರಿದ್ರ್ಯ ಹೋಗಿ ಸಂಪತ್ತು ದೊರೆಯುವುದು.
Reena TK
ಹೋಳಿಯ ಮುನ್ನ ದಿನ ಹೋಲಿಕಾ ದಹನ ಎಂದು ಆಚರಿಸಲಾಗುವುದು. ಈ ವರ್ಷ ಮಾರ್ಚ್‌ 17ರಂದು ಆಚರಿಸಲಾಗುವುದು.
ಈ ವರ್ಷ ಹೋಲಿಕಾ ದಹನವನ್ನು ಗುರುವಾರದಂದು ಆಚರಿಸಲಾಗುವುದು. ಇದು ತುಂಬಾ ಮಂಗಳಕರ ಯೋಗವಾಗಿದೆ. ಈ ವರ್ಷ ಹಿಂದೆಂದೂ ಸೃಷ್ಟಿಯಾಗದಂತಹ ಮಂಗಳಕರ ರಾಜಯೋಗ ರೂಪುಗೊಂಡಿದೆ ಎಂದು ಜ್ಯೋತಿಷ್ಯಿಗಳು ಹೇಳುತ್ತಿದ್ದಾರೆ.
ಈ ದಿನ ಹನುಮಂತನನ್ನು ಸಮರ್ಪಣಾ ಭಾವದಿಂದ ಪೂಜಿಸಿದರೆ ಎಲ್ಲಾ ದುಃಖ ದೂರಾಗುವುದು, ಪಾಪಗಳಿಂದ ಮುಕ್ತಿ ದೊರೆಯುವುದು ಎಂದು ನಂಬಲಾಗಿದೆ.
ಹೋಲಿಕಾ ದಹನ ಭಸ್ಮವನ್ನು ನಿಮ್ಮ ಮನೆಗೆ ತಂದು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದನ್ನು ವಾಸ್ತು ಪ್ರಕಾರ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ವಾಸ್ತು ದೋಷವನ್ನು ತೊಡೆದುಹಾಕಬಹುದು.
ಹೋಲಿಕಾ ದಹನದ ರಾತ್ರಿ ಮನೆಯ ಮುಖ್ಯ ದ್ವಾರದ ನಾಲ್ಕೂ ದಿಕ್ಕಿನಲ್ಲಿ ಸಾಸಿವೆ ಎಣ್ಣೆಯಿಂದ ನಾಲ್ಕು ದಿಕ್ಕಿನಲ್ಲಿ ದೀಪವನ್ನು ಹಚ್ಚಿ ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.
ಹೋಲಿಕಾ ದಹನದ ಸಮಯದಲ್ಲಿ ಹೋಲಿಕಾ ಅಗ್ನಿಯ ಸುತ್ತಲೂ ಏಳು ಸುತ್ತುಗಳನ್ನು ಹಾಕುವುದರಿಂದ ಭಕ್ತರು ಅಕ್ಷಯ ಪುಣ್ಯವನ್ನು ಪಡೆಯಬಹುದು.
ಆರೋಗ್ಯ ಪ್ರಯೋಜನಗಳಿಗಾಗಿ, ನೀವು ಹೋಲಿಕಾ ದಹನದ ಅಗ್ನಿಯಲ್ಲಿ ಹಸಿ ಗೋಧಿಯನ್ನು ಬೇಯಿಸಿ, ತಿನ್ನಬೇಕು. ಹೀಗೆ ಮಾಡುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.