Tap to Read ➤

ತಮ್ಮ ಲುಕ್‌ನಲ್ಲೇ ಗಮನ ಸೆಳೆಯುವ ಕೆಜಿಎಫ್‌ ನಟಿ ಶ್ರೀ ನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ ಮಾಡಿದ ಚೊಚ್ಚಲ ಚಿತ್ರದಲ್ಲಿಯೇ ದೇಶದ ಗಮನ ಸೆಳೆದ ನಟಿ. ಕೆಜಿಎಫ್‌ ನಟಿಯ ಲುಕ್‌ಗೆ ಅಭಿಮಾನಿಗಳು ಫಿದಾ
Reena TK
ಶ್ರೀನಿಧಿ ಶೆಟ್ಟಿ ಮಂಗಳೂರಿನವರು, ಅಚ್ಚ ಕನ್ನಡ ಮಾತನಾಡುವ ಹುಡುಗಿ. ದೊಡ್ಡ ಸ್ಟಾರ್‌ ನಟಿಯಾಗಿದ್ದರೂ ಹಮ್ಮೂ-ಬಿಮ್ಮೂ ತೋರದೆ ಅವರು ಕನ್ನಡ ಮಾತನಾಡುವುದೇ ನೋಡಲು ಚೆಂದ.
ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಶ್ರೀನಿಧಿ ಶೆಟ್ಟಿಗೆ ಅಪ್ಪ-ಅಮ್ಮನೇ ಪ್ರಪಂಚ. ಮಗಳಿಗೆ ಪ್ರತಿಯೊಂದು ವಿಷಯದಲ್ಲೂ ಪ್ರೋತ್ಸಾಹಿಸುತ್ತಿದ್ದರು. ಈಗ ತಾಯಿ ಇಲ್ಲ, ಅವರು 10ನೇ ತರಗತಿಯಲ್ಲಿ ಇರುವಾಗ ತೀರಿ ಹೋದರು. ಈಗ ಅಪ್ಪನೇ ಸರ್ವಸ್ವ, ಮಗಳ ಏಳಿಗೆ ನೋಡಿ ಅಪ್ಪನಿಗೆ ತುಂಬಾ ಹೆಮ್ಮೆ.
ಮಂಗಳೂರಿನ ಶ್ರೀ ನಾರಾಯಣ ಗುರು ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಓದಿ,ನಂತರ ಕಾಲೇಜು ವಿದ್ಯಾಭ್ಯಾಸವನ್ನು ಬೆಂಗಳೂರಿನ ಜೈನ್‌ ಯೂನಿವರ್ಸಿಟಿಯಲ್ಲಿ ಮುಗಿಸಿದರು. ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್‌ನಲ್ಲಿ ಡಿಗ್ರಿ ಪಡೆದಿದ್ದಾರೆ. ಕಲಿಕೆಯಲ್ಲಿ ತುಂಬಾನೇ ಚುರುಕು ಇದ್ದರು.
ಚಿತ್ರರಂಗಕ್ಕೆ ಎಂಟ್ರಿಯಾಗುವ ಮುಂಚೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
2015ರಲ್ಲಿ 'ಮಿಸ್‌ ಕರ್ನಾಟಕ ಮತ್ತು ಮಿಸ್ ಮ್ಯೂಟಿಫುಲ್‌ ಸ್ಮೈಲ್' ಆಗಿದ್ದರು. ಮಣಪುರಂ ಮಿಸ್ ಕ್ವೀನ್‌ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು.
2016ರಲ್ಲಿ 'ಮಿಸ್‌ ಸೂಪರ್‌ನ್ಯಾಷನಲ್‌ ಇಂಡಿಯಾ' ಆಗಿ ಆಯ್ಕೆ ಆದ ಬಳಿಕ ಮಾಡೆಲಿಂಗ್‌ ಜಗತ್ತಿನಲ್ಲಿ ಮತ್ತಷ್ಟು ಫೇಮಸ್ ಆದರು.
ಕೆಜಿಎಫ್‌ನಲ್ಲಿ ರೀನಾ ದೇಸಾಯಿ ಪಾತ್ರದಲ್ಲಿ ತಮ್ಮ ನಟನೆ, ಸ್ಟೈಲ್‌, ಮ್ಯಾನರಿಸಂ ಮೂಲಕ ಗಮನ ಸೆಳೆದಿದ್ದಾರೆ. ನಮ್ಮ ಕನ್ನಡದ ಹುಡುಗಿ ಮತ್ತಷ್ಟು ಹೆಸರು ಮಾಡುವಂತಾಗಲಿ....