Tap to Read ➤

ಯುಗಾದಿ ಪಂಚಾಂಗ ಪ್ರಕಾರ 2022 ವೃಶ್ಚಿಕ ರಾಶಿಯ ವಾರ್ಷಿಕ ಫಲ

ಯುಗಾದಿ ಪಂಚಾಂಗ ಪ್ರಕಾರ ವೃಶ್ಚಿಕ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Shreeraksha Rao
ವೃಶ್ಚಿಕ ರಾಶಿಯವರ ಅಧಿಪತಿ ಚಂದ್ರ. ಇವರಿಗೆ ಆದಾಯ 14 ವ್ಯಯ 14 ಇದೆ. ಯೋಗ 3 ಹಾಗೂ ಅವಮಾನ 1 ಇದೆ. ಆದ್ದರಿಂದ ಈ ವರ್ಷ ನಿಮಗೆ ತುಂಬಾ ಒಳ್ಳೆಯ ಫಲಗಳು ಕಾದಿವೆ.
ನಿಮ್ಮ ಕಠಿಣ ಪರಿಶ್ರಮದಿಂದ, ಯಶಸ್ಸನ್ನು ಪಡೆಯುತ್ತೀರಿ. ಇಷ್ಟು ಸಮಯದ ಕಷ್ಟಗಳೆಲ್ಲವೂ ನಿವಾರಣೆಯಾಗುವುದು.  ಕಾರ್ಪೋರೇಟ್ ವಲಯದ ಉದ್ಯೋಗಿಗಳು ಉತ್ತಮ ಜೀವನ ನಡೆಸುತ್ತೀರಿ. ಪ್ರಮೋಷನ್, ಕೆಲಸದ ಬದಲಾವಣೆ ಬಯಸುವವರಿಗೆ ಉತ್ತಮ ಆಫರ್ ಬರಬಹುದು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗ ಬಯಸುವವರು ತುಂಬಾ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಉನ್ನತ ಶಿಕ್ಷಣ ಬಯಸುವವರಿಗೆ ಉತ್ತಮ ಸಂಸ್ಥೆಯಲ್ಲಿ ಸೀಟ್ ಸಿಗಬಹುದು, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೂ ಉತ್ತಮ
ಹಿಂದೆ ತೆಗೆದುಕೊಂಡ ಸಾಲಗಳು ಮರುಪಾವತಿ ಮಾಡುತ್ತೀರಿ. ಆರ್ಥಕತೆಯ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಹೊಸ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ವರ್ಷದ ಆರು ತಿಂಗಳು ಯಾವುದೇ ಹೊಸ ಹೂಡಿಕೆ ಬೇಡ.
ಕುಟುಂಬ ಜೀವನದಲ್ಲಿ ಸಂಬಂಧದ ಬಗ್ಗೆ ಹೆಚ್ಚು ಗಮನ ಕೊಡಿ. ಪೋಷಕರಿಗೆ ಭಾವನಾತ್ಮಕ ಬೆಂಬಲ ನೀಡಿ. ಆದರೆ ಹೆಚ್ಚು ಭಾವುಕರಾಗಬೇಡಿ. ಕುಟುಂಬ ಸದಸ್ಯರ ಸಮಸ್ಯೆಗಳಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಇದು. ವಿವಾಹ ಜೀವನದಲ್ಲಿ ಉತ್ತಮ ಫಲಿತಾಂಶವಿದೆ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಜಾಗರೂಕರಾಗಿರಿ. ಹೊಸ ವ್ಯಾಪಾರ ಆರಂಭ ಬೇಡ. ಏಕಮಾಲೀಕತ್ವ ವ್ಯಾಪಾರ ಉತ್ತಮ ಲಾಭ ಪಡೆಯಬಹುದು. ಆಸ್ತಿ ಖರೀದಿಸುವುದಾದರೆ ಯಶಸ್ಸು ಸಿಗುವುದು. ಹಣದಲ್ಲಿ ನಿರಂತರ ಹೆಚ್ಚಳವಾಗುವುದು,
ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳಾಬಹುದು, ಸಂಗಾತಿಯ ಆರೋಗ್ಯ ಹದಗೆಡಬಹುದು. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಿ.
 ಅದೃಷ್ಟ ಸಂಖ್ಯೆ - 6
ಪರಿಹಾರ: ಸೋಮವಾರದಂದು, ಶಿವಲಿಂಗಕ್ಕೆ ಅಕ್ಷತೆ ಅರ್ಪಿಸಿ.