Tap to Read ➤

ನಟಿ ಸಂಜನಾ ಗಲ್ರಾನಿ ಬೇಬಿ ಶವರ್‌ ಆಲ್ಬಂ

ನಟಿ ಸಂಜನಾ ಗಲ್ರಾನಿ ಹಾಗೂ ಅಜೀಜ್‌ ಪಾಷಾ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಡೆದ ಅವರ ಸೀಮಂತ ಶಾಸ್ತ್ರದ ಫೋಟೋ ಅಲ್ಬಂ ಇಲ್ಲಿದೆ ನೋಡಿ.......
Meghashree Devaraju
ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ಸಂಜಾನ ಗಲ್ರಾನಿ
ಕೃಷ್ಣ ರಾಧೆ ಹಾಗೂ ಗರ್ಭಿಣಿ ಮತ್ತು ಪತಿಯ ವಿನ್ಯಾಸದಲ್ಲಿ ಮೂಡಿಬಂದ ವಿಶಿಷ್ಟ ಮೆಹೆಂದಿಯ ಮೂಲಕ ಗಮನ ಸೆಳೆದ ನಟಿ
ಕೃಷ್ಣ ರಾಧೆ ಹಾಗೂ ಗರ್ಭಿಣಿ ಮತ್ತು ಪತಿಯ ವಿನ್ಯಾಸದಲ್ಲಿ ಮೂಡಿಬಂದ ವಿಶಿಷ್ಟ ಮೆಹೆಂದಿಯ ಮೂಲಕ ಗಮನ ಸೆಳೆದ ನಟಿ
ಕುಟುಂಬ ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ನಡೆದ ಸೀಮಂತ ಶಾಸ್ತ್ರದಲ್ಲಿ ಸಂಜನಾ ಮುದ್ದಾಗಿ ಕಂಡಿದ್ದಾರೆ
ಮೇ ತಿಂಗಳಲ್ಲಿ ಕುಟುಂಬಕ್ಕೆ ಹೊಸ ಆಥಿತಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ ಸಂಜನಾ ಗಲ್ರಾನಿ ಹಾಗೂ ಪತಿ ಅಜೀಜ್‌ ಪಾಷಾ ದಂಪತಿ
ಬಿಳಿ ಬಣ್ಣದ ಸೀರೆ ಅದಕ್ಕೆ ಒಪ್ಪುವ ನೆಕ್‌ಲೆಸ್‌ನಲ್ಲಿ ಬೇಬಿಬಂಪ್‌ ಜೊತೆ ಫೋಟೋಗೆ ಪೋಸ್‌ ನೀಡಿದ ಸಂಜನಾ
ಗರ್ಭಿಣಿಯಾಗಿದ್ದರೂ ಸಾಮಾಜಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿದ್ದ ಸಂಜನಾ
ಗರ್ಭಿಣಿಯಾದಾಗಿನಿಂದ ಸದಾ ಸಕಾರಾತ್ಮಕ ಚಿಂತನೆಯಲ್ಲಿದ್ದ ಸಂಜನಾ ತಾಯ್ತನದ ಪ್ರತಿಯೊಂದು ಕ್ಷಣವನ್ನು ಅನುಭವಿಸಿದ್ದಾರೆ.
ಸೀಮಂತ ಶಾಸ್ತ್ರಕ್ಕೂ ಮುನ್ನ ಬೇಬಿ ಬಂಪ್‌ ತೋರಿಸುವ ವಿಭಿನ್ನ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿದ್ದ ಸಂಜನಾ.
ಗಂಡ ಹೆಂಡತಿ ಚಿತ್ರದ ಮೂಲಕ ಸಿನಿಮ ರಂಗಕ್ಕೆ ಕಾಲಿಟ್ಟ ಸಂಜನಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದರು ಅಲ್ಲದೇ, ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲು ಅಭಿನಯಿಸಿದ್ದರು.