Tap to Read ➤

ಮುಂಜಾನೆಯ ಆಯಾಸ ನಿವಾರಿಸುವ ಒಂಬತ್ತು ಅತ್ಯುತ್ತಮ ಆಹಾರಗಳು

ಉತ್ತಮ ಆರೋಗ್ಯಕ್ಕಾಗಿ ಸೂಕ್ತಪ್ರಮಾಣದ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುವುದು ಅಗತ್ಯವಾಗಿದ್ದು ತನ್ಮೂಲಕ ದೇಹಕ್ಕೆ ಶಕ್ತಿ ಮತ್ತು ಇಡಿಯ ದಿನದ ಕೆಲಸಕ್ಕಾಗಿ ಚೈತನ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
Preethin Veigas
ಓಟ್ಸ್ ರವೆ ಒಂದು ಪರಿಪೂರ್ಣವಾದ ಹಾಗೂ ಪೌಷ್ಟಿಕ ಆಹಾರವಾಗಿದೆ.
ಒಣಫಲಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಹಾಗೂ ಇವು ಮುಂಜಾನೆಯ ಸುಸ್ತು ಮತ್ತು ಹಸಿವಾಗುವುದರಿಂದ ತಡೆಯುತ್ತದೆ.
ಸಾಮಾನ್ಯವಾಗಿ ಲಾಕ್ಟೋಸ್ ಅಸಹಿಷ್ಟುತೆ ಇರುವ ವ್ಯಕ್ತಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಈ ತೊಂದರೆ ಇಲ್ಲದಿದ್ದರೆ ಮುಂಜಾನೆಯ ಸುಸ್ತಿನಿಂದ ರಕ್ಷಣೆ ಪಡೆಯಲು ಒಂದು ಲೋಟ ಬಿಸಿ ಹಾಲು ಕುಡಿಯಬಹುದು.
ದ್ವಿದಳಧಾನ್ಯಗಳು ಅತ್ಯುತ್ತಮ ಆಹಾರವಾಗಿದ್ದು ಇವುಗಳ ಅಡುಗೆ ಸುಲಭವಾಗಿದ್ದು ಅವಶ್ಯಕ ಪೋಷಕಾಂಶಗಳಿಂದ ಸಮೃದ್ದವಾಗಿವೆ.
ಮುಂಜಾನೆಯ ಸುಸ್ತಿನಿಂದ ರಕ್ಷಿಸಲು ಬೀಜಗಳು ಇನ್ನೊಂದು ಉತ್ತಮ ಆಹಾರವಾಗಿದೆ.
ಕಪ್ಪು ಚಾಕಲೇಟು ಮೆದುಳಿಗೆ ಹಾನಿ ಎಸಗುವ ಉತ್ಕರ್ಷಣಶೀಲ ಒತ್ತಡದ ವಿರುದ್ದ ರಕ್ಷಣೆ ನೀಡುತ್ತದೆ ಹಾಗೂ ನರವ್ಯವಸ್ಥೆಗೆ ಪ್ರಚೋದನೆ ನೀಡುವ ಮೂಲಕ ಹೃದಯದ ಆರೋಗ್ಯವನ್ನೂ ವೃದ್ದಿಸುತ್ತದೆ.
ಮುಂಚಾನೆಯ ಸುಸ್ತನ್ನು ನಿವಾರಿಸಲು ಬಾಳೆಹಣ್ಣು ಅತ್ಯುತ್ತಮ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ.
ಹಸಿರು ಟೀ ಯಲ್ಲಿ ಕೆಫೀನ್ ಮತ್ತು ಎಲ್-ಥಿಯಾನೈನ್ ಎಂಬ ಪೋಷಕಾಂಶಗಳ ಸಂಯುಕ್ತವಿದ್ದು ಇವು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.