Tap to Read ➤

ತೂಕ ಇಳಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ 8 ಆರೋಗ್ಯಕರ ಹವ್ಯಾಸಗಳು

ದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿಬಿಟ್ಟರೆ ತೂಕದ ಸಮತೋಲನ ಕಾಪಾಡಿಕೊಂಡು ಆರೋಗ್ಯಕರವಾಗಿರುವುದು ಕಷ್ಟದ ಕೆಲಸವೇನಲ್ಲ.
Preethin Veigas
ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿದರೆ ಇದು ತೂಕ ಇಳಿಕೆ,ಮತ್ತು ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಕರಿಸುತ್ತದೆ.
ಮುಂಜಾನೆಯ ಸೂರ್ಯನ ಬೆಳಕು ನೀಲಿ ಕಿರಣಗಳನ್ನು ಹೊಂದಿರುತ್ತದೆ.ಈ ನೀಲಿ ಕಿರಣ ನಿಮ್ಮ ಮನಸ್ಸಿನ ಆಂತರಿಕ ಗಡಿಯಾರವನ್ನು ಎಚ್ಚರಿಸಲು,ಹಾರ್ಮೋನ್ ಗೆ ಕೊಬ್ಬನ್ನು ಕರಗಿಸಲು, ಮತ್ತು ಮನಸ್ಸು ಹಸಿವಿನ ಮೇಲೆ ಹತೋಟಿ ಇಡಲು ಅನುಕೂಲವಾಗುತ್ತದೆ.
ಮುಂಜಾನೆಯ ವೇಳೆ  ಕಾಫಿ,ಟೀ ಕುಡಿಯುವುದನ್ನು ಬಿಟ್ಟು ಗ್ರೀನ್ ಟೀ ಅಥವಾ ಬ್ಲಾಕ್ ಕಾಫಿ ಸೇವಿಸಿ.
ಬೆಳಗ್ಗಿನ ತಿಂಡಿ ದಿನದಲ್ಲಿ ಅತಿ ಮುಖ್ಯ ಆಹಾರ.ನೀವು ಇದನ್ನು ಸ್ಕಿಪ್ ಮಾಡಿದಲ್ಲಿ ಹಸಿವನ್ನು ತಡೆಯಲು ಅನಾರೋಗ್ಯಕರವಾದ ಏನನ್ನಾದರೂ ತಿನ್ನುತ್ತೀರಿ.
ಪ್ರೋಟೀನ್ ಹೇರಳವಾಗಿರುವ ತಿಂಡಿಯನ್ನು ಸೇವಿಸುವುದರಿಂದ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ಹೆಚ್ಚಿನ ಸಮಯದವರೆಗೆ ಹಸಿವು ಕಾಣಿಸಿಕೊಳ್ಳುವುದಿಲ್ಲ .
ಬ್ರೇಕ್ ಫಾಸ್ಟ್ ಗಿಂತ ಮೊದಲು ಸ್ವಲ್ಪ ದೈಹಿಕ ಚಟುವಟಿಕೆ ಮಾಡಿ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವ ವ್ಯಾಯಾಮ ಕಾರ್ಬೋಹೈಡ್ರೇಟ್ ಅನ್ನು ಜೀರ್ಣಿಸಿ ಕೊಬ್ಬನ್ನು ಕರಗಿಸುತ್ತದೆ.
ಮುಂಜಾನೆ ಬೆಚ್ಚಗಿನ ನೀರಿನ ಸ್ನಾನಕ್ಕೆ ಮನ ಬಯಸುವುದು ಸಾಮಾನ್ಯ ಆದರೆ ತಣ್ಣೀರು ಸ್ನಾನ ಚಯಾಪಚಯ ಕ್ರಿಯೆ ಹೆಚ್ಚಿಸಿ, ಹಾರ್ಮೋನಿನ ನಿಯಂತ್ರಣ ಮತ್ತು ಎನರ್ಜಿ ಮಟ್ಟವನ್ನು ಹೆಚ್ಚಿಸಿ ಲವಲವಿಕೆಯಿಂದಿರಲು ಸಹಕರಿಸುತ್ತದೆ.
ಪ್ರತಿಯೊಬ್ಬರೂ ಸ್ನಾಕ್ಸ್ ತಿನ್ನುವ ಬಯಕೆಯಾಗುವುದು ಸಹಜ.ಇಂತಹ ಬಯಕೆಗಳನ್ನು ನಿಗ್ರಹಿಸಲು ಸರಿಯಾದ ತಯಾರಿ ನಡೆಸಿ ಸ್ನಾಕ್ಸ್ ಪ್ಯಾಕ್ ಮಾಡಿಕೊಳ್ಳಿ.ಯಾವಾಗಲೂ ಆರೋಗ್ಯಕರವಾದ ಸ್ನಾಕ್ಸ್ ತಿನ್ನುವುದನ್ನು ರೂಡಿಸಿಕೊಳ್ಳಿ.