Tap to Read ➤

ಹುಳಕಡ್ಡಿಗೆ ಮನೆಮದ್ದುಗಳು

ಚಳಿಗಾಲದಲ್ಲಿ ತುರಿಕೆ ಸಮಸ್ಯೆ ಸಾಮಾನ್ಯ. ಅದರಲ್ಲಿ ರಿಂಗ್ವರ್ಮ್ ಎಂದು ಕರೆಯಲ್ಪಡುವ ಹುಳುಕಡ್ಡಿ ಅಥವಾ ಗಜಕರ್ಣ ಸಮಸ್ಯೆ ಪ್ರಮುಖವಾಗಿ ಕಾಡುವುದು.
Shreeraksha Rao
ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬರುವುದೇ ರಿಂಗ್ವರ್ಮ್. ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದಕ್ಕೆ ಚಿಕಿತ್ಸೆ ಮಾಡಿ. ಅದಕ್ಕಾಗಿ ಮನೆಮದ್ದುಗಳು ಇಲ್ಲಿವೆ.
ಅರಿಶಿನ:
ಇದು ಶಿಲೀಂಧ್ರಗಳ ಸೋಂಕನ್ನೂ ನಿವಾರಿಸಲು ಸಹ ಸಹಾಯ ಮಾಡುತ್ತದೆ. ಅರಿಶಿನದ ತುಂಡನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮತ್ತು ಹುಳಕಡ್ಡಿ ಪೀಡಿತ ಭಾಗಕ್ಕೆ ಈ ಪೇಸ್ಟ್ ಅನ್ನು ಅನ್ವಯಿಸಿ. ಈ ಪೇಸ್ಟ್ ಒಣಗಿದಾಗ, ಅದರ ಮೇಲೆ ಮತ್ತೊಂದು ಪದರ ಅರಿಶಿನ ಪೇಸ್ಟ್ ಅರಿಶಿನ ಪೇಸ್ಟ್ ಅನ್ನು ಅನ್ವಯಿಸಿ.
ಚೆಂಡು ಹೂವು
ಈ ಹೂವಿನಲ್ಲಿ ಹಲವಾರು ವಿಧದ ಆಂಟಿ ಫಂಗಲ್ ಆಂಟಿ-ಅಲರ್ಜಿಕ್ ಗುಣಲಕ್ಷಣಗಳಿದ್ದು, ಇದು ಚರ್ಮ ತುರಿಕೆಯಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನೀವು ದೀರ್ಘಕಾಲದಿಂದ ತುರಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚೆಂಡು ಹೂವಿನ ಪೇಸ್ಟನ್ನು ಬಳಸಬಹುದು.
ಶ್ರೀಗಂಧ
ಇದರಲ್ಲಿ ತುರಿಕೆಯನ್ನು ಶಮಗೊಳಿಸುವ ಗುಣಗಳಿದ್ದು, ಇದು ದೇಹದಿಂದ ತುರಿಕೆ ಸಮಸ್ಯೆಯನ್ನು ತೆಗೆದುಹಾಕುತ್ತದೆ, ಜೊತೆಗೆ ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ತುರಿಕೆ ಇರುವ ಜಾಗಕ್ಕೆ ಶ್ರೀಗಂಧದ ಪೇಸ್ಟ್ ಹಚ್ಚಿ.
ತೆಂಗಿನ ಎಣ್ಣೆ
ಇದು ರಿಂಗ್‌ ವರ್ಮ್‌ ಸೋಂಕುಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ, ನಂತರ ಅದನ್ನು ನೇರವಾಗಿ ರಿಂಗ್‌ ವರ್ಮ್‌ ಆದ ಜಾಗಕ್ಕೆ ಹಚ್ಚಿ. ಇದು ಬೇಗನೆ ಚರ್ಮಕ್ಕೆ ಹೀರಿಕೊಳ್ಳುತ್ತದೆ. ಹೀಗೆ ಪ್ರತಿ ದಿನ ಕನಿಷ್ಠ ಮೂರು ಬಾರಿ ಹಚ್ಚಿ.
ಬೆಳ್ಳುಳ್ಳಿ
ಇದು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬೆಳ್ಳುಳ್ಳಿಯ 3-4 ಎಸಳುಗಳನ್ನು ತೆಗೆದುಕೊಂಡು ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ. ಇದನ್ನು ಸೋಂಕಾದ ಜಾಗದ ಮೇಲೆ ಉಜ್ಜಿ, 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನ ಹತ್ತಿ ಉಂಡೆಯಿಂದ ಅದ್ದಿ ರಿಂಗ್‌ ವರ್ಮ್‌ ಆಗಿರುವ ಜಾಗಕ್ಕೆ ಹಚ್ಚಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ದಿನಕ್ಕೆ 2-3 ಬಾರಿ ಹೀಗೆ ಮಾಡಿ.
​ಆಪಲ್ ಸೈಡರ್ ವಿನೆಗರ್
ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಇದು ರಿಂಗ್‌ ವರ್ಮ್‌ ತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ಹತ್ತಿ ಉಂಡೆ ತೆಗೆದುಕೊಂಡು, ಅದನ್ನು ಆಪಲ್ ಸೈಡರ್ ವಿನೆಗರ್‘ನಲ್ಲಿ ನೆನೆಸಿ. ನಂತರ ನಿಮ್ಮ ಚರ್ಮದ ಮೇಲೆ ಈ ಕಾಟನ್ ಬಾಲ್ ಬ್ರಷ್ ಮಾಡಿ. ದಿನಕ್ಕೆ ಹೀಗೆ ಮೂರು ಬಾರಿ ಮಾಡಿ.