Tap to Read ➤

ಈ ರಾಶಿಯವರಿಗೆ ಮುತ್ತಿನ ಹರಳು ಒಳಿತಲ್ಲ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುತ್ತುಗಳನ್ನು ಚಂದ್ರನ ಸೂಚಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಚಂದ್ರನ ಬಲವಾದ ಸ್ಥಾನವಿದ್ದರೆ, ವ್ಯಕ್ತಿಯ ಮನಸ್ಸನ್ನು ನಿಯಂತ್ರಿಸುವುದರ ಜೊತೆಗೆ ಆಲೋಚನಾ ಶಕ್ತಿಯನ್ನು ಬಲಪಡಿಸುತ್ತದೆ. ಆದರೆ, ಇದನ್ನು ಎಲ್ಲರೂ ಧರಿಸುವಂತಲ್ಲ. ಆ ರಾಶಿಗಳು ಹೀಗಿವೆ.
Shreeraksha Rao
ವ್ಯಕ್ತಿಯ ಮನಸ್ಸು ಹೆಚ್ಚು ಚಂಚಲವಾದಾಗ ಮತ್ತು ಕೋಪಗೊಂಡಾಗ, ಜ್ಯೋತಿಷಿಗಳು ಮುತ್ತುಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಆದರೆ, ಇದನ್ನು ತಪ್ಪು ವ್ಯಕ್ತಿ ಧರಿಸಿದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವೃಷಭ ರಾಶಿ:
 ಈ ರಾಶಿಯ ಅಧಿಪತಿ ಶುಕ್ರ. ಆದ್ದರಿಂದ ಈ ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು. ಈ ರಾಶಿಯ ಜನರು ಮುತ್ತುಗಳನ್ನು ಧರಿಸಿದರೆ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.
ಮಿಥುನ ರಾಶಿ:
ಈ ರಾಶಿಯ ಅಧಿಪತಿ ಬುಧ. ಆದ್ದರಿಂದ, ಈ ರಾಶಿಚಕ್ರದ ಜನರು ಸಹ ಮುತ್ತುಗಳನ್ನು ಧರಿಸಬಾರದು. ಇದನ್ನು ಧರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಗುರಿಯಿಂದ ನೀವು ವಿಚಲನಗೊಳ್ಳಬಹುದು
ಸಿಂಹ ರಾಶಿ:
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯ ಜನರ ಜಾತಕದಲ್ಲಿ ಹನ್ನೆರಡನೇ ಮನೆಯ ಅಧಿಪತಿ ಚಂದ್ರನಿರುತ್ತಾನೆ. ಇದನ್ನು ಧರಿಸುವುದರಿಂದ ಹಣದ ನಷ್ಟದೊಂದಿಗೆ ವೈವಾಹಿಕ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಧನು ರಾಶಿ:
ಈ ರಾಶಿಯ ಅಧಿಪತಿ ಗುರು. ಈ ರಾಶಿಯ ಜನರ ಜಾತಕದಲ್ಲಿ ಎಂಟನೇ ಮನೆಯ ಅಧಿಪತಿ ಚಂದ್ರನಾಗಿರುವುದರಿಂದ ಈ ರಾಶಿಚಕ್ರದ ಜನರು ಮುತ್ತು ರತ್ನಗಳನ್ನು ಧರಿಸಿದರೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಆಗುವುದು
ಕುಂಭ ರಾಶಿ:
 ಶನಿದೇವನ ಒಡೆತನದ ಈ ರಾಶಿಯ ಜನರು ಮುತ್ತು ರತ್ನಗಳನ್ನು ಧರಿಸಬಾರದು. ಏಕೆಂದರೆ ಇವರು ಮುತ್ತು ರತ್ನವನ್ನು ಧರಿಸಿದರೆ, ಅವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗಬಹುದು.
ರತ್ನಶಾಸ್ತ್ರದ ಪ್ರಕಾರ ಈ ರಾಶಿಯವರು ಮುತ್ತು ರತ್ನವನ್ನು ಧರಿಸಬಾರದು. ಈ ರಾಶಿಯವರು ಏನಾದರೂ ಮುತ್ತಿನ ಆಭರಣಗಳನ್ನು ಧರಿಸಿದ್ದರೆ, ಈಗಲೇ ತೆಗೆಯುವುದು ಉತ್ತಮ.