Tap to Read ➤

ಯುಗಾದಿ ಪಂಚಾಂಗ ಪ್ರಕಾರ 2022 ಮಿಥುನ ರಾಶಿಯ ವಾರ್ಷಿಕ ಫಲ

ಇಲ್ಲಿ ಮಿಥುನ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Reena TK
ಮಿಥುನ ರಾಶಿಯವರ ಅಧಿಪತಿ ಬುಧ. ಮೃಗಶಿರಾ ನಕ್ಷತ್ರ 3 ಮತ್ತು 4ನೇ ಪಾದ, ಆರಿದ್ರಾ ಹಾಗೂ ಪುನರ್ವಸು ನಕ್ಷತ್ರ1 ಮತ್ತು 2ನೇ ಪಾದ ಹೊಂದಿರುವವರು, ಇವರಿಗೆ ಆದಾಯ 11 ವ್ಯಯ 5 ಇದೆ. ಆದ್ದರಿಂದ ಆದಾಯ ನಿಮಗೆ ಈ ವರ್ಷ ತುಂಬಾ ಒಳ್ಳೆಯದಿದೆ. ಯೋಗ 2 ಹಾಗೂ ಅವಮಾನ 2 ಇದೆ.
ಆರ್ಥಿಕವಾಗಿಯೂ ತುಂಬಾ ಚೆನ್ನಾಗಿದೆ. 11ನೇ ಮನೆಯಲ್ಲಿ ರಾಹು ಇ
ರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಮತ್ತಷ್ಟು ಕಠಿಣ ಪರಿಶ್ರಮ ಹಾಕಿ. ಅಲ್ಲದೆ ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ.
ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಏಪ್ರಿಲ್‌ 2ನೇ ವಾರದಿಂದ ಫಲ ಸಿಗುವುದು.
ಕೌಟಂಬಿಕ ಜೀವನ ಚೆನ್ನಾಗಿರುತ್ತದೆ. ಮನೆಗೆ ಹೊಸ ವಸ್ತುಗಳನ್ನು ಖರೀದಿಸುವಿರಿ, ಮನೆಯಲ್ಲಿ ಶುಭ ಕಾರ್ಯ ನಡೆಯುವುದು.
ಈ ವರ್ಷ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು, ಒಳ್ಳೆಯ ಆಹಾರ ಸೇವಿಸಿ.
ಇನ್ನು ವ್ಯಾಪಾರ ಜೀವನದ ಬಗ್ಗೆ ನೋಡುವುದಾದರೆ ವ್ಯಾಪಾರಿಗಳಿಗೆ ಒಳ್ಳೆಯದಿದೆ. ಹೊಸ ವ್ಯಾಪಾರ ಪ್ರಾರಂಭಿಸಬಹುದು. ಉದ್ಯೋಗಿಗಳೂ ಪ್ರಗತಿಯನ್ನು ಕಾಣುತ್ತಾರೆ. ಈ ವರ್ಷ ಆಸ್ತಿ ಖರೀದಿಸುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ ಮಾಣಿಕ್ಯ, ಪಚ್ಚೆ ಶುಭ ಹರಳುಗಳು, ತಿಳಿ ಪಚ್ಚೆ ಶುಭ ಬಣ್ಣ ಪರಿಹಾರ ಶನೇಶ್ವರನ ಪೂಜಿಸಿ. ರಾಹು ಮತ್ತು ಕೇತು ದೋಷವಿರುವುದರಿಂದ ಬುಧವಾರದಂದು ರಾಹುಕಾಲದಲ್ಲಿ ಶಾಂತಿಯನ್ನು ಮಾಡಿಸಿ. ಅನಂತ ಪದ್ಮನಾಭನನ್ನು ಪೂಜಿಸಿ.