Tap to Read ➤

ಮೇಷ ರಾಶಿಯವರ ಯುಗಾದಿ ರಾಶಿಫಲ 2022

ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿ ಈ ಶುಭಕೃತ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:
Reena TK
ಮೇಷ ರಾಶಿಯವರ ಅಧಿಪತಿ ಕುಜನಾಗಿದ್ದಾನೆ. ಈ ಸಂವತ್ಸರದಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿಯನ್ನು ನೋಡುವುದಾದರೆ ಆದಯ 14 ಹಾಗೂ ವ್ಯಯ 14 ಇದೆ. ಅಂದರೆ ಎಷ್ಟು ಗಳಿಸುತ್ತಾರೋ ಅಷ್ಟೇ ಖರ್ಚಾಗುವುದು.
ಕೌಟಂಬಿಕ ಜೀವನದಲ್ಲಿ ಖುಷಿ-ಸಂತೋಷ ಇರುತ್ತದೆ. ಸಂತಾನ ಅಪೇಕ್ಷಿತ ದಂಪತಿ ಶುಭ ಸುದ್ದಿ ಪಡೆಯುವಿರಿ. ಯುವಕ-ಯುವತಿಯರಿಗೆ ಕಂಕಣ ಬಲ ಕೂಡಿ ಬರುವುದು. ಸಾಮಾಜಿಕವಲಯದಲ್ಲೂ ಒಳ್ಳೆಯ ಸ್ಥಾನಮಾನ ಪಡೆಯುತ್ತೀರಿ.
ಶನಿಯ ಕೃಪೆ ಇರುವುದರಿಂದ ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಅಲ್ಲದೆ ಹೊಸ ಅವಕಾಶಗಳು ಕೂಡ ಹೆಚ್ಚಾಗಿ ಬರುವುದು.. 2022ರ ಮಧ್ಯಭಾಗದಲ್ಲಿ ಕೆಲವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ.
ಇವರಿಗೆ ರಾಜಭೋಗ 3 ಇದೆ, ಅವಮಾನ 6 ಇದೆ. ಹಾಗೆಯೇ ಅಶ್ವಿನಿ ನಾಲ್ಕು ಪಾದ, ಭರಣಿ ನಾಲ್ಕು ಪಾದ, ಕೃತಿಕಾ 1 ಪಾದ ಹೊಂದಿದೆ. ಇದರಿಂದಾಗಿ ಜೀವನ ಸಕಾರಾತ್ಮವಾಗಿರುತ್ತದೆ.
ವಿದ್ಯಾರ್ಥಿಗಳ ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆ ಉಂಟಾದರೂ ನಂತರ ಒಳ್ಳೆಯ ಫಲ ಸಿಗಲಿದೆ.ಏಪ್ರಿಲ್ 13ಕ್ಕೆ ಗುರು ಗ್ರಹದ ಸಂಚಾರವಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚುವುದು.
ಆರೋಗ್ಯ 1 ಅನಾರೋಗ್ಯ 6 ತೋರಿಸುತ್ತಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಯೋಗ, ಪ್ರಾಣಯಾಮ ನಿಮ್ಮ ದಿನಚರಿಯಲ್ಲಿದ್ದರೆ ಒಳ್ಳೆಯದು.
ನಿಮ್ಮ ಅದೃಷ್ಟದ ಬಣ್ಣ: ಕೆಂಪು ಪರಿಹಾರ ಶುಕ್ರ ಮೀನದಲ್ಲಿರುವಾಗ ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆಯು. ಪ್ರತಿನಿತ್ಯ ದಾಳಿಂಬೆ ಸೇವಿಸಿ