Tap to Read ➤

ಮೀನ ರಾಶಿ: 2022 ಯುಗಾದಿ ವಾರ್ಷಿಕ ಭವಿಷ್ಯ

ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಮೀನ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Meghashree Devaraju
ಮೀನ ರಾಶಿಯ ಪದವೀಧರರು, ಉದ್ಯೋಗ ಹುಡುಕುತ್ತಿರುವವರು ಅಥವಾ ನಿರುದ್ಯೋಗಿಗಳಿಗೆ ಖಂಡಿತ ಈ ವರ್ಷ ಉತ್ತಮ ಫಲಿತಾಂಶ ಸಿಗಲಿದೆ.  ಕಠಿಣ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಿ, ಸಂದರ್ಭಗಳನ್ನು ಶಾಂತ ರೀತಿಯಲ್ಲಿ ಎದುರಿಸಲು ಪ್ರಯತ್ನಿಸಿ.
ಮೀನ ರಾಶಿಯವರಿಗೆ ಆರ್ಥಿಕ ಕ್ಷೇತ್ರರಲ್ಲಿ ಉತ್ತಮವಾಗಿದೆ, ತೆರಿಗೆ ಬಗ್ಗೆ ಗಮನಹರಿಸಿ. ಹೂಡಿಕೆಗೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳು ಫಲ ನೀಡಲಿದೆ.
ಮೀನ ರಾಶಿಯವರ ವೈವಾಹಿಕ ಜೀವನದಲ್ಲಿ ನಿಮಗೆ ಕುಟುಂಬದೊಂದಿಗೆ ಸಮಯ ಕಳೆಯಲು ಆಗುವುದಿಲ್ಲ ಕುಟುಂಬ ಸದಸ್ಯರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಮಕ್ಕಳನ್ನು ನಿರ್ಲಕ್ಷಿಬೇಡಿ.
ಮೀನ ರಾಶಿಯ ವ್ಯಾಪಾರಿಗಳಿಗೆ ಲಾಭದಾಯಕ ವರ್ಷ, ಏಪ್ರಿಲ್‌ ತಿಂಗಳಲ್ಲಿ ಹೊಸ ಉದ್ಯಮ ಆರಂಭಿಸಬಹುದು. ವರ್ಷದ ಆರಂಭಲ್ಲಿ ಜನರಿಯಿಂದ ಮಾರ್ಚ್‌ವರೆಗೆ ಹೂಡಿಕೆ ಮಾಡಬೇಡಿ. ವ್ಯಾಪಾರಕ್ಕೆ ಸಂಬಂಧಿಸಿದ ಕಾನೂನು ವಿಷಯಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಿ.
ಮೀನ ರಾಶಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅತ್ಯುತ್ತಮ ಸಮಯ. ವಿದೇಶಕ್ಕೆ ಹೋಗಲು ಬಯಸುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅತ್ಯುನ್ನತ ಯಶಸ್ಸು ಸಿಗಲಿದೆ.
ಮೀನ ರಾಶಿಯ 12ನೇ ಮನೆಯಲ್ಲಿ ಗುರು ಇರುವುರಿಂದ ಹೆಚ್ಚು ಖರ್ಚು ಮಾಡುತ್ತೀರಿ, ಹಾಗೆಯೇ 11ನೇ ಮನೆಯಲ್ಲಿ ಶನಿಯು ಇರುವುರಿಂದ ಉತ್ತಮ ಹಣ ಹರಿವು ಸಹ ಇರುತ್ತೆ. ದೀರ್ಘಕಾಲದ ಸಾಲದಿಂದ ಮುಕ್ತಿ ಪಡೆಯುತ್ತೀರಿ,  ಹೊಸದಾಗಿ ಹೂಡಿಕೆ ಮಾಡಲು ಈ ಸಮಯ ಶುಭ.
ಮೀನ ರಾಶಿಯವರಿಗೆ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರಲಿದೆ. ಜೀರ್ಣಕ್ರಿಯೆ, ಯಕೃತ್‌, ವೈರಲ್‌, ಸೋಂಕು ಎದುರಿಸಬಹುದು. ಉತ್ತಮ ಆಹಾರ ಪದ್ಧತಿಯಿಂದ ಸಮಸ್ಯೆಯಿಂದ ದೂರ ಇರಬಹುದು. ತಾಳ್ಮೆ ಮತ್ತು ಸಹನೆಯಿಂದಿದ್ದರೆ ಒಳಿತು.
ಮೀನ ರಾಶಿಯವರಿಗೆ ವಾಹನ ಖರೀದಿ, ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಲಾಭ ಇದೆ. ಮೀನ ರಾಶಿಯ ಅದೃಷ್ಟ ಸಂಖ್ಯೆ 12, 4 ಮತ್ತು 3.