Tap to Read ➤

ಮೇ17-ಜೂನ್‌27: ಮಂಗಳ ಗ್ರಹ ಗೋಚಾರ ಫಲ

ಮೇ 17ಕ್ಕೆ ಮಂಗಳ ಗ್ರಹ ಮೀನ ರಾಶಿಗೆ ಸಂಚರಿಸುತ್ತದೆ, ಜೂನ್‌ 27ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವ
Reena TK
ಮೇಷ ರಾಶಿ: ಈ ಸಮಯಲ್ಲಿ ಆರೋಗ್ಯ, ವೃತ್ತಿಜೀವನದ ಬಗ್ಗೆ ಹುಷಾರಾಗಿರಿ
ವೃಷಭ ರಾಶಿ: ವೃತ್ತಿ ಜೀವನ, ಪ್ರೇಮ, ವೈವಾಹಿಕ ಜೀವನ, ಆರ್ಥಿಕ ಸ್ಥಿತಿ ಈ ಎಲ್ಲಾ ವಿಷಯದಲ್ಲೂ ಈ ಅವಧಿ ನಿಮಗೆ ಅನುಕೂಲಕರವಾಗಿದೆ
ಮಿಥುನ ರಾಶಿ: ವೃತ್ತಿ ಜೀವನಕ್ಕೆ ಅನುಕೂಲಕರ, ವೈಯಕ್ತಿಕ ಜೀವನದಲ್ಲಿ ತಾಳ್ಮೆ ಮುಖ್ಯ, ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿ
ಕರ್ಕ ರಾಶಿ: ಈ ಅವಧಿ ಅನುಕೂಲಕರವಾಗಿದೆ,ಹೂಡಿಕೆ ಮಾಡಲು ಬಯಸುವುದಾದರೆ ಈ ಸಮಯ ಸೂಕ್ತವಾಗಿದೆ.
ಸಿಂಹ ರಾಶಿ: ಮಂಗಳ ಸ್ಥಾನದಿಂದಾಗಿ ನಿಮಗೆ ಯೋಗದ ಸಮಯ, ಆದರೆ ಆರೋಗ್ಯದ ಬಗ್ಗೆ ಜೋಪಾನ
ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ಮೂರನೇಯವರು ಹಸ್ತಕ್ಷೇಪ ಮಾಡಲು ಬಿಡದಿರಿ, ಪ್ರಯಾಣ ಮಾಡುವಾಗ ನಿಮ್ಮ ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆ.
ತುಲಾ ರಾಶಿ: ವೈಯಕ್ತಿಕ ಜೀವನದಲ್ಲಿ ಜಾಗ್ರತೆವಹಿಸಿ, ವೃತ್ತಿ ಹಾಗೂ ಆರ್ಥಿಕ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ
ವೃಶ್ಚಿಕ ರಾಶಿ: ಹಣಕಾಸಿ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಆದರೆ ಹೂಡಿಕೆ ಮಾಡುವಾಗ ಜಾಗ್ರತೆ. ವೈಯಕ್ತಿಜ ಜೀವನದಲ್ಲಿ ಖುಷಿ ಇರುತ್ತದೆ.
ಧನು ರಾಶಿ: ಭೂಮಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ, ಆದರೆ ಕೆಲಸದಲ್ಲಿ ನಿಮ್ಮ ವಿರುದ್ಧ ನಡೆಯುವ ಒಳ ರಾಜಕೀಯ ಬಗ್ಗೆ ಎಚ್ಚರವಹಿಸಿ
ಮಕರ ರಾಶಿ: ಈ ಅವಧಿ ನಿಮಗೆ ಒಳ್ಳೆಯದಿದೆ, ಆರೋಗ್ಯ ಸಮಸ್ಯೆ ಇರುವವರು ಚೇತರಿಕೆ ಕಾಣಬಹುದು, ಹೊಸ ಉದ್ಯೋಗ ಹುಡುಕುತ್ತಿರುವವರಿಗೂ ಸಮಯ ಅನುಕೂಲಕರ.
ಕುಂಭ ರಾಶಿ: ಈಗ ನಿಮ್ಮ ಶ್ರಮಕ್ಕೆ ಭವಿಷ್ಯದಲ್ಲಿ ಫಲ ಸಿಗಲಿದೆ, ಕೌಟಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು, ತಾಳ್ಮೆಯಿಂದ ನಿರ್ವಹಿಸಿ, ಹಾಗೂ ಆರೋಗ್ಯದ ಬಗ್ಗೆ ಜಾಗ್ರತೆ
ಮೀನ ರಾಶಿ: ಮಂಗಳನ ಮೀನ ರಾಶಿಗೆ ಪ್ರವೇಶಿಸಿರುವುದರಿಂದ ನಿಮಗೆ ರಾಜ ಯೋಗ ಸೃಷ್ಟಿಸುತ್ತದೆ