Tap to Read ➤

ಭಾವನಾ ಮೆನನ್‌: IFFKನಲ್ಲಿ ಅವರ ಲುಕ್ ಸೃಷ್ಟಿಸಿದೆ ಟ್ರೆಂಡ್

ಭಾವನಾ ಮನೆನ್‌.... ಇವರು ಇಂಟರ್‌ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ಆಫ್‌ ಕೇರಳ ಕಾರ್ಯಕ್ರಮಕ್ಕೆ ಬಂದ ಫೋಟೋಗಳು ವೈರಲ್ ಆಗಿವೆ.
Reena TK
ಆ ಕಾರ್ಯಕ್ರಮಕ್ಕೆ ಅವರನ್ನು ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ. ಅವರ ಲುಕ್‌ ಕೂಡ ಅವರಂತೆಯೇ ಫೈರ್‌ ಆಗಿದೆ.
ಇದೀಗ ಅವರ ಆ ಸೂಪರ್‌ ಲುಕ್‌ ನೆಟ್ಟಿಗರ ಮನ ಗೆದ್ದಿದೆ.
ಆತ್ಮವಿಶ್ವಾಸದಿಂದ ಭಾವನ ಬೀರಿದ ಆ ನಗು ಅವರಂತೆಯೇ ಕಷ್ಟ ಅನುಭವಿಸಿದ ಎಷ್ಟೋ ಹೆಣ್ಮಕ್ಕಳಿಗೆ ಮನೋಧೈರ್ಯ ತುಂಬುವಂತಿದೆ.
IFFK ಕಾರ್ಯಕ್ರಮಕ್ಕೆ ಆಗಮಿಸಿದ ಭಾವನಾ ಲುಕ್‌ ನೋಡುಗರ ಗಮನ ಸೆಳೆಯುವಂತಿತ್ತು.
ಕೇರಳ ಸೀರೆಗೆ ಮ್ಯಾಚ್‌ ಆಗುವಂಥ ಹೇರ್‌ಸ್ಟೈಲ್‌, ಮುಡಿಗೆ ಮಲ್ಲಿಗೆ, ಕಿವಿಗೆ ಮುತ್ತಿನ ಕಿವಿಯೋಲೆ, ಹಣೆಗೆ ಕೇರಳಿಗರು ಹಾಕುವಂಥ ಅಡ್ಡ ನಾಮ ಇವೆಲ್ಲಾ ಅವರ ಅಂದಕ್ಕೆ ಮತ್ತಷ್ಟು ಕಳೆ ನೀಡಿದೆ.
2017ರ ನಂತರ ಅವರ ಬದುಕಿನ ಒಂದೊಂದು ದಿನವೂ ಹೋರಾಟ, ಅವರ ಹೋರಾಟಕ್ಕೆ ಅವರ ಪತಿ, ಮನೆಯವರು, ಸ್ನೇಹಿತರು, ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ.
ಆ ಘಟನೆ ಬಳಿಕ ಮಲೆಯಾಳಂ ಸಿನಿಮಾದಲ್ಲಿ ನಟಿಸಿರಲಿಲ್ಲ, ಅಲ್ಲಿಯ ಕಾರ್ಯಕ್ರಮದಲ್ಲೂ ಕಾಣಿಸುತ್ತಿರಲಿಲ್ಲ,
ಇದೀಗ IFFKಯಲ್ಲಿ ಭಾವನಾ ಮೆನನ್ ಭಾಗವಹಿಸಿರುವ ಫೋಟೋಗಳು ತುಂಬಾನೇ ವೈರಲ್‌ ಆಗಿದೆ. ಅವರನ್ನು ಆ ಕಾರ್ಯಕ್ರಮದಲ್ಲಿ ನೋಡಿ ಅಭಿಮಾನಿಗಳಿಗೆ ತುಂಬಾನೇ ಖುಷಿ ನೀಡಿದೆ.