Tap to Read ➤

17 ಕೆಜಿ ಮೈ ತೂಕ ಇಳಿಸಿಕೊಂಡಿರುವ ಬ್ರಹ್ಮಗಂಟಿನ ಗೀತಾ ಭಟ್

ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬ್ರಹ್ಮಗಂಟಿನ ಗುಂಡಮ್ಮ ಖ್ಯಾತಿಯ ಗೀತಾ ಭಟ್ 17 ಕೆಜಿ ಮೈ ತೂಕ ಇಳಿಸಿಕೊಂಡಿದ್ದಾರೆ!
Reena TK
ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಅವರು ಕರ್ನಾಟಕದಲ್ಲಿ ಚಿರಪರಿಚಿತ. ಸೀರಿಯಲ್‌ ವೀಕ್ಷಕರಿಗೆ ಮಾತ್ರವಲ್ಲ ಸಿನಿ ಪ್ರಿಯರಿಗೂ ಇವರ ಪರಿಚಯ ಇದೆ.   ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ.
ಇವರು ಗುಂಡಮ್ಮ ಎಂದೇ ಖ್ಯಾತರಾಗಿದ್ದಾರೆ. ಅವರ ಮೈ ತೂಕ ತಕ್ಕ ಹಾಗೆಯೇ ಸೀರಿಯಲ್‌ನಲ್ಲಿ ಪಾತ್ರವಿರುವುದರಿಂದ ಜನರು ಕೂಡ ಅವರನ್ನು ಗುಂಡಮ್ಮ ಹಾಗೆಯೇ ಇಷ್ಟಪಟ್ಟಿದ್ದಾರೆ.
ಅತೀ ಹೆಚ್ಚಿನ ಮೈ ತೂಕದಿಂದಾಗಿ ಗೀತಾ ಸಾಕಷ್ಟು ಅವಮಾನ, ನೋವು ಕೂಡ ಅನುಭಿಸಿದ್ದಾರೆ.
ಇದೀಗ ತೂಕ ಇಳಿಕೆಗಾಗಿ ಟ್ರೈನರ್‌ನಿಂದ ಟ್ರೈನಿಂಗ್‌ ತೆಗೆದುಕೊಳ್ಳುತ್ತಿದ್ದು ಅದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಾಕುತ್ತಿರುತ್ತಾರೆ. ಈಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಇದೀಗ ಬರೋಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು ಇನ್ನೂ ತೂಕ ಇಳಿಸಿಕೊಳ್ಳಬೇಕು, ಅದಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಅವರ ಜಿಮ್‌ ಟ್ರೈನರ್‌ ಹೇಳುವಂತೆ ಅವರಿಗೆ ಫುಲ್‌ ಬಾಡಿ ವರ್ಕೌಟ್‌ ಹೆಚ್ಚಾಗಿ ಮಾಡಿಸುತ್ತಿದ್ದಾರಂತೆ. ಗೀತಾ ಭಾರತಿ ಭಟ್‌ ಕೂಡ ತುಂಬಾ ಖುಷಿ-ಖುಷಿಯಾಗಿ ವೇಯ್ಟ್ ಲಾಸ್‌ ಜರ್ನಿ ಮುಂದುವರೆಸಿದ್ದಾರೆ.
ಮೈ ತೂಕ ಹೆಚ್ಚಾದರೆ ಒಂದು ರೀತಿ ಆತ್ಮವಿಶ್ವಾಸ ಕುಗ್ಗುವುದು, ಆದರೆ ಸರಿಯಾದ ಮೈಕಟ್ಟು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತೆ. ಗೀತಾ ಅವರಿಗೆ ಕಡಿಮೆಯಾಗುತ್ತಿರುವ ಮೈ ತೂಕ ಖುಷಿ ತಂದಿದೆ.