Tap to Read ➤

ಸಿಪ್ಪೆ ಎಂದು ತಾತ್ಸಾರ ಬೇಡ...

ಕೆಲವು ವರದಿಯ ಪ್ರಕಾರ ಸಿಪ್ಪೆಗಳಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟಬಹುದು. ಕೆಲವು ಹಣ್ಣು ಹಾಗೂ ತರಕಾರಿಗಳ ಸಿಪ್ಪೆ ಮತ್ತು ಬೀಜಗಳನ್ನು ಎಸೆಯುವುದರಿಂದ ಆರೋಗ್ಯಕರ ವಸ್ತುವನ್ನು ಎಸೆಯುತ್ತಿದ್ದೇವೆ ಎನ್ನುವುದನ್ನು ನಾವು ಅರಿಯಬೇಕು.
Preethin Veigas
ಕಲ್ಲಂಗಡಿಯ ತೊಗಟೆಯು ಅಮೈನೋ ಆಮ್ಲದಿಂದ ಸಮೃದ್ಧವಾಗಿದೆ. ಇದು ರಕ್ತನಾಳದ ಹಿಗ್ಗುವಿಕೆಗೆ ಸಹಾಯವಾಗುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಣೆಗೊಂಡು ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ.
ಇದು ದೇಹದಲ್ಲಿರುವ ಹಾನಿಕಾರಕ ರಾಡಿಕಲ್ಸ್‌ನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಸ್ಟ್ರಾಬೆರ್ರಿ ಎಲೆಗಳ ಕಸಾಯ ಮಾಡಿ ಕುಡಿಯುವುದರಿಂದ ದೇಹವು ಆರೋಗ್ಯ ಪೂರ್ಣವಾಗಿರುತ್ತದೆ.
ಕಾರ್ನ್ ಕಾಬ್ಸ್‌ಗಳು ಕ್ಯಾಲೋರಿಗಳನ್ನು ಕಡಿಮೆಮಾಡುತ್ತವೆ. ಮಧುಮೇಹಕ್ಕೆ, ಕಣ್ಣಿನ ಆರೋಗ್ಯ ಕಾಪಾಡಲು, ಹೃದಯ ನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಂಬೆ ಸಿಪ್ಪೆಯು ಫೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನು ಸಿಟ್ರಿಕ್ ಹಣ್ಣುಗಳ ಜೊತೆಗೆ ಅಥವಾ ಜೇನುತುಪ್ಪ ಮತ್ತು ಮೊಸರು ಮಿಶ್ರಣದೊಂದಿಗೆ ಸೇವಿಸಬೇಕು.
ಕುಂಬಳಕಾಯಿ ಬೀಜದಲ್ಲಿ ಒಮೆಗಾ-3, ಸತು, ಮೆಗ್ನೀಸಿಯಮ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಉರಿಯೂತ, ಹೃದಯ ರೋಗ, ಕ್ಯಾನ್ಸರ್, ಸಂಧಿವಾತದ ಅಪಾಯವನ್ನು ತಡೆಯುತ್ತದೆ.
ಸೌತೆಕಾಯಿ ಸಿಪ್ಪೆ ಫೈಬರ್ ಗುಣದ ಉತ್ತಮ ಮೂಲ ಎಂದು ಹೇಳಲಾಗುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್ ಆಗದಂತೆ ತಡೆಯುವುದು.
ಬೀಟ್ರೂಟ್ ಸಿಪ್ಪೆ  ಹುರಿದು ಅಥವಾ ಸೂಪ್ ಮಾಡಿ ಕುಡಿಯಬಹುದು. ಇದರಿಂದ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಅಂಶವು ಹೆಚ್ಚುವುದು.
ಕಿತ್ತಳೆ ಸಿಪ್ಪೆಯು ಫೈಬರ್, ವಿಟಮಿನ್ ಮತ್ತು ಫ್ಲವೋನಾಯಿಡ್‍ಗಳ ಶಕ್ತಿಯಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತನಾಳಗಳ ರಕ್ಷಣೆ ಮತ್ತು ದೇಹದಲ್ಲಿ ಕಾಣಿಸಿಕೊಂಡ ಉರಿಯೂತಗಳ ನಿವಾರಣೆಗೆ ಸಹಾಯ ಮಾಡುತ್ತದೆ.