Tap to Read ➤

ಮಹಿಳೆಯರ ಮೂಳೆ ಸದೃಢವಾಗಿಡುವ ಆಹಾರಗಳು

ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಅದು ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅವಶ್ಯಕವಾಗಿದೆ. ಆದರೆ, ಅನೇಕ ಮಹಿಳೆಯರಿಗೆ ಹಾಲು ಕುಡಿಯಲು ಇಷ್ಟವಾಗುವುದಿಲ್ಲ. ಆಗ ಮೂಳೆ ಸಂಬಂಧಿತ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿ ಹಾಲಿನ ಬದಲು ಇವುಗಳನ್ನು ಸೇವಿಸಿ:
Shreeraksha Rao
ಬೀನ್ಸ್:
ಬೀನ್ಸ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಅರ್ಧ ಕಪ್ ಬೇಯಿಸಿದ ಬೀನ್ಸ್ 40 ಮಿ.ಗ್ರಾಂಗಳಷ್ಟು ಕ್ಯಾಲ್ಸಿಯಂ ಒದಗಿಸುತ್ತದೆ. ಜೊತೆಗೆ ಅರ್ಧ ಕಪ್ ಬಿಳಿ ಬೀನ್ಸ್ 81 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಓಟ್ ಮೀಲ್:
ಓಟ್ ಮೀಲ್ ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಕ್ಯಾಲ್ಸಿಯಂ ಪೂರಕಗಳನ್ನು ಪೂರೈಸಲು ಓಟ್ ಮೀಲ್ ನ್ನು ಬದಲಿಯಾಗಿ ಬಳಸಬಹುದು. ಒಂದು ಬೌಲ್ ಓಟ್ ಮೀಲ್ ನಲ್ಲಿ 100 ಮಿಲಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.
ಕಿತ್ತಳೆ:
ಕಿತ್ತಳೆಯು ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅನ್ನು ಒಂದೇ ಸಮಯದಲ್ಲಿ ನೀಡುವುದು. ಒಂದು ಕಿತ್ತಳೆ (150 ಗ್ರಾಂ) ಸುಮಾರು 60 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.
ಸೋಯಾ ಹಾಲು:
 ನಿಮಗೆ ಹಾಲು ಇಷ್ಟವಿಲ್ಲದಿದ್ದರೆ, ಸೋಯಾ ಹಾಲು ನಿಮಗೆ ಉತ್ತಮ ಆಯ್ಕೆಯಾಗಿದೆ. ಸೋಯಾ ಹಾಲು ಸಾಮಾನ್ಯ ಗ್ಲಾಸ್ ಹಾಲಿಗಿಂತ ಹೆಚ್ಚು ಪ್ರೋಟೀನ್ ಹೊಂದಿರುತ್ತದೆ.
ಹಸಿರು ಸೊಪ್ಪು:
ಹಸಿರು ಸೊಪ್ಪು, ತರಕಾರಿಗಳಲ್ಲಿ 100 ಮಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಕಂಡುಬರುತ್ತದೆ. ಇವುಗಳನ್ನು ತಿನ್ನುವುದು ಕ್ಯಾಲ್ಸಿಯಂ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಎಳ್ಳು:
ಒಂದು ಟೀಚಮಚ ಎಳ್ಳು 88 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಕೂಡ ಅಧಿಕವಾಗಿದ್ದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.
ಪನ್ನೀರ್:
ಇದು ಸಾಮಾನ್ಯವಾಗಿ ಹೆಚ್ಚಿನರಿಗೆ ತಿಳಿದಿರುವ ಹಾಲಿನ ಪರ್ಯಾಯ ವಸ್ತು. ಒಂದೂವರೆ ಕಪ್ ಪನ್ನೀರ್ 861 ಮಿಲಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ.