Tap to Read ➤

ಕಲರ್ ಸೈಕೋಲಾಜಿ: ನಿಮ್ಮ ಇಷ್ಟದ ಬಣ್ಣ ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ

ನಾವು ಇಷ್ಟ ಪಡುವ ಬಣ್ಣಕ್ಕೂ ನಮ್ಮ ಭಾವನೆಗಳಿಗೂ ಸಂಬಂಧವಿದೆಯಂತೆ. ಈ ಕುರಿತು 2010, 2014, 2015 ಮತ್ತು 2019ರಲ್ಲಿ ಕಲರ್‌ ಸೈಕೋಲಾಜಿ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನಗಳು ಯಾವ ಬಣ್ಣ ನಮ್ಮ ಕುರಿತು ಏನು ಹೇಳಿದೆ ಎಂದು ನೋಡಿ:
Reena TK
ಕೆಂಪು ಕೆಂಪು ಎಂಬುವುದು ಬೋಲ್ಡ್ ಬಣ್ಣ, ಇದು ಕುತೂಹಲ, ತಾಳ್ಮೆ, ಅಪಾಯ, ಸಾಹಸ, ಶಕ್ತಿ ಹಾಗೂ ಹೋರಾಟವನ್ನು ಸೂಚಿಸುತ್ತದೆ. ನೀವು ಕೆಂಪು ಬಣ್ಣ ಇಷ್ಟ ಪಡುವವರಾದರೆ ನಿಮ್ಮಲ್ಲಿ ಈ ಗುಣಗಳಿರುತ್ತದೆ * ಬೋಲ್ಡ್ * ಸಾಹಸ ಪ್ರಿಯರು * ಧೈರ್ಯಶಾಲಿಗಳು * ಕೆಲವೊಮ್ಮೆ ಆಲೋಚಿಸದೆ ಯಾವುದೋ ಕಾರ್ಯಕ್ಕೆ ಮುಂದಾಗುತ್ತಾರೆ *ಬೇರೆಯವರಿಗೆ ಇವರೆಂದರೆ ಸ್ವಲ್ಪ ಭಯವಿರುತ್ತೆ.
ಕಿತ್ತಳೆ ಆರೇಂಜ್‌ ಬಣ್ಣ ಬೇಗನೆ ಆಕರ್ಷಿಸುತ್ತದೆ, ಇದು ರೆಡ್‌ನಂತೆ ಬೋಲ್ಡ್ ಅಲ್ಲ, ಆರೇಂಜ್‌ ಇಷ್ಟಪಡುವವರ ವ್ಯಕ್ತಿತ್ವ ಈ ರೀತಿ ಇರುತ್ತೆ * ತಮಾಷೆಯ ಗುಣದವರು * ಬೇರೆಯವರ ಜೊತೆ ಬೇಗನೆ ಬೆರೆಯುತ್ತಾರೆ * ಅಕ್ಕರೆ ತೋರುತ್ತಾರೆ * ತುಂಬಾ ಮಾತನಾಡುತ್ತಾರೆ * ತನ್ನ ಸುತ್ತ ಇರುವವರು ಖುಷಿಯಾಗಿರುವಂತೆ ಮಾಡುತ್ತಾರೆ * ಪಾರ್ಟಿಗಳೆಂದರೆ ಇಷ್ಟ * ಕೆಲಸದ ಬಗ್ಗೆ ಶ್ರದ್ಧೆ ಜಾಸ್ತಿ
ನೀವು ಹಳದಿ ಬಣ್ಣವನ್ನು ಇಷ್ಟಪಡುವವರ ವ್ಯಕ್ತಿತ್ವ ಈ ರೀತಿ ಇರುತ್ತದೆ * ಪಾಸಿಟಿವ್‌ ಸ್ಪಿರಿಟ್ *ಧನಾತ್ಮಕ ದೃಷ್ಟಿಕೋನವಿರುತ್ತದೆ * ಖುಷಿ-ಖುಷಿಯಾಗಿರಲು ಬಯಸುತ್ತಾರೆ * ಸಾಹಸ ಇಷ್ಟಪಡುತ್ತಾರೆ * ಅವರ ಜೊತೆ ಇರುವವರಿಗೆ ತುಂಬಾನೇ ಇಷ್ಟವಾಗುತ್ತಾರೆ * ಸುಂದರ ನಗುವಿನ ಒಡೆಯರಾಗಿರುತ್ತಾರೆ. ಇವರ ನಗು ಮುಖ ನೋಡುವಾಗಲೇ ಖುಷಿಯಾಗುವುದು.
ನೀಲಿ ಬಣ್ಣ ಇಷ್ಟಪಡುವವರ ವ್ಯಕ್ತಿತ್ವ ಇರುತ್ತದೆ: * ನಂಬಿಕೆಗೆ ಅರ್ಹರು * ನಿಯತ್ತಿನಿಂದ ಇರುತ್ತಾರೆ * ತುಂಬಾ ಸ್ಟ್ರಾಂಗ್‌ * ಯಾವುದೇ ಸವಾಲನ್ನ ಸಮರ್ಥವಾಗಿ ನಿಭಾಯಿಸುತ್ತಾರೆ.
ನೀವು ಹಸಿರು ಬಣ್ಣ ಇಷ್ಟಪಡುವವರಾದರೆ ನಿಮ್ಮ ವ್ಯಕ್ತಿತ್ವ ಈ ರೀತಿ ಇರುತ್ತದೆ * ಪ್ರಾಕ್ಟಿಕಲ್ * ತುಂಬಾ ಡವನ್‌ ಟು ಅರ್ಥ್ ಅಂದರೆ ಅಹಂಕಾರ ಪ್ರವೃತ್ತಿಯವರಲ್ಲ * ಸಲಹೆ ಕೊಡುವುದೆಂದರೆ ಇವರಿಗೆ ಪ್ರೀತಿ * ಬೇರೆಯವರಿಗೆ ಸಹಾಯ ಮಾಡುವುದೆಂದರೆ ಇವರಿಗೆ ತುಂಬಾ ಇಷ್ಟ * ಕೆಲಸದಲ್ಲಿ ಬರುವ ಸವಾಲುಗಳನ್ನು ನಿಭಾಯಿಸುತ್ತಾರೆ, ಇವರು ಔಟ್‌ ಆಫ್ ಬಾಕ್ಸ್ ಥಿಂಕ್‌ ಮಾಡುತ್ತಾರೆ.
ಯಾರು ನೇರಳೆ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೆ ಅವರಲ್ಲಿಈ ಗುಣಗಳಿರುತ್ತದೆ: * ತುಂಬಾ ಜಾಣರು * ತಮ್ಮದೇ ಗುರುತು ಮೂಡಿಸುವವರು *ವಿಭಿನ್ನವಾಗಿ ಯೋಚಿಸುತ್ತಾರೆ, ಆದ್ದರಿಂದಲೇ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. * ಕ್ರಿಯಾಶೀಲತೆಯಿಂದ ಗಮನ ಸೆಳೆಯುತ್ತಾರೆ.
ಪಿಂಕ್ ಯಾರು ಪಿಂಕ್‌ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೋ ಅವರು ಈ ಗುಣಗಳನ್ನು ಹೊಂದಿರುತ್ತಾರೆ * ತಮಾಷೆ ಇಷ್ಟಪಡುತ್ತಾರೆ * ಅವರ ಭಾವನೆಗಳನ್ನು ವ್ಯಕ್ತಪಡಿಸಲು ಭಯ ಪಡುವುದಿಲ್ಲ * ಪ್ರೀತಿ ಹಾಗೂ ಕುಟುಂಬಕ್ಕೆ ತುಂಬಾನೇ ಮಹತ್ವ ನೀಡುತ್ತಾರೆ. * ಕೆಲವೊಮ್ಮೆ ಆಲೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ
ಯಾರು ಬಿಳಿ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೋ ಅವರಲ್ಲಿ ಈ ಗುಣಗಳಿರುತ್ತದೆ * ತುಂಬಾ ಶಾಂತ ಸ್ವಭಾವದವರು * ಶಾಂತಿ ಪ್ರಿಯರು * ಮುಗ್ಧತೆ ಇರುತ್ತದೆ * ಕೆಲವೊಮ್ಮೆ ಆಲೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ * ಶುಚಿತ್ವ ಹಾಗೂ ಯಾವ ವಸ್ತು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು ಎಂದು ಬಯಸುತ್ತಾರೆ * ನಡೆದಿದ್ದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೂರುವವರಲ್ಲ
ಕಪ್ಪು ಬಣ್ಣ ಇಷ್ಟಪಡುವವರಲ್ಲಿ ಈ ಗುಣಗಳಿರುತ್ತೆ * ಬೋಲ್ಡ್ * ರಿಸ್ಕ್‌ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡಲ್ಲ * ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುತ್ತಾರೆ * ಸ್ವಲ್ಪ ಗಂಭೀರ ಸ್ವಭಾವದವರು * ನಾಯಕತ್ವದ ಗುಣದವರು * ನಂಬಿಕೆಗೆ ಅರ್ಹರು * ಬೇಗನೆ ಯಾರನ್ನೂ ಹಚ್ಚಿಕೊಳ್ಳುವುದಿಲ್ಲ