Tap to Read ➤

ಪಿರಿಯಡ್ಸ್ ಸಮಯದಲ್ಲಿ ಹೋಳಿಯಾಡ ಬಹುದೇ?

ರಂಗು-ರಂಗಿನ ಹೋಳಿ ಆಚರಣೆಗೆ ಮೂರೇ ದಿನ ಉಳಿದಿದೆ. ಈ ವರ್ಷ ಮಾರ್ಚ್ 18ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಹೋಳಿ ಎಂದರೆ ರಂಗಿನ ಹಬ್ಬ, ಈ ದಿನದಂದು ಪರಸ್ಪರ ರಂಗು-ರಂಗಿನ ಬಣ್ಣ ಎರಚಾಡುತ್ತಾ ನಲಿದು ಸಂಭ್ರಮಿಸುವ ದಿನ.
Reena TK
ಈ ಸಂತೋಷದ ದಿನವನ್ನು ಸೂಪರ್‌ ಆಗಿ ಸೆಲೆಬ್ರೇಟ್ ಮಾಡಬೇಕು, ಬಣ್ಣದ ಓಕುಳಿಯಲ್ಲಿ ಮಿಂದು ಏಳಬೇಕು ಎಂದು ಬಯಸಿರುವಾಗ ಪಿರಿಯಡ್ಸ್ ಅಥವಾ ಮುಟ್ಟಾದಾಗ ಗಾಳಿಯೂದಿದ ಬಲೂನ್‌ ಟಪ್‌ ಅಂತ ಒಡೆದಂತೆ ನಿರಾಸೆಯಾಗುವುದು. ಮಹಿಳೆಯರು ಮುಟ್ಟಾದಾಗ ಹೋಳಿಯಾಡಬಹುದೇ? ಎಂಬ ಪ್ರಶ್ನೆ ಕೆಲವರಲ್ಲಿ ಇರುತ್ತದೆ. ಖಂಡಿತ ಆಡಬಹುದು, ಆದರೆ
ಮುಟ್ಟಿನ ಕಿರಿಕಿರಿಯಿಲ್ಲದೆ ಹೋಳಿ ಸಂಭ್ರಮಿಸಲು ಬಯಸುವುದಾದರೆ ಈ ಟಿಪ್ಸ್ ಖಂಡಿತ ನಿಮಗೆ ಸಹಕಾರಿ
ನೀವು ಹೋಳಿಯಾಡುವಾಗ ಯಾವ ಬಟ್ಟೆ ಧರಿಸಬೇಕೆಂದು ಮೊದಲೇ ಪ್ಲ್ಯಾನ್ ಮಾಡಿ. ಹೋಳಿಯಾಡುವಾಗ ಎಕ್ಸ್ಟ್ರಾ ಬಟ್ಟೆ, ಪ್ಯಾಡ್‌, ಒಳ ಉಡುಪು ಇವುಗಳನ್ನು ಒಂದು ಬ್ಯಾಗ್‌ನಲ್ಲಿ ಕೊಂಡೊಯ್ಯಿರಿ.
ಟ್ಯಾಂಫೂನ್‌ ಅಥವಾ ಮೆನ್‌ಸ್ಟ್ರಲ್‌ ಕಪ್ ಬಳಸಿ. ಇದರಿಂದ ಯಾವುದೇ ಕಿರಿಕಿರಿಯಿಲ್ಲದೆ ಹೋಳಿ ಆಚರಣೆ ಮಾಡಬಹುದು.
ಸೈಜ್‌ ಸರಿಯಾದ ಗಾತ್ರದಲ್ಲಿ ಇಲ್ಲದಿದ್ದರೆ ಪ್ಯಾಡ್‌ ಜರಬಹುದು, ಆದ್ದರಿಂದ ಸರಿಯಾ ಗಾತ್ರದ ಪ್ಯಾಡ್‌ ಧರಿಸಿ, ಎರಡು ಪ್ಯಾಂಟೀಸ್ ಧರಿಸಿ. ಇದರಿಂದ ಪ್ಯಾಡ್‌ ಜಾರುತ್ತೆ ಎಂಬ ಭಯವಿರುವುದಿಲ್ಲ. ಅಲ್ಲದೆ ಬೇಗನೆ ಒಣಗುವ ಬಟ್ಟೆ ಧರಿಸಿ.
ನೈಸರ್ಗಿಕ ಬಣ್ಣಗಳಲ್ಲಿ ಹೋಳಿಯಾಡಿ, ಮುಟ್ಟಿನ ಸಮಯದಲ್ಲಿ ದೇಹ ಸ್ವಲ್ಪ ಸೂಕ್ಷ್ಮವಿರುತ್ತೆ, ಅಲರ್ಜಿ ಉಂಟಾಗಬಹುದು.
ಹೋಳಿಯಾಡಿದ ಮೇಲೆ ತಕ್ಷಣವೇ ಹದ ಬಿಸಿ ನೀರಿನಲ್ಲಿ ಸ್ನಾನ ಬಟ್ಟೆ ಒಣ ಬಟ್ಟೆ ಧರಿಸಿ, ಆಗ ಫ್ರೆಷ್ ಅನಿಸುವುದು, ಅಲ್ಲದೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸೋಂಕಿನ ಅಪಾಯ ಕಡಿಮೆ.