Tap to Read ➤

ಹೊಸ ಬದುಕಿಗೆ ಕಾಲಿಟ್ಟ ತೇಜಸ್ವಿನಿ ಪ್ರಕಾಶ್

ಕನ್ನಡದ ಚಿತ್ರ ನಟಿ, ಕಿರುತೆರೆ ನಟಿ , ಬಿಗ್‌ಬಾಸ್‌ 5ರ ಸ್ಪರ್ಧಿಯಾಗಿದ್ದ ತೇಜಸ್ವಿನಿ ಪ್ರಕಾಶ್‌ ತನ್ನ ಗೆಳೆಯ ಪಣಿ ವರ್ಮಾ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.
Reena TK
ಅರಿಶಿನ ಶಾಸ್ತ್ರದಲ್ಲಿ ಮದುಮಗಳು ತೇಜಸ್ವಿನಿ ಪ್ರಕಾಶ್‌
ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಸ್ನೇಹಿತರ ಜೊತೆ ತೇಜಸ್ವಿನಿ
ಹೊಸ ಬಾಳಿಗೆ ತೇಜಸ್ವಿನಿ ಪ್ರಯಣ
ಪಣಿ ವರ್ಮಾ ಹಾಗೂ ತೇಜಸ್ವಿನಿ ಅವರದ್ದು ಲವ್‌ ಕಂ ಅರೇಂಜ್ಡ್‌ ಮ್ಯಾರೇಜ್.
ಸ್ನೇಹಿತರಾಗಿದ್ದ ಈ ಜೋಡಿ ಸತಿ-ಪತಿಯಾಗಿ ಹೊಸ ಜೀವನಕ್ಕೆ ನಾಂದಿ, ಅವರ ಬದುಕು ಹಸನಾಗಿರಲಿ ಎಂಬುವುದು ನಮ್ಮ ಹಾರೈಕೆ.
ಮಾರ್ಚ್‌ 20ಕ್ಕೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು ಚಿತ್ರರಂಗದ, ಕಿರುತೆರೆಯ ಸ್ನೇಹಿತರು ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಕನ್ನಡ ಸಿನಿರಂಗ, ಕಿರುತೆರೆ, ಮಾಡೆಲಿಂಗ್‌ನಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ತೇಜಸ್ವಿನಿ ಕಿರುತೆರೆಯಲ್ಲಿ 'ನನ್ನರಸಿ ರಾಧೆ'ಯಲ್ಲಿ ನಟಿಸುತ್ತಿದ್ದಾರೆ.
ತೇಜಸ್ವಿನಿ ಮೆರೂನ್‌-ಗೋಲ್ಡನ್‌ ಕಾಂಬಿನೇಷನ್ ಸೀರೆಯಲ್ಲಿ ಹಾಗೂ ಮದುಮಗ ಕ್ರೀಮ್‌ ಬಣ್ಣ ಪಂಚೆಯಲ್ಲಿ ಮಿಂಚಿದರು.