Tap to Read ➤

ಯುಗಾದಿ ಪಂಚಾಂಗ ಪ್ರಕಾರ 2022 ಸಿಂಹ ರಾಶಿಯ ವಾರ್ಷಿಕ ಫಲ

ಸಿಂಹ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Shreeraksha Rao
ಸಿಂಹ ರಾಶಿಯವರ ಅಧಿಪತಿ ಸೂರ್ಯ. ಮಖ ನಕ್ಷತ್ರ 1, 2, 3 ಮತ್ತು 4ನೇ ಪಾದ, ಪುಬ್ಬಾ 1, 2, 3, 4 ಪಾದ ಹಾಗೂ ಉತ್ತರಾ ನಕ್ಷತ್ರ1 ಪಾದಗಳಲ್ಲಿದೆ. ಇವರಿಗೆ ಆದಾಯ 8 ವ್ಯಯ 14 ಇದೆ. ಯೋಗ 1 ಹಾಗೂ ಅವಮಾನ 5 ಇದೆ.
ಉದ್ಯೋಗಿಗಳಿಗೆ ಬಹಳ ಒಳ್ಳೆಯ ಫಲ ಸಿಗಲಿದೆ. ಯುಗಾದಿ ನಂತರ, ಪ್ರಮೋಷನ್ ಅಥವಾ ಮೇಲಾಧಿಕಾರಿಗಳಿಂದ ಮನ್ನಣೆ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವವರಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿವೆ. ದ್ವಿತೀಯಾರ್ಧದಲ್ಲಿ ಬಾಕಿ ಉಳಿದಂತ ಕೆಲಸಗಳು ಪೂರ್ಣಗೊಳ್ಳುತ್ತವೆ.
ವಿದ್ಯಾರ್ಥಿಗಳು ಸ್ವಲ್ಪ ಎಚ್ಚರಿಕೆಯಿಂದರಬೇಕು. ಮನಸ್ಸನ್ನು ಕೇಂದ್ರಿಕರೀಸಲು ಸಾಧ್ಯವಾಗುವುದಿಲ್ಲ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಉತ್ತಮ ಸಮಯ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಉತ್ತಮವಾಗಿರಲಿದೆ.
ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಆದರೆ, ಸಂಗಾತಿಯ ಆರೋಗ್ಯ ಏರುಪೇರಾಗಬಹುದು. ಸಂಬಂಧದಲ್ಲಿ ಇರುವ ಎಲ್ಲಾ ಮನಸ್ಥಾಪಗಳು ವರ್ಷದ ಅಂತ್ಯದಲ್ಲಿ ಪರಿಹಾರವಾಗುತ್ತವೆ. ಕೌಟಂಬಿಕ ಜೀವನ ಉತ್ತಮವಾಗಿರುತ್ತದೆ.
ಆರೋಗ್ಯ ಉತ್ತಮವಾಗಿರುತ್ತದೆ. ಆದರೆ, ರಾಹುವಿನ ಸ್ಥಾನ ಬದಲಾವಣೆಯಿಂದ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ನಿಮ್ಮ ಭವಿಷ್ಯ ಚೆನ್ನಾಗಿದ್ದು, ಸಣ್ಣ ಸಣ್ಣ ಸಮಸ್ಯೆಗಳು ಎದುರಾಗಲಿವೆ.
 ಅದೃಷ್ಟ ಸಂಖ್ಯೆ -2
ಪರಿಹಾರ:
 ರತ್ನಪುಷ್ಪಗಳನ್ನು ಸುರಿಸುವ ಮೂಲಕ ಸೂರ್ಯನಿಗೆ ನೀರನ್ನು ಅರ್ಪಿಸಿ.