Tap to Read ➤

ಜೇನು ಅಪ್ಪಟವೇ ಅಥವಾ ಕಲಬೆರಕೆಯೇ? ಹೀಗೆ ಪರೀಕ್ಷಿಸಿ

ಈ ಜೇನಿನ ಸೇವನೆಯಿಂದ ಸ್ಥೂಲಕಾಯ ಹೆಚ್ಚುವುದು, ಹೃದದ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಜೇನು ಅಪ್ಪಟವೋ ಎಂದು ಖಾತ್ರಿ ಪಡಿಸಿಕೊಳ್ಳಲು ಹೀಗೆ ಮಾಡಿ....
Preethin Veigas
ಒಂದು ಲೋಟ ನೀರಿನಲ್ಲಿ ಜೇನು ತುಂಬಿದ ಈ ಚಮಚವನ್ನು ಕಲಕದೇ ನೇರವಾಗಿ ನೀರಿನಲ್ಲಿ ಇಳಿಬಿಡಿ. ಒಂದು ವೇಳೆ ಈ ಜೇನಿನಲ್ಲಿ ಕಲಬೆರಕೆ ಇದ್ದರೆ, ಈ ಜೇನು ಚಕಚಕನೇ ನೀರಿನಲ್ಲಿ ಕರಗಿ ಬಿಡುತ್ತದೆ.
ಕೊಂಚ ಶಿರ್ಕಾದ ಹನಿಗಳನ್ನು ಹನಿ ಜೇನಿನ ನೀರಿನ ಮೇಲೆ ಚಿಮುಕಿಸಿ. ಒಂದು ವೇಳೆ ಈ ಹನಿಗಳು ಬಿದ್ದ ಬಳಿಕ ನೊರೆಯಾಗಿರುವುದು ಕಂಡುಬಂದರೆ ಜೇನು ಯಾವುದೋ ರಾಸಾಯನಿಕದೊಂದಿಗೆ ಕಲಬೆರಕೆಗೊಂಡಿದೆ ಎಂದು ಕಂಡುಕೊಳ್ಳಬಹುದು.
ಒಂದು ಚಿಕ್ಕಚಮಚ ಜೇನನ್ನು ತೆಗೆದುಕೊಂಡು ಬಗ್ಗಿಸಿ. ಒಂದು ವೇಳೆ ಕಲಬೆರಕೆ ಇದ್ದರೆ ಈ ಜೇನು ಬೇಗಬೇಗನೇ ಬಿದ್ದು ಬಿಡುತ್ತದೆ.ಅಪ್ಪಟ ಜೇನು ಗಾಢವಾಗಿದ್ದು ಕೆಳಗೆ ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
Boldsky Kannada
ಒಂದು ಬೆಂಕಿಕಡ್ಡಿಯನ್ನು ಗೀರಿ ಹಚ್ಚಿ ಜೇನಿಗೆ ಬೆಂಕಿಹಚ್ಚಲು ಯತ್ನಿಸಿ. ಅಪ್ಪಟ ಜೇನಾದರೆ ಬೆಂಕಿ ಹತ್ತಿಕೊಳ್ಳುತ್ತದೆ. ಆದರೆ ಕಲಬೆರಕೆ ಜೇನಿನಲ್ಲಿ ನೀರಿನ ಅಂಶವಿರುವ ಕಾರಣ ಬೆಂಕಿ ಹತ್ತಿಕೊಳ್ಳುವುದಿಲ್ಲ.
ಒಂದು ಚಿಕ್ಕಚಮಚ ಜೇನಿಗೆ ಕೊಂಚ ಅಯೋಡಿನ್ ದ್ರಾವಣವನ್ನು ಬೆರೆಸಿ. ಒಂದು ವೇಳೆ ಜೇನು ನೀಲಿ ಬಣ್ಣಕ್ಕೆ ತಿರುಗಿದರೆ ಇದು ಕಲಬೆರಕೆಯಾಗಿದೆ ಎಂದು ಅರ್ಥ.
ಒಂದು ಬ್ರೆಡ್ಡಿನ ತುಂಡನ್ನು ಒಂದು ದೊಡ್ಡಚಮಚದಷ್ಟು ಜೇನಿನಲ್ಲಿ ಮುಳುಗಿಸಿ. ಒಂದು ವೇಳೆ ಜೇನು ಅಪ್ಪಟವಾಗಿದ್ದರೆ ಬ್ರೆಡ್ ಕೆಲವು ನಿಮಿಷಗಳ ಬಳಿಕ ಗಟ್ಟಿಯಾಗುತ್ತದೆ.
ನೈಸರ್ಗಿಕ ಅಥವಾ ಕಾಡಿನ ಜೇನೇ ಏಕೆ ಅತ್ಯಂತ ಉತ್ತಮ? ಇದರಲ್ಲಿ ವಿಟಮಿನ್ನುಗಳಾದ A, B, C, D , E, ಅಮೈನೋ ಆಮ್ಲಗಳು ಹೇರಳವಾಗಿವೆ.
ಜೇನಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯೂ ಇದೆ. ಜೇನು ಜೀರ್ಣಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.