Tap to Read ➤

ಯುಗಾದಿ ಪಂಚಾಂಗ 2022-23: ಹೇಗಿದೆ ಧನು ರಾಶಿಯ ಭವಿಷ್ಯ?

ಇಲ್ಲಿ ಧನು ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
Reena TK
ಧನು ರಾಶಿಗೆ ಗುರು ಗ್ರಹ ಅಧಿಪತಿ. 4ರ ಗುರು, 3ರ ಶನಿ, 5ರ ರಾಹು, 11ರ ಕೇತು, ಮೂಲ, ಪೂರ್ವ ಆಷಾಢ ಹಾಗೂ ಉತ್ತರ ಆಷಾಢ ನಕ್ಷತ್ರದವರು ಈ ರಾಶಿಯವರಾಗಿರುತ್ತಾರೆ. ಧನು ರಾಶಿಯವರು ಸಾಡೆ ಸಾತಿಯಿಂದ ಬಿಡುಗಡೆ ಆಗುತ್ತಿರುವ ಸಮಯ. ಈ ವರ್ಷ ನಿಮಗೆ ಬಹಳಷ್ಟು ಶುಭ ಸುದ್ದಿ ಸಿಗಲಿದೆ.
ಈ ವರ್ಷದಲ್ಲಿ ವೃತ್ತಿ ಜೀವನದಲ್ಲಿ ಸಾಧಾರಣವಾಗಿರುತ್ತೆ, ಯಾವುದೇ ರೀತಿಯಲ್ಲಿ ಹೊಸದಾಗಿ ಹೂಡಿಕೆ ಮಾಡದಿರುವುದು ಉತ್ತಮ. ಏಪ್ರಿಲ್‌ ನಂತರ ನಿಮ್ಮ ಪರಿಸ್ಥಿರಿ ಸುಧಾರಿಸುತ್ತದೆ, ಉದ್ಯಮ ಪ್ರಾರಂಭಿಸಬಹುದು. ಹಾಗೆಯೇ, ವಿಶೇಷವಾಗಿ ಪಾಲುದಾರಿಕೆ ವ್ಯವಹಾರ ಉತ್ತಮವಾಗಿರುತ್ತದೆ.
ಧನು ರಾಶಿಯವರಿಗೆ ಆದಾಯ 2 ಇದ್ದರೆ, ವ್ಯಯ 8 ಇರುತ್ತದೆ, ರಾಜಯೋಗ 8 ಇದೆ, ಅವಮಾನ 1 ಇದೆ. ಆದಾಯ ಹಾಗೂ ವ್ಯಯದಲ್ಲಿ ತುಂಬಾ ವ್ಯತ್ಯಾಸ ಇರುವ ಕಾರಣ ಹೆಚ್ಚಿನಮಟ್ಟದಲ್ಲಿ ವೆಚ್ಚದ ಕಡೆ ಗಮನಹರಿಸ ಬೇಕಾಗುತ್ತದೆ.
2ನೇ ಮನೆಯಲ್ಲಿ ಶನಿ ಸಂಚಾರದಿಂದ ಕುಟುಂಬಕ್ಕೆ ಸದಸ್ಯರ ಸೇರ್ಪಡೆಯಾಗುತ್ತದೆ. ಹೊಸಬರ ಸೇರ್ಪಡೆ ಎಂದರೆ ಮದುವೆ ಆಗುವುದು, ಸೊಸೆ, ಅಳಿಯ ಅಥವಾ ಮಗುವಿನ ಜನನ ಅಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಶಾಂತಿ ಇರುತ್ತದೆ ಅಲ್ಲದೆ ನಿಮ್ಮ ದಾಂಪತ್ಯ ಸಂಬಂಧ ಬಲವಾಗಿರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ ಹಾಗೆಯೇ ಯಶಸ್ಸನ್ನು ಗಳಿಸುತ್ತಾರೆ. ಏಪ್ರಿಲ್‌ ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದರೆ ಖಂಡಿತವಾಗಿಯೂ ನಿಮಗೆ ಯಶಸ್ಸು ಸಿಗಲಿದೆ.
ನೇ ಮನೆಯಲ್ಲಿ ರಾಹು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ, ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ: 3 ಮತ್ತು 9