Tap to Read ➤

ಪುರುಷರಲ್ಲಿ ಕಾಣಿಸಿಕೊಳ್ಳುವ 10 ಆರೋಗ್ಯ ಸಮಸ್ಯೆಗಳು

ಅಪ್ಪಿತಪ್ಪಿಯೂ ಇದನ್ನು ನಿರ್ಲಕ್ಷಿಸಬೇಡಿ !
Preethin Veigas
ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಒಬ್ಬರಿಗೆ ಹೃದ್ರೋಗ ಸಮಸ್ಯೆ ಇರುತ್ತದೆಯಂತೆ.
ಬಹುತೇಕ ಗಂಡಸರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಅಮೇರಿಕನ್ ಲಂಗ್ ಅಸೋಸಿಯೇಶನ್ ತಿಳಿಸಿದೆ. ಇದಕ್ಕೆ ಧೂಮಪಾನವೇ ಪ್ರಮುಖ ಕಾರಣ
ಆಲ್ಕೋಹಾಲ್ ಅಥವಾ ಮದ್ಯಪಾನಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಯಿಂದ ಬಳಲುವವರು ಬಹುತೇಕ ಪುರುಷರೇ ಆಗಿರುತ್ತಾರೆ. Read more at: https://kannada.boldsky.com/health/wellness/2019/top-10-men-s-health-issues/articlecontent-pf97042-019287.html
ಪುರುಷರು ಮಹಿಳೆಯರಿಗಿಂತ ಭಿನ್ನವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ. ಇವರು ಸುಸ್ತು ಮತ್ತು ಕಿರಿಕಿರಿ ಸಮಸ್ಯೆಗಳು ನಮ್ಮನ್ನು ಹೆಚ್ಚು ಕಾಡುತ್ತವೆ ಎಂದು ದೂರುತ್ತಾರೆ.
ಉದ್ದೇಶಪೂರ್ವಕವಲ್ಲದ ಗಾಯಗಳು ಪುರುಷರಲ್ಲಿ 6.2% ಸಾವುಗಳಿಗೆ ಕಾರಣವಾದರೆ, ಇದರ ಪ್ರಮಾಣವು ಮಹಿಳೆಯರಲ್ಲಿ 3.5% ಆಗಿರುತ್ತದೆ.
ಮಧುಮೇಹವು ಪುರುಷರಲ್ಲಿ ಒಂದು ವಿಶೇಷ ಬಗೆಯ ತೊಡಕುಗಳ ಸರಣಿಯನ್ನೇ ಉಂಟು ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಲೈಂಗಿಕ ಅಸರ್ಮರ್ಥತೆ ಒಂದಾಗಿರುತ್ತದೆ.
ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ತ್ವಚೆಯ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಮಹಿಳೆಯರಿಗಿಂತ ದುಪ್ಪಟ್ಟಾಗಿರುತ್ತದೆ.
ಈಗಾಗಲೇ ಮತ್ತೊಬ್ಬ ಪುರುಷರ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಾತನ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವುದರಿಂದಾಗಿ ಎಚ್‌ಐವಿ/ಏಡ್ಸ್‌ಗೆ ತುತ್ತಾಗುವ ಪ್ರಮಾಣ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಪುರುಷರಿಗೆ ಕಾಡುವ ಇನ್ನಿತರ ಸಮಸ್ಯೆಗಳು ಎಂದರೆ ಸಿ‌ಓಪಿಡಿ, ಮಧುಮೇಹ, ಏಡ್ಸ್ ಮತ್ತು ಕ್ಯಾನ್ಸರ್ ಇವುಗಳು ಪುರುಷರನ್ನು ಇನ್‌ಫ್ಲೂಯೆಂಜಾ ಮತ್ತು ನ್ಯುಮೋನಿಯಾಗೆ ತುತ್ತಾಗುವಂತೆ ಮಾಡುತ್ತವೆ.
ಆಲ್ಕೋಹಾಲ್ ಮತ್ತು ತಂಬಾಕನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದಾಗಿ ಪುರುಷರು ತಮ್ಮ ಲಿವರ್ ಅನ್ನು ಅಪಾಯಕ್ಕೆ ತಳ್ಳುತ್ತಾರೆ. ಇದರಿಂದಾಗಿ ಸಿರ್ರೋಹೊಸಿಸ್ ಮತ್ತು ಆಲ್ಕೋಹಾಲಿಕ್ ಲಿವರ್ ರೋಗಗಳು ಬರುತ್ತದೆ.