ಪೊಲೀಸ್ ಇಲಾಖೆಯಲ್ಲಿ ಹಲ್‌ಚಲ್! ಯಾರು ಈ ಕೆ. ರಾಮಚಂದ್ರ ರಾವ್? ವೈರಲ್ ವಿಡಿಯೋ ಸತ್ಯವೇನು?

ಪೊಲೀಸ್ ಇಲಾಖೆಯಲ್ಲಿ ಹಲ್‌ಚಲ್! ಯಾರು ಈ ಕೆ. ರಾಮಚಂದ್ರ ರಾವ್? ವೈರಲ್ ವಿಡಿಯೋದಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದ್ದೇಕೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಹೌದು, ಕರ್ನಾಟಕ ಪೊಲೀಸ್ ಇಲಾಖೆಯ ಹಾಲಿ ಡಿಜಿಪಿ ಕೆ. ರಾಮಚಂದ್ರ ರಾವ್ (K Ramachandra Rao) ಅವರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಸಂಚಲನ ಮೂಡಿಸಿದೆ.

ಈ ವಿಡಿಯೋ (Karnataka dgp video) ವಿವಾದ ಸೃಷ್ಟಿಸುತ್ತಿದ್ದಂತೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶದ ಮೇರೆಗೆ ರಾಮಚಂದ್ರ ರಾವ್ ಅವರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ. ಈ ಘಟನೆ ಇಡೀ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

IPS K Ramachandra Rao

ಯಾರು ಈ ಕೆ. ರಾಮಚಂದ್ರ ರಾವ್? (Who is IPS K Ramachandra Rao) ಎಂಬ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. 1993ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ರಾಮಚಂದ್ರ ರಾವ್, ಮೇ 7, 1966 ರಂದು ಆಂಧ್ರಪ್ರದೇಶದಲ್ಲಿ ಜನಿಸಿದರು. ಎಂ.ಎಸ್‌ಸಿ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದಿರುವ ಇವರು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೆಪ್ಟೆಂಬರ್ 4, 1994 ರಂದು ಕರ್ನಾಟಕ ಕೆಡರ್‌ನ ಅಧಿಕಾರಿಯಾಗಿ ಸೇವೆಗೆ ಸೇರಿದರು. ಪ್ರಸ್ತುತ ಉನ್ನತ ಹುದ್ದೆಯಲ್ಲಿದ್ದ ಇವರು 2026ರಲ್ಲಿ ನಿವೃತ್ತರಾಗಬೇಕಿತ್ತು.

ಚಿನ್ನ ಕಳ್ಳಸಾಗಣೆಯಲ್ಲಿ ಮಗಳಿಗೆ ಸಹಾಯ

ರಾಮಚಂದ್ರ ರಾವ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವು ಸುದ್ದಿ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ನಟಿ ರಾನ್ಯಾ ರಾವ್ ಅವರ ಸಾಕು ತಂದೆ ಇವರು ಎನ್ನಲಾಗಿದೆ. ಈ ಹಿಂದೆ, ಚಿನ್ನ ಕಳ್ಳಸಾಗಣೆಯಲ್ಲಿ ರಾಮಚಂದ್ರ ರಾವ್ ತಮ್ಮ ಮಗಳಿಗೆ ಸಹಾಯ ಮಾಡಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು.

ಸರ್ಕಾರಿ ಕಚೇರಿಯ ಚೇಂಬರ್‌ನಲ್ಲಿ..!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ (dgp ramachandra rao video) ಅತ್ಯಂತ ಆಕ್ಷೇಪಾರ್ಹವಾಗಿದೆ. ವರದಿಯ ಪ್ರಕಾರ, ಅಧಿಕಾರಿಯು ತಮ್ಮ ಅಧಿಕೃತ ಸಮವಸ್ತ್ರದಲ್ಲಿ ಸರ್ಕಾರಿ ಕಚೇರಿಯ ಚೇಂಬರ್‌ನಲ್ಲಿ ಕುಳಿತಿದ್ದಾರೆ. ಈ ವೇಳೆ ಅವರ ಮುಂದೆ ಇರುವ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಅವರು ಕಂಡುಬಂದಿದ್ದಾರೆ. ಮಹಿಳೆಯನ್ನು ಅಪ್ಪಿಕೊಳ್ಳುವ ಮತ್ತು ಚುಂಬಿಸುವ ದೃಶ್ಯಗಳಿದ್ದು, ಕರ್ತವ್ಯದ ಅವಧಿಯಲ್ಲಿಯೇ ಇಂತಹ ಘಟನೆ ನಡೆದಿರುವುದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.

ವಿಡಿಯೋ ಎಂಟು ವರ್ಷಗಳಷ್ಟು ಹಳೆಯದ್ದು!

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕೆ. ರಾಮಚಂದ್ರ ರಾವ್, ಇದೊಂದು ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿದ್ದಾರೆ. ವಿಡಿಯೋ ಸುಮಾರು ಎಂಟು ವರ್ಷಗಳಷ್ಟು ಹಳೆಯದ್ದು, ತಾವು ಬೆಳಗಾವಿಯಲ್ಲಿದ್ದ ಸಮಯದ್ದು ಎಂದು ಹೇಳಲಾಗುತ್ತಿದೆ. ವೈರಲ್ ವಿಡಿಯೋ ಸುಳ್ಳು ಮತ್ತು ತಮ್ಮ ಇಮೇಜ್ ಹಾಳು ಮಾಡಲು ಯಾರೋ ಮಾಡಿದ ಸಂಚು ಎಂದು ಅವರು ಪ್ರತಿಪಾದಿಸಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ, ತಂತ್ರಜ್ಞಾನ ಬಳಸಿ ತನ್ನನ್ನು ಸಿಲುಕಿಸಲಾಗಿದೆ ಎನ್ನುತ್ತಾ ತನಿಖೆಗೆ ಆಗ್ರಹಿಸಿದ್ದಾರೆ.

ಈ ವಿಡಿಯೋ 'ಡೀಪ್ ಫೇಕ್' ಹಾ?

ವಿಡಿಯೋ ಹಳೆಯದೇ ಇರಲಿ ಅಥವಾ ಇತ್ತೀಚಿನದೇ ಇರಲಿ, ಅಧಿಕೃತ ಕಚೇರಿಯಲ್ಲಿ ಇಂತಹ ನಡವಳಿಕೆ ಅಕ್ಷಮ್ಯ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ರಾಜ್ಯಪಾಲರ ಆದೇಶದಂತೆ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಲಾಗಿದ್ದು, ಸದ್ಯ ಹಿರಿಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಸೈಬರ್ ಕ್ರೈಮ್ ವಿಭಾಗವು ಈ ವಿಡಿಯೋ 'ಡೀಪ್ ಫೇಕ್' ಅಥವಾ ತಿರುಚಲ್ಪಟ್ಟಿದೆಯೇ ಎಂಬ ಬಗ್ಗೆ ವರದಿ ನೀಡಲಿದೆ. ಆರೋಪ ಸಾಬೀತಾದರೆ, ಅವರು ನಿವೃತ್ತಿಗೂ ಮುನ್ನವೇ ಗಂಭೀರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿಯ ಸುತ್ತ ಇಂತಹ ವಿವಾದಗಳು ಸುತ್ತಿಕೊಳ್ಳುತ್ತಿರುವುದು ಪೊಲೀಸ್ ಪಡೆಯ ಘನತೆಗೆ ಧಕ್ಕೆ ತಂದಿದೆ. ತನಿಖಾ ವರದಿಯ ನಂತರವಷ್ಟೇ ಈ ಅಶ್ಲೀಲ ವಿಡಿಯೋದ ಹಿಂದಿರುವ ಅಸಲಿ ಸತ್ಯ ಹೊರಬರಬೇಕಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

English summary

Who is IPS K Ramachandra Rao? The Karnataka DGP Suspended After Viral Office Video Scandal

Who is IPS K Ramachandra Rao? The Karnataka DGP Suspended After Viral Office Video Scandal
X
Desktop Bottom Promotion