For Quick Alerts
ALLOW NOTIFICATIONS  
For Daily Alerts

ಸುದ್ದಿ ಮತ್ತು ಪ್ರಚಾರದ ಗ್ಲೋಬಲ್ ಸ್ಯಾಂಡ್ವಿಚ್!

By * ಪಾಂಡು ಹವಾಲ್ದಾರ್, ಬೆಳಗಾವಿ
|
William-Kate Royal Wedding
ಲಂಡನ್ ನ ವೆಸ್ಟ್ ಮಿನಿಸ್ಟರ್ ಅರಮನೆಯ ಪಶ್ಚಿಮ ಭಾಗದಲ್ಲಿರುವ ವೆಸ್ಟ್ ಮಿನಿಸ್ಟರ್ ಅಬ್ಬೆ ಚರ್ಚ್ ನಲ್ಲಿ ನಡೆದ ಕೇಂಬ್ರಿಜ್ ಡ್ಯೂಕ್ ವಿಲಿಯಂ ಮತ್ತು ಡಚೆಸ್ ಕೇಟ್ ಮಿಡಲ್ ಟನ್ ಮದುವೆ ಇಡೀ ಜಗತ್ತನ್ನು ತನ್ನೆಡೆ ಸೂಜಿಗಲ್ಲಿನಂತೆ ಆಕರ್ಷಿಸಿದೆ. ಈ ವೈಭೋಗದ ರಾಜಮನೆತನದ ಮದುವೆಗಾಗಿ ಪೆನ್ನು ಪೇಪರ್ ಹಿಡಿಯದ ಮಾಧ್ಯಮಗಳೆಲ್ಲ ತಮ್ಮ ಅಮೂಲ್ಯ ಸಮಯವನ್ನೆಲ್ಲ ಇದರ ಪ್ರಚಾರಕ್ಕಾಗಿ ಮೀಸಲಿಟ್ಟಿವೆ.

ಈ ರಾಜವೈಭೋಗದ ಮದುವೆಗಾಗಿ ಖರ್ಚಾದದ್ದೆಷ್ಟು? ರಾಜಕುಮಾರಿ ಕೇಟ್ ಮಿಡಲ್ ಟನ್ ಶುಭಲಗ್ನದ ಸಮಯದಲ್ಲಿ ತೊಟ್ಟ ಹಂಸಬಣ್ಣದ ಬಟ್ಟೆಯ ಬೆಲೆಯೆಷ್ಟು? ಯಾರ್ಯಾರು ಬಂದಿದ್ದರು, ಎಂತೆಂಥ ಚಿತ್ರವಿಚಿತ್ರ ದಿರಿಸುಗಳನ್ನು ತೊಟ್ಟಿದ್ದರು? ಕೇಟ್ ತನ್ನ ಉಂಗುರದ ಬೆರಳಿಗೆ ತೊಡಿಸಿಕೊಂಡ ಉಂಗುರ ಯಾರದು? ಇತ್ಯಾದಿ ಇತ್ಯಾದಿ... ರಾಜಮನೆತನದ ಮದುವೆಯೆಂದ ಮೇಲೆ ಖರ್ಚು ಮಾಡಲೇಬೇಕಲ್ಲ! ರಾಜರು ಸಿಂಪಲ್ ಆಗಿ ದೇವಸ್ಥಾನಕ್ಕೆ ಹೋಗಿ ಹಾರ ಬದಲಾಯಿಸಿಕೊಂಡರೆ ಸಾಕೆ?

ಸುದ್ದಿ ಅಂದ ಮೇಲೆ ಸುದ್ದಿಯೆ. ಪ್ರಕಟಿಸಲೇಬೇಕು. ರೈತರ ಮೇಲಿನ ಗುಂಡಿನ ದಾಳಿಯೇ ಆಗಲಿ, ಜಪಾನಿಗೆ ಅಪ್ಪಳಿಸಿದ ಸುನಾಮಿಯೇ ಆಗಲಿ, ಬರಾಕ್ ಒಬಾಮಾ ಬಿಡುಗಡೆ ಮಾಡಿದ ಬರ್ತ್ ಸರ್ಟಿಫಿಕೇಟ್ ಆಗಲಿ, ಎನ್ಆರ್ಎನ್ ನಿವೃತ್ತಿಯ ಸುದ್ದಿಯೇ ಆಗಲಿ, ಮಡಿಕೇರಿಯಲ್ಲಾದ ಭೀಕರ ಮರ್ಡರ್ ಆಗಲಿ, ಭದ್ರಾವತಿಯಲ್ಲಿ ಕೋಳಿ ಸಾಗಾಣಿಕೆ ತರಬೇತಿ ಕೇಂದ್ರದ ಉದ್ಘಾಟನೆಯೇ ಆಗಲಿ, ಮೇಯರ್ ಶಾರದಮ್ಮ ಎಸ್ಎಸ್ಎಲ್ ಸಿ ಸುದ್ದಿಯೇ ಆಗಲಿ ... ಎಲ್ಲವೂ ಸುದ್ದಿಯೇ. ಎಲ್ಲಕ್ಕೂ ತನ್ನದಾದ ಸ್ಥಾನ ಇದ್ದೇ ಇದೆ.

ಆದರೆ, ಯಾರು ಯಾವ ರೀತಿ ಮಾಧ್ಯಮಗಳನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ನೆರೆ ರಾಜ್ಯದ ನಟನೊಬ್ಬ ರಾಜಕೀಯ ಪಕ್ಷ ಕಟ್ಟಿದಾಗ ಇಡೀ ದಿನ ಅವನೊಬ್ಬನ ಸುದ್ದಿಯೇ ಆವರಿಸಿಕೊಂಡಿರುತ್ತದೆ. ನಮ್ಮ ರಾಜ್ಯದಲ್ಲಿ ಏನೇ ಘಟಿಸಿದರೂ ಪ್ರಮುಖವಾಗಿ ಸುದ್ದಿಯಾಗುವುದೇ ಇಲ್ಲ. ವಿಲಿಯಂ ಮತ್ತು ಕೇಟ್ ಮದುವೆಯೇ ಆಗಲಿ. ಶತಮಾನದ ಮದುವೆ ಎಂದು ಬಣ್ಣಿಸಿಕೊಂಡಿರುವ ಈ ಮದುವೆ ಕ್ರಿಶ್ಚಿಯನ್ ಸಮುದಾಯದ ಮದುವೆಯಷ್ಟೆ. ಆದರೆ, ಇದಕ್ಕೆ ಕೊಡುತ್ತಿರುವ ಪ್ರಚಾರ ಮಾತ್ರ ನೋಡಿ ಸ್ವಲ್ಪ ಅಸಹನೆ ಉಂಟಾಗುತ್ತಿದೆ.

ಅಲ್ಲರೀ, ನಮ್ಮ ಹಿಂದೂ ಅಥವಾ ಭಾರತದ ಯಾವುದೇ ಧರ್ಮದವರ ಮದುವೆ ನಡೆದರೆ ಈ ಪರಿಯ ಪ್ರಚಾರ ನೀಡುತ್ತಾರಾ? ಆಫ್ ಕೋರ್ಸ್ ದುಡ್ಡು ಕೊಟ್ಟರೆ ಇದಕ್ಕಿಂತಲೂ ಹೆಚ್ಚು ಪ್ರಚಾರ ಮಾಡಿದರೂ ಮಾಡಬಹುದು. ಮದುವೆಯ ಪ್ರಚಾರ ಮಾಡುವವರೂ ಇವರೆ, ಮದುವೆ ನಂತರ ಡೈವೋರ್ಸ್ ಯಾವಾಗ ಅಂತ ವಿಶ್ಲೇಷಣೆ ಮಾಡುವವರೂ ಇವರೆ! ಸುದ್ದಿಯ ಮೌಲ್ಯವೆಲ್ಲಿ ಹೋಯಿತು? ಒಂದಂತೂ ನಿಜ ಈ ಮದುವೆಯಿಂದಾಗಿ ಹಿಂದೂ ಸಂಸ್ಕೃತಿಯ ಭಾರತದಲ್ಲಿ ಕ್ರೈಸ್ತ ಧರ್ಮ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಂತಾಯಿತು. ಇತ್ತೀಚೆಗೆ ತಾನೆ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿ ಕ್ರಿಕೆಟಿಗರು ಮೈದಾನದಲ್ಲೇ ನಮಾಜ್ ಮಾಡಿದ್ದರು, ಮಾಡಲು ಅವಕಾಶ ನೀಡಲಾಗಿತ್ತು.

ನಮ್ಮದು ಎಂಥ ಸಮಾಜವೆಂದರೆ, ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಹೋಮಹವನ ಮಾಡಿದರೆ, ನಮ್ಮವರೇ ತಿರುಗಿಬಿದ್ದಿರುತ್ತಾರೆ. ಎಲ್ಲೋ ತಲೆಮರೆಸಿಕೊಂಡಿದ್ದ ಬುದ್ಧಿಜೀವಿಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಡುತ್ತಾರೆ. ನಾಲ್ಕಾರು ಗಡ್ಡಧಾರಿಗಳು ಜುಬ್ಬಾ ಪೇಜಾಮಾ ಧರಿಸಿ ರೋಡಿಗೆ ಇಳಿದೇ ಬಿಡುತ್ತಾರೆ. ನಮ್ಮದು ಜಾತ್ಯತೀತ ರಾಷ್ಟ್ರ, ಒಂದು ಧರ್ಮಕ್ಕೆ ಇಷ್ಟ್ಯಾಕೆ ಪ್ರಚಾರ ಕೊಡಬೇಕು ಎಂದು ಬತ್ತಳಿಕೆಯಿಂದ ಮಾತಿನ ಬಾಣ ಎಸೆಯಲು ಶುರುಮಾಡುತ್ತಾರೆ. ಇದ್ಯಾಕೆ ಹೀಗೆ?

English summary

William-Kate Royal Wedding | World Media Mileage | Christianity Show-Cased | ವಿಲಿಯಂ ಕೇಟ್ ರಾಯಲ್ ವೆಡ್ಡಿಂಗ್ | ಕ್ರೈಸ್ತ ಧರ್ಮ ಪ್ರಚಾರ

Young couple, old Church makes a global sandwich : The British Royal Wedding in all its true colors, pomp and traditional glory was a global event. 2 Billion people around the world watched the breath taking event beamed from Westminster Abbey on Friday 29/04/11.
 
 In the bargain the british event publicized rituals of the Church and marriage customs. We wish Willikate a long and happy married life filled with joy and peace.
X
Desktop Bottom Promotion