For Quick Alerts
ALLOW NOTIFICATIONS  
For Daily Alerts

ಪಾಕ್ ಶಾಲೆಗಳಲ್ಲಿ ಹಿಂದೂ ದ್ವೇಷದ ಪಾಠ‌: ಅಮೆರಿಕ ಸರಕಾರ

By Super
|
hindu-hatredness-in-pak-school-books-america
ವಾಷಿಂಗ್ಟನ್, ನ.11: ಪಾಕಿಸ್ತಾನದ ಸರಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಮದ್ರಸಾಗಳಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಅಸಹನೆ ಮತ್ತು ದ್ವೇಷವನ್ನು ತುಂಬುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಾಕ್ ಶಾಲಾ ಪುಸ್ತಕಗಳಲ್ಲಿ ಹಿಂದೂ ದ್ವೇಷ ತುಂಬಿದ ಪಾಠಗಳಿದ್ದು, ಶಿಕ್ಷಕರು ಈ ಅಲ್ಪಸಂಖ್ಯಾತರನ್ನು ಇಸ್ಲಾಮ್‌ನ ವಿರೋಧಿಗಳು ಎಂದು ಬೋಧಿಸುತ್ತಾರೆ ಎಂದು ಅಮೆರಿಕ ಸರಕಾರ ವರದಿ ಮಾಡಿದೆ.

ಇಂತಹ ಪ್ರಚೋದನಕಾರಿ ಅಧ್ಯಾಯಗಳು 4ನೆಯ ತರಗತಿಯಿಂದ ಆರಂಭವಾಗಿ 10ನೆಯ ತರಗತಿ ವರೆಗಿನ ಪಠ್ಯ ಪುಸ್ತಕಗಳಲ್ಲಿ ಢಾಳಾಗಿ ಕಂಡುಬರುತ್ತದೆ.

ಅಲ್ಪಸಂಖ್ಯಾತರಿಗೆ ಪೂರ್ಣ ಹಕ್ಕುಗಳನ್ನು ನೀಡಿರುವ ಸುಧಾರಣಾವಾದಿ ದೇಶ ಎಂದು ತನ್ನನ್ನು ಕರೆದುಕೊಳ್ಳುತ್ತಿದ್ದರೂ ಭಾರತದ ಜತೆಗಿನ ಮೂರು ಯುದ್ಧ ಮತ್ತು ಸತತವಾಗಿ ಅಧಿಕಾರಕ್ಕೆ ಬಂದ ದುರ್ಬಲ ಸರಕಾರಗಳು ಕರ್ಮಠ ಮುಸ್ಲಿಂ ಮತಪಂಡಿತರ ಒತ್ತಡಕ್ಕೆ ಮಣಿದು ಸಮಾಜವನ್ನು ಪೂರ್ತಿಯಾಗಿ ಇಸ್ಲಾಮೀಕರಣಗೊಳಿಸಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನದ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕಗಳಲ್ಲಿ ಭಾರತ ಮತ್ತು ಬ್ರಿಟನ್‌ ವಿರುದ್ಧ ದ್ವೇಷ ಹುಟ್ಟಿಸುವ ಸಂಗತಿಗಳೇ ತುಂಬಿವೆ. ಮಕ್ಕಳಿಗೆ ಮತಾಂಧತೆಯನ್ನು ಬೋಧಿಸುತ್ತಿರುವುದರಿಂದ ಪಾಕಿಸ್ತಾನದಲ್ಲಿ ಧಾರ್ಮಿಕ ಉಗ್ರವಾದ ಬೆಳೆಯುತ್ತಾ ಹೋಗುತ್ತಿದೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ ದುರ್ಬಲವಾಗುತ್ತಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸ್ಥಿರತೆ ದುರ್ಬಲವಾಗಿ ಜಾಗತಿಕ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದು ವರದಿ ಎಚ್ಚರಿಸಿದೆ.

ಹಿಂದೂಗಳು ಮತ್ತು ಮುಸ್ಲಿಮರು ಶತಮಾನಗಳಿಂದ ಸಹಬಾಳ್ವೆ ಮಾಡುತ್ತಾ ಬಂದಿದ್ದಾರೆಂದು ಇತಿಹಾಸ ಹೇಳುತ್ತಿದ್ದರೂ ಪಠ್ಯ ಪುಸ್ತಕಗಳಲ್ಲಿ ಹಿಂದೂಗಳನ್ನು ಉಗ್ರರು ಮತ್ತು ಇಸ್ಲಾಮ್‌ನ ವಿರೋಧಿಗಳು ಎಂಬಂತೆ ಚಿತ್ರಿಸಲಾಗಿದೆ. ಹಿಂದೂ ಸಮಾಜವನ್ನು ಕ್ರೂರ ಮತ್ತು ಅನ್ಯಾಯಗಾರರು ಮತ್ತು ಇಸ್ಲಾಮ್‌ನ ಶಾಂತಿಯ ಮತ್ತು ನ್ಯಾಯದ ಸಂಕೇತ ಎಂದು ಬಣ್ಣಿಸಲಾಗಿದೆ.

ಇಸ್ಲಾಂ ಮೂಲಭೂತವಾದಿಗಳ ಬೆಂಬಲದಿಂದ ಅಧಿಕಾರದಲ್ಲಿದ್ದ ಜಿಯಾ -ಉಲ್‌- ಹಕ್‌ ಕಾಲದಲ್ಲೇ ಪಠ್ಯ ಪುಸ್ತಕಗಳ ಇಸ್ಲಾಮೀಕರಣ ಶುರುವಾಗಿತ್ತು. 2006ರಲ್ಲಿ ಸರಕಾರ ಪಠ್ಯ ಪುಸ್ತಕಗಳಲ್ಲಿ ಸುಧಾರಣೆ ಮಾಡಲು ಮುಂದಾದರೂ ತೀವ್ರವಾದಿಗಳ ಒತ್ತಡಕ್ಕೆ ಮಣಿದು ಈ ಪ್ರಯತ್ನವನ್ನು ಕೈಬಿಟ್ಟಿದೆ.

English summary

Hindu hatredness teachings in Pak school books - America, ಮಕ್ಕಳಿಗೆ ಹಿಂದೂ ದ್ವೇಷದ ಪಾಠ ಮಾಡುತ್ತಿರುವ ಪಾಕ್‌: ಅಮೆರಿಕ ಸರಕಾರ

Text books in Pakistani schools foster prejudice and intolerance of Hindus and Christians, while most teachers view religious minorities as "enemies of Islam", according to a study by a US government commission released on Wednesday.
Story first published: Tuesday, January 17, 2012, 12:04 [IST]
X
Desktop Bottom Promotion