For Quick Alerts
ALLOW NOTIFICATIONS  
For Daily Alerts

ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್

By Srinath
|

gandhi illustration
ಲಾಹೋರ್, ಅ.02: ಪಾಕಿಸ್ತಾನದ ಈ ಚಿತ್ರಕಾರನಿಗೆ ಏನು ಬುದ್ಧಿ ಬಂತೋ, ಶಾಂತಿದೂತ ಮಹಾತ್ಮ ಗಾಂಧೀಜಿ ಅವರ ಕಲಾಕೃತಿಯನ್ನು ರಕ್ತದಲ್ಲಿ ಬಿಡಿಸಿದ್ದಾನೆ. ಆ ಮಹಾನ್ ವ್ಯಕ್ತಿಯ ಬಗ್ಗೆ ತನಗಿರುವ ಉತ್ಕಟ ಪ್ರೇಮದಿಂದಾಗಿ ಈ ಚಿತ್ರ ಬಿಡಿಸಿದ್ದಾಗಿಯೂ ಆತ ಹೇಳಿಕೊಂಡಿದ್ದಾನೆ. ಅಂದಹಾಗೆ ಇಂದು ಗಾಂಧೀಜಿ ಅವರ ಹುಟ್ಟುಹಬ್ಬ (ಅಕ್ಟೋಬರ್2, 1869).

ಲಾಹೋರಿನ ಅಬ್ದುಲ್ ವಸೀಲ್ ಎಂಬ ಪೈಂಟರ್ ಬಾಬು ತನ್ನ ರಕ್ತದಿಂದ ಮಹಾತ್ಮ ಗಾಂಧೀಜಿ ಅವರ ಕಲಾಕೃತಿ ರಚಿಸಿದ್ದು ಅದನ್ನು ಭಾರತದಲ್ಲಿನ ಸಂಗ್ರಹಾಲಯದಲ್ಲಿಡಬೇಕು ಎಂಬ ಅಭಿಲಾಷೆಯನ್ನೂ ವ್ಯಕ್ತಪಡಿಸಿದ್ದಾನೆ. ಉಭಯ ದೇಶಗಳ ನಡುವೆ ಸಾಕಷ್ಟು ರಕ್ತ ಹರಿದಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನಿಯ ನೆತ್ತರಿನಿಂದ ಮೇರು ವ್ಯಕ್ತಿಯ ಚಿತ್ರ ಬಿಡಿಸಿರುವುದನ್ನು ನೋಡಿ ಎರಡೂ ರಾಷ್ಟ್ರಗಳ ಜನರ ಹೃದಯಗಳು ಆರ್ದಗೊಳ್ಳಲಿ ಎಂದು ಆತ ಆಶಿಸಿದ್ದಾನೆ. ವಸೀಲ್ ತನ್ನ ರಕ್ತನಾಳಕ್ಕೆ ಸಿರಿಂಜ್ ಸಿಕ್ಕಿಸಿಕೊಂಡು ರಕ್ತ ಬಸಿದು, ಅದರಿಂದಲೇ ಗಾಂಧೀಜಿ ಚಿತ್ರ ಬಿಡಿಸಿದ್ದಾರೆ.

ಪಾಕಿಸ್ತಾನದ ಸಾಮಾನ್ಯ ಪ್ರಜೆಗಳು ಶಾಂತಿ ಬಯಸುತ್ತಾರೆ ಎಂದು ಭಾರತೀಯರಿಗೆ ತಿಳಿಸುವ ಉದ್ದೇಶದಿಂದ ನನ್ನ ರಕ್ತದಿಂದ ಭಾರತದ ಶ್ರೇಷ್ಠ ನಾಯಕನ ಕಲಾಕೃತಿ ಬಿಡಿಸಿದ್ದೇನೆ. ಈ ಮೂಲಕ ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿಯ ಸಂದೇಶ ರವಾನಿಸುವುದುನನ್ನ ಉದ್ದೇಶ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಭಾರತಕ್ಕೆ ಭೇಟಿ ನೀಡಿ ಶಾಂತಿ ತತ್ವವನ್ನು ಪ್ರಚಾರ ಮಾಡುವುದು ವಸೀಲ್ ಮುಖ್ಯ ಉದ್ದೇಶವಾಗಿದೆ.

English summary

Gandhi Jayanthi- Pakistani artist paints Gandhi in his own blood, ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್

Lahore-based painter babu Abdul Waseel has painted Gandhi portrait in his own blood. 'Too much of Indian and Pakistani blood has been wasted in mutual hostilities. I hope that Mahatma Gandhi’s portrait made with Pakistani blood will melt hearts' Waseel has said.
Story first published: Sunday, October 2, 2011, 10:27 [IST]
X
Desktop Bottom Promotion