For Quick Alerts
ALLOW NOTIFICATIONS  
For Daily Alerts

ಬುರ್ಕಾ ಧರಿಸದ ಬೊಗಸೆ ಕಂಗಳ ಚೆಲುವೆಗೆ ಸೌದಿಯಲ್ಲಿ ಕಾದಿದೆ ಛಡಿ ಏಟು!

By Srinath
|
law-to-cover-saudi-women-attractive-eyes
ಲಂಡನ್, ನ. 20: ಬೊಗಸೆ ಕಂಗಳ ಚೆಲುವೆಯರಿಗೆ ಸೌದಿ ಅರೇಬಿಯಾದಲ್ಲಿ ಕಂಟಕ ಎದುರಾಗಿದೆ. ಅಂತಹ ಚೆಲುವೆಯರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂಬ ಹೊಸ ಅಂಧಾ ಕಾನೂನನ್ನು ಶೀಘ್ರವೇ ಜಾರಿಗೆ ತರಲು ಸೌದಿ ಸರಕಾರ ಸಜ್ಜಾಗಿದೆ. ಈ ಕಾನೂನಿಗೆ ಅಗೌರವ ತೋರುವ ಮಹಿಳೆಯರಿಗೆ ಶಿಕ್ಷೆಯೂ ಕಾದಿದೆ. ದಂಡ ವಿಧಿಸುವುದು ಇಲ್ಲವೇ ಸಾರ್ವಜನಿಕವಾಗಿ ಛಡಿ ಏಟು ನೀಡುವುದು ಶಿಕ್ಷೆಯ ಸ್ವರೂಪವಾಗಿದೆ.

ಸಾವರ್ಜನಿಕ ಸ್ಥಳಗಳಲ್ಲಿ 'ಪ್ರಚೋದನಕಾರಿ ಕಣ್ಣು'ಗಳನ್ನು ಮುಚ್ಚುವುದಕ್ಕೆ ತನಗೆ ಸರ್ವಾಧಿಕಾರವಿದೆ ಎಂದು ಮುಸ್ಲಿಂ ಮಹಿಳೆಯರ ಬಗ್ಗೆ ಕಟ್ಟುನಿಟ್ಟಿನ ಕಾನೂನುಗಳನ್ನು ಹೊಂದಿರುವ ಸರಕಾರ ಈಗಾಗಲೇ ಘೋಷಿಸಿದೆ.

ಇಂತಹ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಶೀಘ್ರವೇ ಮಹಿಳೆಯರು ತಮ್ಮ'ಪ್ರಚೋದನಕಾರಿ ಕಣ್ಣು'ಗಳನ್ನು ಮುಚ್ಚಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಮುಸ್ಲಿಂ ಮಹಿಳೆಯರು ಈಗಾಗಲೇ ಪೂರ್ತಿ ನಿಲುವಿನ ಕಪ್ಪು ಬುರ್ಕಾವನ್ನು (ಅಬಯಾ) ಧರಿಸುವುದು ಕಡ್ಡಾಯವಾಗಿದೆ. ಈ ದಿರಿಸು ಕಣ್ಣುಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಆವರಿಸುತ್ತದೆ. ಆದರೆ ಇನ್ನು ಮುಂದೆ ಆ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂಬುದು ಈ ಹೊಸ ಕಾನೂನಿನ ಅಭಿಲಾಷೆಯಾಗಿದೆ.

English summary

New law to cover Saudi women's attractive eyes, ಬೊಗಸೆ ಕಂಗಳ ಚೆಲುವೆಗೆ ಸೌದಿಯಲ್ಲಿ ಕಾದಿದೆ ಛಡಿ ಏಟು!

Saudi women with attractive eyes may be forced to cover them up under a new law in the country. The ultra-conservative Islamic state has said it has the right to stop women revealing 'tempting' eyes in public.
Story first published: Sunday, November 20, 2011, 10:48 [IST]
X
Desktop Bottom Promotion