For Quick Alerts
ALLOW NOTIFICATIONS  
For Daily Alerts

ಹಜಾರಿಕಾ ಅಂತ್ಯಕ್ರಿಯೆಯಲ್ಲಿ 30 ಲಕ್ಷ ಜನ: ವಿಶ್ವ ದಾಖಲೆ

By Srinath
|
death-millions-pay-tribute-to-legend-bhupen-hazarika
ಗುವಾಹಾಟಿ, ನ.16: ಬ್ರಹ್ಮಪುತ್ರಾ ಕಣಿವೆಯ ಬಹುಮುಖ ಪ್ರತಿಭೆಯ ಸಂಗೀತ ಸಾಮ್ರಾಟ ಸಾವಿನ ನಂತರವೂ ವಿಶ್ವಮಟ್ಟದ ದಾಖಲೆ ನಿರ್ಮಿಸಿದ್ದಾರೆ. ನ. 5 ರಂದು ಮುಂಬಯಿಯಲ್ಲಿ ನಿಧನ ಹೊಂದಿದ್ದ ಸಂಗೀತ ಗಾರುಡಿಗ ಭೂಪೆನ್‌ ಹಜಾರಿಕಾ ಅವರಿಗೆ ಜನರು ಅತ್ಯಧಿಕ ಸಂಖ್ಯೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಅವರ ಅಂತ್ಯಕ್ರಿಯೆ ವಿಶ್ವ ದಾಖಲೆಯ ಮಟ್ಟ ತಲುಪಿದೆ.

ಹಜಾರಿಕಾ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗೆ ಮುನ್ನ ನ. 7ರಂದು ಎರಡು ದಿನ ಇಲ್ಲಿನ ಐತಿಹಾಸಿಕ ಜಡ್ಜ್ ಫೀಲ್ಡ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಹಜಾರಿಕಾ ಅವರ ಅಂತ್ಯಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಮತ್ತು 30 ಲಕ್ಷ ಮಂದಿ ಅಂತ್ಯಕ್ರಿಯೆಯನ್ನು ಟೆಲಿವಿಷನ್‌ನಲ್ಲಿ ವೀಕ್ಷಿಸಿದ್ದರು ಎಂದು ಆನ್‌ಲೈನ್‌ ಎನ್‌ಸೈಕ್ಲೋಪಿಡಿಯಾ ವಿಕಿಪಿಡಿಯಾ ತಿಳಿಸಿದೆ.

ಖುದ್ದು ಅಂತಿಮ ನಮನ ಸಲ್ಲಿಕೆ ಮತ್ತು ಟಿವಿಯಲ್ಲಿ ವೀಕ್ಷಿಸಿದ ಅಂದಾಜು ಸಂಖ್ಯೆಯ ಆಧಾರದಲ್ಲಿ ಐತಿಹಾಸಿಕ ಅಂತ್ಯಕ್ರಿಯೆಗಳ ಪಟ್ಟಿಯನ್ನು ವಿಕಿಪಿಡಿಯಾ ಹೊಂದಿದೆ. ಜು. 7, 2009ರಂದು ಮೈಕಲ್‌ ಜಾಕ್ಸನ್‌ ಅಂತ್ಯಕ್ರಿಯೆಯನ್ನು ಟಿವಿಯಲ್ಲಿ ವಿಶ್ವಾದ್ಯಂತ ಸುಮಾರು ಮೂರು ಕೋಟಿ ಜನರು ವೀಕ್ಷಿಸಿರುವುದು ಇದುವರೆಗಿನ ದಾಖಲೆಯಾಗಿದೆ.

ಸೆ. 1997ರಲ್ಲಿ ವೇಲ್ಸ್‌ ರಾಜಕುಮಾರಿ ಡಯಾನಾ ಅವರಿಗೆ 2 ಲಕ್ಷಕ್ಕೂ ಅಧಿಕ ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದರು ಮತ್ತು 2.5 ಕೋಟಿ ಮಂದಿ ಅಂತ್ಯಕ್ರಿಯೆಯನ್ನು ಟಿವಿಯಲ್ಲಿ ವೀಕ್ಷಿಸಿದ್ದರು. ಎಲ್ವಿಸ್‌ ಪ್ರಸ್ಲಿ, ದ್ವಿತೀಯ ಪೋಪ್‌ ಜಾನ್‌ ಪಾಲ್‌, ಮಾರ್ಟಿನ್‌ ಲೂಥರ್ ಕಿಂಗ್‌ ಜೂನಿಯರ್‌, ಜೋಸೆಫ್ ಸ್ಟಾಲಿನ್‌, ಜೋಸೆಫ್ ಟಿಟೋ, ಜಾನ್‌ ಕೆನಡಿ, ರೋನಾಲ್ಡ್‌ ರೇಗನ್‌, ಆಯಾತೊಲ್ಲಾ ಖೊಮೇನಿ, ಸಿ.ಆರ್‌. ಅಣ್ಣಾ ದೊರೆ ಮುಂತಾದವರ ಅಂತ್ಯಕ್ರಿಯೆಗಳು ಈ ಯಾದಿಯಲ್ಲಿ ಸೇರಿವೆ.

English summary

Death- Millions pay tribute to the Legend Dr. Bhupen Hazarika, ಹಜಾರಿಕಾ ಅಂತ್ಯಕ್ರಿಯೆಯಲ್ಲಿ 30 ಲಕ್ಷ ಜನ: ವಿಶ್ವ ದಾಖಲೆ

Millions of people around the world paid tribute to the Legend, Dr. Bhupen Hazarika. His last rites, organized in Guwahati, 9th November, 2011, has witnessed probably the largest number of people flowing ever in records. Estimated around a million people, the tribute is as great and majestic as the Dr. Hazarika himself.
Story first published: Wednesday, November 16, 2011, 8:25 [IST]
X
Desktop Bottom Promotion