For Quick Alerts
ALLOW NOTIFICATIONS  
For Daily Alerts

64ನೇ ಸ್ವಾತಂತ್ರ್ಯದ ಸವಿಯಲ್ಲಿ ಈ ಗೀತೆ ಹಾಡಿ ಸಂಭ್ರಮಿಸಿ

By Srinath
|
national-anthem-in-kannada
ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ ಇದು. ಈ ಗೀತೆಯನ್ನು ಜನವರಿ 24, 1950ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರಗೀತೆ- (ದಟ್ಸ್)ಕನ್ನಡದಲ್ಲಿ ...

ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿ ತರಂಗ
ತವ ಶುಭ ನಾಮೇ ಜಾಗೇ
ತವ ಶುಭ ಆಶಿಶ ಮಾಗೇ
ಗಾಹೇ ತವ ಜಯ ಗಾಥಾ
ಜನ ಗಣ ಮಂಗಲ ದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ

ರಾಷ್ಟ್ರಗೀತೆಯ ಕನ್ನಡ ಭಾವಾನುವಾದ : ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚ ನಾಯಕನೇ ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ. ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ, ದಕ್ಷಿಣ ಭಾರತ, ಒರಿಸ್ಸಾ, ಬಂಗಾಳ ಹೀಗೆ ಭಾರತದ ನಾಲ್ಕೂ ದಿಕ್ಕಿನ ಪ್ರಾಂತ್ಯಗಳು ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ, ಯಮುನೆಯಂತಹ ಜೀವನದಿಗಳು ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗ್ರತಗೊಳ್ಳುತ್ತವೆ. ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ. ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ, ಜಯವಾಗಲಿ. ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ. ನಮನ.

English summary

National Anthem in Kannada, Jana Gana Mana in Kannada 64th Independence day, Independence day celebrations, ಭಾರತದ ರಾಷ್ಟ್ರಗೀತೆ ಕನ್ನಡದಲ್ಲಿ, 64ನೇ ಸ್ವಾತಂತ್ರ್ಯದ ಸವಿಯಲ್ಲಿ ಈ ಗೀತೆಯನ್ನು ಹಾಡಿ ಸಂಭ್ರಮಿಸಿ

On the occasion of India's 64th Independence day celebrations thatskannada is reproducing National Anthem in Kannada along with Transaltion of the theme.
Story first published: Sunday, August 14, 2011, 8:58 [IST]
X
Desktop Bottom Promotion