For Quick Alerts
ALLOW NOTIFICATIONS  
For Daily Alerts

ಸಿ.ಡಿ. ರೂಪದಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ

By Srinath
|
ನವದೆಹಲಿ, ಆಗಸ್ಟ್ 14: ಕವಿ ರವೀಂದ್ರನಾಥ ಠಾಗೋರ್ ಬರೆದಿರುವ ರಾಷ್ಟ್ರಗೀತೆ ಜನ ಗಣ ಮನದ ಹೊಸ ರೂಪವನ್ನು ಅನಾವರಣಗೊಳಿಸಲಾಗಿದೆ. 'ಜಯ ಹೇ' ಎಂದು ಹೆಸರಿಡಲಾಗಿರುವ 8 ನಿಮಿಷ ಅವಧಿಯ ಆಡಿಯೋ-ವಿಡಿಯೋ ರೂಪದಲ್ಲಿರುವ ಜನಗಣಮನ ಹಾಡನ್ನು ಸರೆಗಮ ನಿರ್ಮಿಸಿದೆ. ಠಾಗೋರ್‌ ಅವರ 150ನೇ ಜಯಂತಿಯಂಗವಾಗಿ ಅವರ ಹಾಡಿಗೆ ಹೊಸ ರೂಪ ಕೊಡಲಾಗಿದೆ.

'ಜಯ ಹೇ' (ಅಂತಿಮ ವಿಜಯ) ಹೆಸರಿನ ಈ ಅವತರಣಿಕೆ ಕವನದ ಎಲ್ಲ ಐದು ಚರಣಗಳನ್ನೂ ಪೂರ್ಣವಾಗಿ ಒಳಗೊಂಡಿದೆ. ಹಲವಾರು ಗಾಯಕರ ಗಾಯನ ಹಾಗೂ ವಿವಿಧ ವಾದ್ಯಗಾರರ ಕಂಠಸಿರಿಯ ಸಮ್ಮಿಲನ ಇದಾಗಿದೆ.

ಗಿರಿಜಾ ದೇವಿ, ಎಂ. ಬಾಲಮುರಳಿ ಕೃಷ್ಣ , ನಿತ್ಯಶ್ರೀ ಮಹಾದೇವನ್‌, ಸಂತೂರಿನಲ್ಲಿ ಪಂಡಿತ್‌ ಶಿವಕುಮಾರ್ ಶರ್ಮ, ಮೋಹನ ವೀಣೆಯಲ್ಲಿ ಪಂಡಿತ್‌ ವಿಶ್ವಮೋಹನ್‌ ಭಟ್‌, ಸುನಿಧಿ ಚೌಹಾಣ್‌, ಕೈಲಾಸ್‌ ಖೇರ್‌, ಪಿ. ಸುಶೀಲ, ಜಗಜಿತ್‌ ಸಿಂಗ್‌, ಶಂಕರ್ ಮಹಾದೇವನ್‌, ಜಾನಪದ ಗಾಯಕರಾದ ಲೋಪಮುದ್ರಾ ಮಿತ್ರ, ಲಖನ್‌ದಾಸ್‌ ಬೌಲ್‌ ಸಹಿತ 39 ಪ್ರಖ್ಯಾತ ಗಾಯಕರು ಹಾಡಿರುವ ಜನ ಗಣ ಮನವನ್ನು ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.

English summary

National Anthem CD, Jana Gana Mana in Kannada 64th Independence day celebrations, ಸಿ.ಡಿ. ಯಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ, ಭಾರತದ ರಾಷ್ಟ್ರಗೀತೆ ಕನ್ನಡದಲ್ಲಿ,

On the occasion of India's 64th Independence day celebrations a new CD has been released in New Delhi.
Story first published: Sunday, August 14, 2011, 8:53 [IST]
X