For Quick Alerts
ALLOW NOTIFICATIONS  
For Daily Alerts

ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ

By * ಎಚ್ಎಸ್ ರೋಹಿಣಿ
|
family-relations-guruji-preachings-meaningless
ಅಂತಿಮ ದಿನಗಳಲ್ಲಿ ಶಾಂತಿಗಾಗಿ, ನೆಮ್ಮದಿಗಾಗಿ, ಪ್ರೀತಿಗಾಗಿ ಹಂಬಲಿಸುವ ಬದಲು, ಯಾವುದೋ ಗುರೂಜಿಯ ಪ್ರವಚನಕ್ಕೆ ತಲೆಬಾಗುತ್ತಾ ಹಣ ಚೆಲ್ಲುವ ಬದಲು ಕುಟುಂಬವನ್ನು ಕಟ್ಟಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ.

ಜ್ವರ ಬಂದು ಮಲಗಿದ್ದರೂ ಅಮ್ಮ, ಮಕ್ಕಳು ಹಸಿದಿರುತ್ತಾರೆ ಎಂಬ ಕಾಳಜಿಯಿಂದ ಅಡುಗೆ ಮಾಡುವುದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡಲು ಅಪ್ಪ ಆಫೀಸಿಗೆ ನಡೆದೇ ಹೋಗುವುದು, ತಮ್ಮನ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಅಣ್ಣ ತನ್ನ ಸಂಗೀತದ ತಾಲೀಮನ್ನು ಮುಂದೂಡುವುದು, ಅಕ್ಕನಿಗೆ ಇಷ್ಟವಾದ ಜಿಲೇಬಿ ಮಾಡಲು ತಂಗಿ ತನ್ನಿಡೀ ದಿನ ಕಳೆಯುವುದು ತ್ಯಾಗ ಅಥವಾ ಕಾಳಜಿ ಎನಿಸಿಕೊಳ್ಳದೇ 'ಟೈಂ ವೇಸ್ಟ್' ಎನಿಸಿಕೊಂಡಿದೆ.

ಕೈ ತುಂಬಾ ದುಡಿದರೂ ಹೊಟ್ಟೆ ತುಂಬಾ ನೆಮ್ಮದಿಯಾಗಿ ತಿನ್ನದ ಜೀವನವನ್ನೇ ಕ್ರಿಯಾಶೀಲತೆ, ವೃತ್ತಿಪರತೆ ಎಂದೆಲ್ಲಾ ಹೊಗಳಿಕೊಂಡು ಬದುಕುವ ಮನಸ್ಸುಗಳು ಬೆಳೆಯುತ್ತಿವೆ. ಯಾವ ಕೆಲಸದಿಂದ ಆರ್ಥಿಕವಾಗಿ ಲಾಭ ಇಲ್ಲವೋ ಅದು ಕೆಲಸವೇ ಅಲ್ಲ ಎಂಬ ಇವರ ಯೋಚನೆಯಂತೂ ಅಸಹ್ಯ ಹುಟ್ಟಿಸುತ್ತದೆ.

ಸಂಬಂಧ, ವಿದ್ಯೆ, ಬದುಕನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಆರಂಭಿಸಿರುವ ಯುವಜನರು ಈ ದಾರಿಯಲ್ಲಿ ತುಂಬಾ ದೂರ ಹೋಗುವ ಮೊದಲೇ ಶೈಕ್ಷಣಿಕವಾಗಿ ಅವರನ್ನು ಸರಿದಾರಿಗೆ ತರಬೇಕಿದೆ.

ಆಧುನಿಕ ಜಗತ್ತಿಗೆ ತೆರೆದುಕೊಂಡಂತೆಲ್ಲಾ ಮನಸ್ಸು ಕಟುವಾಸ್ತವವನ್ನು ಯೋಚಿಸುವುದು ಸಹಜ. ಅಲ್ಲಿ ಭಾವನೆಗಳಿಗೆ ಜಾಗ ಕಡಿಮೆ. ಭಾವನೆಗಳೇ ಇಲ್ಲದೇ ಹೋದರೆ ಸಂತಸಕ್ಕೆ ಎಡೆ ಇರುವುದಿಲ್ಲ. ಅದರಿಂದ ಅನುಕರಿಸುವ ಗೋಜಿನಿಂದ ಹೊರಬಂದು ಸಹಜ ಭಾವನೆಗಳನ್ನು ಸ್ಥಾಪಿಸಿಕೊಳ್ಳುವತ್ತ ಮನಸ್ಸು ಹರಿಸಬೇಕಿದೆ.

English summary

Family relations deteriorating- guruji preachings meaningless, Family relations versus Professionalism, ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ, 'ಗೆಳೆತನವೇ ಶ್ರೇಷ್ಠ- ಸಂಬಂಧಗಳೆಲ್ಲಾ ಕನಿಷ್ಠ' ಎಂಬುದು ಸರಿಯೇ?

HS Rohini from Bangalore feels sad about the deteriorating family relations in the back drop of friendship and professionalism. Rohini queations is it worthwhile to listen guruji preaching while neglecting the Family relations.
Story first published: Friday, October 7, 2011, 7:54 [IST]
X
Desktop Bottom Promotion