For Quick Alerts
ALLOW NOTIFICATIONS  
For Daily Alerts

ಮದರ್ಸ್‌ ಡೇ, ಫಾದರ್ಸ್‌ ಡೇ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?

By * ಎಚ್ಎಸ್ ರೋಹಿಣಿ
|
family-relations-father-day-celebrations-meaningless
ಕುಟುಂಬ ವ್ಯವಸ್ಥೆಯಿಂದ ದೂರವಾಗುವ ಅವರು 'ಮದರ್ಸ್‌ ಡೇ', 'ಫಾದರ್ಸ್‌ ಡೇ'ಗಳನ್ನು ಅತೀವ ಸಂತಸದಿಂದ ಆಚರಿಸುತ್ತಾರೆ. ದಿನವಿಡೀ ಅಪ್ಪ ಅಮ್ಮನ ಮುಖ ನೋಡುವ ನಾವೂ ಕೂಡ ಅವುಗಳನ್ನು ಆಚರಿಸಿ ಅನುಕರಣೆಯ ಗೀಳಿಗೆ ಜೈ ಎನ್ನುತ್ತಿದ್ದೇವೆ.

ಹೀಗೆ ಕುಟುಂಬದಿಂದ ದೂರವಾಗಿ ಬೇಕಾದಷ್ಟು ಹಣ, ಕೀರ್ತಿ ಸಂಪಾದಿಸಿ ಬದುಕಿನ ಕೊನೆಯಲ್ಲಿ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗುವ ವಿದೇಶಿಯರನ್ನು ಕಂಡೇ ಇರುತ್ತೇವೆ. ಅವರಿಗೆ ನಿಜವಾಗಿ ಬೇಕಿರುವುದು ಆಧ್ಯಾತ್ಮಿಕ ಶಾಂತಿಯಲ್ಲ.

ಸೂಕ್ತ ವಯಸ್ಸಿನಲ್ಲಿ ಸಿಗದ ಕೌಟುಂಬಿಕ ಪ್ರೀತಿ. ಅದನ್ನು ಅವರು ಬದುಕಿನುದ್ದಕ್ಕೂ ಅರಸಿ ಸೋತು ಕಡೆಯದಾಗಿ ಮಾನಸಿಕ ನೆಮ್ಮದಿಯತ್ತ ಹೊರಳಿರುತ್ತಾರೆ. ಅಂಥ ಅನಾಥ ಪ್ರಜ್ಞೆಯನ್ನು ಭಾರತೀಯರು ಕೈಯ್ಯಾರೆ ಬರಮಾಡಿಕೊಳ್ಳಬೇಕೇ?

ತಂದೆ ತಾಯಿಯೊಂದಿಗೆ ಬದುಕು ಪೂರ್ತಿ ಇರಲು ನಮ್ಮ ಸಮಾಜ ಸಮ್ಮತಿ ನೀಡಿದೆ. ಅಂಥದ್ದರಲ್ಲಿ ಪಾಶ್ಚಾತ್ಯ ಸಮಾಜವನ್ನು ಅನುಕರಿಸುವ ಅಗತ್ಯ ನಮಗೇಕೆ? ಅನುಕರಣೆಗಳಿಗೆ ಕಟ್ಟುಬಿದ್ದು ಸಂಬಂಧಗಳ ಸುಳಿಗಳಿಂದ ಹೊರಬರುವ ಪ್ರಯತ್ನದಲ್ಲಿ ಒಂಟಿಯಾಗುವತ್ತ ಹೊರಡುವ ಆತುರವೇಕೆ?

ಉದ್ಯೋಗದ ಅನಿವಾರ್ಯತೆಯಿಂದ ಕುಟುಂಬದಿಂದ ದೂರವಾಗುವವರು, ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಗಂಡ-ಹೆಂಡತಿ ಇಬ್ಬರೇ ಬದುಕುವ ನಿರ್ಧಾರ ಮಾಡುವವರ ಸಂಖ್ಯೆ ಹೆಚ್ಚಿದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳು ಸಂಬಂಧಿಗಳಿಂದ ದೂರವಾಗಿ ಬದುಕುವುದು ಅನಿವಾರ್ಯವಾಗಿದೆ. ಆದರೆ ಅವುಗಳ ನಡುವೆಯೇ ಸಂಬಂಧಗಳನ್ನು ನಿಭಾಯಿಸುವ ಮನಸ್ಸು ಮಾಡಬೇಕಿದೆ.

English summary

Family relations- Father's day celebrations meaningless, Family relations versus friendship, Family relations versus Professionalism, 'ಮದರ್ಸ್‌ ಡೇ', 'ಫಾದರ್ಸ್‌ ಡೇ'ಗಳ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?, 'ಗೆಳೆತನವೇ ಶ್ರೇಷ್ಠ- ಸಂಬಂಧಗಳೆಲ್ಲಾ ಕನಿಷ್ಠ' ಎಂಬುದು ಸರಿಯೇ?

HS Rohini from Bangalore feels sad about the deteriorating Family relations in the back drop of friendship and professionalism Rohini says father's day, mother's day celebrations are meaningless.
X
Desktop Bottom Promotion