For Quick Alerts
ALLOW NOTIFICATIONS  
For Daily Alerts

ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!

By * ಯಶ್
|
May 21, judgement day
ಮೇ 21, ಜಡ್ಜಮೆಂಟ್ ಡೇ! ಅಮೆರಿಕದಲ್ಲಿರುವ ಕ್ರೈಸ್ತ ಧರ್ಮೀಯರೆಲ್ಲ ವಾರಾಂತ್ಯದಲ್ಲಿ ಮಾಡಬೇಕಿದ್ದ ಕೆಲಸ, ಪ್ರವಾಸ, ಮೋಜು ಮಸ್ತಿಗಳನ್ನೆಲ್ಲ ಬದಿಗಿಟ್ಟು ಸನ್ನಿಗೆ ಒಳಗಾದವರಂತೆ ಕ್ರೈಸ್ತನ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ, ತಾದಾತ್ಮ್ಯದಿಂದ ಬೈಬಲ್ ಓದುತ್ತಿದ್ದಾರೆ. ಇಂದು ಏನಾಗುವದೋ ಏನೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.

ಮೇ 21, ವಿಶ್ವ ಅಂತ್ಯವಾಗುವ ದಿನ. ಜಗತ್ ಪ್ರಳಯ ಸಂಭವಿಸಿ ವರ್ಷಾನುವರ್ಷಗಳಿಂದ ಕೂಡಿಟ್ಟ ಆಸ್ತಿಪಾಸ್ತಿ, ಬಂಧುಬಳಗವನ್ನು ಕಳೆದುಕೊಳ್ಳುತ್ತೇವೆಂಬ ಭಯ ಅನೇಕರಲ್ಲಿ ಆವರಿಸಿದೆ. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿದೆ. ಊರತುಂಬೆಲ್ಲ ಇದೆ ಮಾತು. ಹಾಗಾಗತ್ತಂತೆ, ಹೀಗಾಗತ್ತಂತೆ! ಉಳಿದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ನಡೆಯುತ್ತಿದೆ.

ಇಗರ್ಜಿಗಳು ಸಾಮೂಹಿಕ ಪ್ರಾರ್ಥನೆಗಳನ್ನು ಏರ್ಪಡಿಸಿವೆ. ಟಿವಿ, ರೇಡಿಯೋಗಳ ಮುಖಾಂತರ ಇಂದಿನ ದಿನದ ಎಚ್ಚರದಿಂದಿರಬೇಕೆಂದು ಸಾರಿಸಾರಿ ಹೇಳಲಾಗುತ್ತಿದೆ. ಬಸ್ ನಿಲ್ದಾಣ, ಮಾಲ್, ಸೇತುವೆ, ಕಟ್ಟಡಗಳು, ಹೋರ್ಡಿಂಗ್, ಪೋಸ್ಟ್ ಕಾರ್ಡ್, ಇಂಟರ್ನೆಟ್, ಮೊಬೈಲ್ ಮುಖಾಂತರ ಕ್ರೈಸ್ತ ಬರುತ್ತಿರುವ ಸಂದೇಶವನ್ನು ರವಾನಿಸಲಾಗುತ್ತಿದೆ. ನಮ್ಮ ಜ್ಯೋತಿಷಿಗಳಂತೆ ಅಲ್ಲಿನ ಬ್ರಹ್ಮಾಂಡ ಜ್ಯೋತಿಷಿಗಳು ತಮಗೆ ತಿಳಿದದ್ದು ಹೇಳುತ್ತಿದ್ದಾರೆ.

ಮೇಲಿಂದ ಮೇಲೆ ಸರ್ವನಾಶ ಮಾಡುವಂಥ ಭೂಕಂಪನಗಳಾಗುತ್ತಿವೆ, ಭೂತಾಪಮಾನ ಜಾಸ್ತಿಯಾಗುತ್ತಿದೆ, ಅಣ್ವಸ್ತ್ರ ಬಳಕೆಯ ಬಗ್ಗೆ ಹೆದರಿಕೆ ತಲೆಯ ಮೇಲೆ ತೂಗುತ್ತಿದೆ, ಭ್ರಷ್ಟಾಚಾರ ವಿಶ್ವವ್ಯಾಪಿಸಿದೆ, ಅಪರಾಧ ಜಾಸ್ತಿಯಾಗುತ್ತಿದೆ, ಆರ್ಥಿಕ ಮುಗ್ಗಟ್ಟು ತನ್ನ ಮುಷ್ಠಿ ಬಿಗಿ ಮಾಡುತ್ತಿದೆ... ಈ ಎಲ್ಲ ಕಾರಣಗಳು ಭೂಮಿಯ ಸರ್ವನಾಶಕ್ಕೆ ನಾಂದಿ ಹಾಡಲಿವೆ ಎಂದು ಅನೇಕರು ನಂಬಿದ್ದಾರೆ.

ಜಗತ್ ಪ್ರಳಯ ಇಂದೇ ಆಗುತ್ತದೆಂದು ನಂಬಿರುವ ಜನತೆಯಲ್ಲಿ ವಿಚಿತ್ರ ಭಯ ವ್ಯಾಪಿಸಿದೆ. ಜಗದ್ ರಕ್ಷಕನಾದ ಭಗವಂತನೆ, ಅವತರಿಸಿ ನಮ್ಮನ್ನು ಕಾಪಾಡು ತಂದೆಯೇ ಎಂದು ಜನರು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದಾರೆ. (ಓದಿ : ಪ್ರಾರ್ಥನೆಗೂ ಒಂದು ದಿನ) ಇದೇ ದಿನ ರೈಟ್ ಬ್ರದರ್ಸ್ ತಾವು ನಿರ್ಮಿಸಿದ್ದ ವಿಮಾನ ಎಷ್ಟೇ ಪ್ರಯತ್ನ ಪಟ್ಟರೂ ಹಾರಾಡಿದ್ದಿದಿಲ್ಲವಂತೆ. ಕೆಲಸ ಬೊಗಸಿ ಎಲ್ಲ ಬಿಟ್ಟ ಜನ ಕ್ರೈಸ್ತ ಪರಮಾತ್ಮ ಬರುತ್ತಾನೆಂದು ಕಾದಿದ್ದಾರೆ. ಬರುತ್ತಾನೆಯೆ? ಬಂದರೂ ಪ್ರಳಯವಾಗುವ ಮೊದಲು ಬರುತ್ತಾನೋ, ಆದ ನಂತರ ಬರುತ್ತಾನೋ ಗೊತ್ತಿಲ್ಲ!

English summary

May 21 end of the world | May 21 doomsday | May 21 judgement day | ಮೇ 21 ಜಗತ್ ಪ್ರಳಯವಾಗುವುದೆ? | ಜೀಸಸ್ ಕ್ರೈಸ್ತ ಮತ್ತೆ ಅವತರಿಸುವನೆ?

May 21, judgement day fear has gripped America. American christians have believed that world is going to end and Jesus Christ will come to rescue them. Is May 21, 2011 going to be a doomsday? Wait and watch till the end of the day. Happy weekend.
X
Desktop Bottom Promotion