For Quick Alerts
ALLOW NOTIFICATIONS  
For Daily Alerts

ನಿಮ್ಮ ಜೀವನದ ಗುರಿ ಸಾಧನೆಗೆ ಇಂಥಾ ವ್ಯಕ್ತಿಗಳು ನಿಮ್ಮ ಸುತ್ತ ಇದ್ದರೆ ಒಳ್ಳೆಯದು!

|

ಜೀವನದಲ್ಲಿ ಸ್ಪೂರ್ತಿ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ ಮತ್ತು ಹೆಚ್ಚಿನವರು ಯಾವುದೇ ಕೆಲಸ ಮಾಡುವ ಮೊದಲು ತಮ್ಮ ಹಿರಿಯರು ಅಥವಾ ಗುರುವಿನಿಂದ ಸ್ಪೂರ್ತಿ ಪಡೆಯುವರು. ಆದರೆ ಎಲ್ಲಾ ವ್ಯಕ್ತಿಗಳು ನಿಮಗೆ ಸ್ಫೂರ್ತಿ ಆಗಲು ಸಾಧ್ಯವಿಲ್ಲ. ಅವರು ಆ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಹಾಗೂ ಜ್ಞಾನ ಹೊಂದಿದ್ದರೆ, ನಿಮ್ಮನ್ನು ಕೂಡ ಪ್ರೇರೇಪಿಸಲು ಸಾಧ್ಯ. ಹಲವಾರು ಮಂದಿ ದೊಡ್ಡ ವ್ಯಕ್ತಿಗಳ ಜೀವನದಿಂದ ಸ್ಪೂರ್ತಿ ಹೊಂದಿ ಸಾಧನೆ ಮಾಡುವರು. ದೊಡ್ಡ ಸಾಧನೆ ಮಾಡಲು ಖಂಡಿತವಾಗಿಯೂ ನಮಗೆ ಸ್ಪೂರ್ತಿ ಎನ್ನುವುದು ಬೇಕೇ ಬೇಕು.

ಕೆಲವು ಜನರು ನಮಗೆ ಸ್ಪೂರ್ತಿ ನೀಡುವ ಪ್ರೇರೇಪಿಸುವ ಜತೆಗೆ, ನಾವು ಬೇರೆ ಕಡೆಯಿಂದಲೂ ಸ್ಪೂರ್ತಿ ಪಡೆಯುವಂತೆ ಮಾಡುವರು. ಇಷ್ಟು ಮಾತ್ರವಲ್ಲದೆ ಅವರ ಸ್ಪೂರ್ತಿಯು ನಮ್ಮ ಹೃದಯ ಹಾಗೂ ಮನಸ್ಸಿನಲ್ಲಿ ಒಂದು ಕಿಡಿ ಹತ್ತಿಸುವುದು. ಜೀವನದ ಉನ್ನತ ಗುಣಮಟ್ಟದ ಫಲಿತಾಂಶಗಳು ಸಿಗುವಂತಹ ಬೀಜವನ್ನು ಅವರು ನಮ್ಮಲ್ಲಿ ಬಿತ್ತುವರು.

Types Of People You Need to Surround Yourself With in Life

ಅಂತೆಯೇ ನಮ್ಮ ಸುತ್ತಮುತ್ತ ಕೆಲವು ಒಳ್ಳೆಯ ಗುಣಗಳಿರುವ ಜನರು ಇದ್ದರೆ ಖಂಡಿತ ನಿಮ್ಮ ಜೀವನದ ಯಶಸ್ಸು ಹಾಗೂ ನಿಮ್ಮಲ್ಲಿ ಸಕಾರಾತ್ಮಕ ಭಾವನೆ ಮೂಡುವುದರಲ್ಲಿ ಎರಡು ಮಾತಿಲ್ಲ. ಎಂತಹ ವ್ಯಕ್ತಿಗಳ ಸ್ನೇಹ ಒಳ್ಳೆಯದು, ಎಂಥಾ ವ್ಯಕ್ತಿಗಳನ್ನು ನಮ್ಮ ಸುತ್ತಮುತ್ತ ಇರಬೇಕು ಮುಂದೆ ಓದಿ.

ಭಾವೋದ್ರಿಕ್ತರು

ಭಾವೋದ್ರಿಕ್ತರು

ಭಾವೋದ್ರಿಕ್ತರು ಜೀವನದ ಮಾಧ್ಯಮದ ಮೂಲಕವಾಗಿ ತಮ್ಮ ತೀವ್ರತೆ ವ್ಯಕ್ತಪಡಿಸುವರು. ಅವರು ತಮ್ಮ ಕಾರ್ಯದಲ್ಲಿ ತುಂಬಾ ಆಳವಾಗಿ ತೊಡಗಿಸಿಕೊಳ್ಳುವರು. ಈ ಜನರು ತುಂಬಾ ಸ್ಪೂರ್ತಿ ಹೊಂದಿರುವ ಜನರು ಮತ್ತು ಅವರೊಂದಿಗೆ ಇದ್ದರೆ ನೀವು ಅವರಿಂದ ಕಲಿಯಬಹುದು. ನಿಮ್ಮ ಭಾವೋದ್ರೇಕವು ಯಾವ ಮಟ್ಟದಲ್ಲಿ ಇದೆ ಎಂದು ಅವರು ತೋರಿಸಿಕೊಡುವರು ಮತ್ತು ಅವರಂತೆ ಆಗಲು ಏನು ಮಾಡಬೇಕು ಎಂದು ತಿಳಿಯಲು ನಿಮಗೆ ಮಾರ್ಗದರ್ಶನ ನೀಡುವರು. ಅವರ ಭಾವನೆಗಳು ಸ್ಪಷ್ಟವಾಗಿದೆ ಮತ್ತು ಅದನ್ನು ಅವರು ಹೊರಚೆಲ್ಲುವರು. ಅವರ ಕಣ್ಣುಗಳಲ್ಲಿ ಹೊಳಪು ಮತ್ತು ಹೃದಯದಲ್ಲಿ ಪ್ರೀತಿ ಇರುತ್ತದೆ.

ಪ್ರೇರಣೆ ಹೊಂದಿರುವವರು

ಪ್ರೇರಣೆ ಹೊಂದಿರುವವರು

ಪ್ರೇರಣೆ ಹೊಂದಿರುವ ಜನರು ತಾವು ಹಿಡಿದಂತಹ ಕಾರ್ಯವನ್ನು ಮಾಡಿ ಮುಗಿಸುವರು. ಇವರು ತಮ್ಮ ಗುರಿ ಸಾಧಿಸುವಲ್ಲಿ ಯಾವತ್ತಿಗೂ ತೊಂದರೆಗೆ ಸಿಲುಕುವುದಿಲ್ಲ. ಯಾಕೆಂದರೆ ಇವರ ದೂರದೃಷ್ಟಿ ಮತ್ತು ಜೀವನವು ಬಲವಾಗಿರುವುದು. ಪ್ರೇರಣೆ ಹೊಂದಿರುವ ವ್ಯಕ್ತಿಗಳು ನಮ್ಮ ಜೀವನದಲ್ಲಿ ಅತೀ ಅಗತ್ಯವಾಗಿರುವರು. ಏಕೆಂದರೆ ಅವರು ಬಾಹ್ಯ ಪ್ರೇರಣೆ ವಿರುದ್ಧ ಹೊಂದಿರುವ ವ್ಯಕ್ತಿಯು ಆಂತರಿಕ ಪ್ರೇರಣೆಗೆ ಹೊಂದುವುರು ಎಂದು ತೋರಿಸಿಕೊಡುವರು. ನಿಮಗೆ ಸುತ್ತಲು ವಿರೋಧವಿದ್ದರೂ ಅದರಿಂದ ಪ್ರೇರಣೆ ಪಡೆಯುವುದು ಹೇಗೆ ಎಂದು ಅವರು ತೋರಿಸಿಕೊಡುವರು. ಈ ಜನರು ತಮ್ಮ ಜೀವನದಲ್ಲಿ ತುಂಬಾ ಕಠಿಣವಾಗಿ ಕೆಲಸ ಮಾಡುವರು ಮತ್ತು ಇತರರಿಗೆ ಪ್ರೇರಕರಾಗಿ ಇರುವರು. ವೇಳಾಪಟ್ಟಿ ತಯಾರಿಸುವುದು, ಮುಖ್ಯ ವಿಷಯಗಳ ಕಡೆ ಗಮನಹರಿಸುವುದು, ಒಂದರ ಬಳಿಕ ಮತ್ತೊಂದು ಕೆಲಸ ಪೂರೈಸುವುದು, ಹೀಗೆ ಹಲವಾರು.

ಕೃತಜ್ಞರು

ಕೃತಜ್ಞರು

ಕೃತಜ್ಞ ವ್ಯಕ್ತಿಗಳು ವರ್ತಮಾನದಲ್ಲಿ ಬದುಕುವರು ಮತ್ತು ಅವರು ಈಗಿರುವ ಅವರ ಪರಿಸ್ಥಿತಿ ಬಗ್ಗೆ ತುಂಬಾ ಕೃತಜ್ಞರಾಗಿ ಇರುವರು. ಅವರ ಉಪಸ್ಥಿತಿಯಲ್ಲಿ ನೀವು ತುಂಬಾ ಆರಾಮವಾಗಿ ಇರುವಂತೆ ಮಾಡುವರು ಮತ್ತು ತಮ್ಮಲ್ಲಿ ಒಂದು ಶಾಂತ ಶಕ್ತಿ ಹೊಂದಿರುವರು. ವರ್ತಮಾನದಲ್ಲಿ ಅವರು ಇರುವ ರೀತಿಯಿಂದಾಗಿ ನೀವು ಅವರ ಕಡೆ ಆಕರ್ಷಣೆಗೆ ಒಳಗಾಗುವಿರಿ. ನಕಾರಾತ್ಮಕವಾಗಿ ಇರುವಂತಹ ವಿಚಾರಗಳನ್ನು ಕೂಡ ಧನಾತ್ಮಕವಾಗಿ ನೋಡುವುದು ಹೇಗೆ ಎಂದು ಇವರು ಹೇಳುವರು. ಪ್ರಸಕ್ತ ವಾತಾವರಣದಲ್ಲಿ ಅವರಿಗೆ ಏನು ಸಿಗುತ್ತದೆಯೋ ಅದನ್ನು ಅವರು ಅನುಭವಿಸುವರು. ಅದು ಮರ, ಗಿಡ, ಹೂಗಳು, ಗಾಳಿ ಮತ್ತು ಹೀಗೆ ಹಲವಾರು. ತಮ್ಮ ಮನಸ್ಸನ್ನು ಯಾವಾಗಲೂ ಸಂತೋಷದ ಚಿಲುಮೆಯಂತೆ ತುಂಬಿಸಿಕೊಂಡಿರುವರು.

ಮುಕ್ತ ಮನಸ್ಸಿನವರು

ಮುಕ್ತ ಮನಸ್ಸಿನವರು

ಮುಕ್ತ ಮನಸ್ಸಿನವರು ಹೊಸ ಆಲೋಚನೆಗಳು, ಜನರು, ಸ್ಥಳ, ಅನುಭವ ಹೀಗೆ ಇತರ ಹಲವಾರು ವಿಚಾರಗಳಿಗೆ ನಿಮ್ಮನ್ನು ಒಡ್ಡಿಕೊಳ್ಳುವಂತೆ ಮಾಡುವರು. ಹೊಸ ಜಗತ್ತಿಗೆ ನಿಮ್ಮನ್ನು ಅವರು ಪರಿಚಯಿಸುವರು ಮತ್ತು ಇದರಿಂದ ನಿಮ್ಮ ದೃಷ್ಟಿಕೋನವು ಮತ್ತಷ್ಟು ತೀಕ್ಷ್ಣವಾಗುವುದು. ನಿಮಗೆ ತುಂಬಾ ಅಹಿತರ ಎಂದು ಭಾವಿಸಿದಂತಹ ಕೆಲವೊಂದು ವಿಚಾರಗಳಲ್ಲಿಯೂ ಇವರು ಹಿತಕರ ಭಾವನೆ ಉಂಟು ಮಾಡುವರು. ಆರಾಮ ವಲಯದಿಂದ ಹೊರಬಂದು ಯೋಜನೆ ಮಾಡುವಂತೆ ಇವರು ಮಾಡುವರು.

ಉನ್ನತ ಗುಣಮಟ್ಟದ ವಾತಾವರಣ

ಉನ್ನತ ಗುಣಮಟ್ಟದ ವಾತಾವರಣ

ಈ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ನಿಮ್ಮ ಜೀವನದಲ್ಲಿ ಒಂದು ಗುಣಮಟ್ಟದ ವಾತಾವರಣ ನಿರ್ಮಾಣ ಮಾಡುವರು. ಉನ್ನತ ಗುಣಮಟ್ಟದ ವಾತಾವರಣ ನಿರ್ಮಾಣ ಮಾಡಿದರೆ, ಆಗ ಉನ್ನತ ಗುಣಮಟ್ಟದ ಜೀವನವು ನಿರ್ಮಾಣವಾದಂತೆ. ಈ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಒಂದು ಸಹಕ್ರಿಯೆಯ ಪರಿಣಾಮ ಉಂಟು ಮಾಡುವರು. ಒಂದು ಅಂಶವು ತುಂಬಾ ಬಲಿಷ್ಠವಾಗಿದೆ ಮತ್ತು ಇದೆಲ್ಲವನ್ನೂ ಜತೆಗೂಡಿಸಿಕೊಂಡರೆ ಆಗ ಖಂಡಿತವಾಗಿಯೂ, ನೀವು ಆಲೋಚನೆ ಮಾಡದೆ ಇರುವಂತಹ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಬಹುದು, ಸ್ಪೂರ್ತಿಯ ಜನರು ನಿಮ್ಮಲ್ಲಿ ಸ್ಪೂರ್ತಿ ತುಂಬುವರು, ಭಾವೋದ್ರಿಕ್ತ ಜನರು ನಿಮ್ಮಲ್ಲಿ ಭಾವೋದ್ರಿಕ್ತತೆ ಉಂಟು ಮಾಡುವರು, ಪ್ರೇರಿತ ಜನರು ನಿಮ್ಮಲ್ಲಿ ಪ್ರೇರಣೆ ತುಂಬುವರು, ಕೃತಜ್ಞತೆಯ ಜನರು ನಿಮ್ಮಲ್ಲೂ ಈ ಭಾವ ತರಿಸುವರು, ಮುಕ್ತ ಮನಸ್ಸಿನ ಜನರು ನಿಮ್ಮಲ್ಲೂ ಈ ಅಭ್ಯಾಸ ರೂಪಿಸುವರು.

ಇಂತಹ ಜನರೊಂದಿಗೆ ನೀವು ಹೆಚ್ಚಿನ ಸಮಯ ಕಳೆದರೆ ಆಗ ಖಂಡಿತವಾಗಿಯೂ ಅವರು ನಿಮಗೆ ಕೆಲವೊಂದು ಗುಣಗಳನ್ನು ವರ್ಗಾಯಿಸುವರು, ಅವರು ಆಲೋಚಿಸುವ ರೀತಿ, ಅವರ ಕ್ರಮಗಳು, ಅಭ್ಯಾಸ ಹೀಗೆ ಎಲ್ಲವನ್ನೂ ನೀವು ತಿಳಿಯುವಿರಿ. ಇದರಿಂದಾಗಿ ನಿಮಗೆ ಹೊಸ ದೃಷ್ಟಿಕೋನ ಸಿಗುವುದು ಮತ್ತು ನಿಮ್ಮದೇ ಆಗಿರುವಂತಹ ರೀತಿಯಲ್ಲಿ ನೀವು ಹೊಸ ಪ್ರಕ್ರಿಯೆಯನ್ನು ಆರಂಭಿಸಬಹುದು.

ಇಂತಹ ವ್ಯಕ್ತಿಗಳನ್ನು ಗುರುತಿಸುವುದು ಹೇಗೆ?

ಇಂತಹ ವ್ಯಕ್ತಿಗಳನ್ನು ಗುರುತಿಸುವುದು ಹೇಗೆ?

ನೀವು ಸರಳವಾಗಿ ಆಲೋಚನೆ ಮಾಡಿ. ನಮ್ಮ ಗಮನವನ್ನು ಅವರ ಬಗ್ಗೆ ಜಾಗೃತಿ ಮತ್ತು ಅವರ ಗುಣಗಳ ತಿಳಿಯಲು ಬಳಸಿಕೊಂಡರೆ ಆಗ ಖಂಡಿತವಾಗಿಯೂ ನಾವು ಇಂತಹ ವ್ತಕ್ತಿಗಳನ್ನು ಆಕರ್ಷಿಸಬಹುದು. ತಹ ವ್ಯಕ್ತಿಗಳ ಬಗ್ಗೆ ನಿಮ್ಮ ಮನಸ್ಸನ್ನು ಒಂದು ಸಲ ಕೇಂದ್ರೀಕರಿಸಿದರೆ ಆಗ ನೀವು ಇಂತಹ ವ್ಯಕ್ತಿಗಳನ್ನು ಹುಡುಕುವ ಬದಲು ಅವರು ಇರುವಂತಹ ವಾತಾವರಣದಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಬಹುದು.

ಮುಕ್ತ ಮನಸ್ಸು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಂದರೆ ಹೊಸ ವ್ಯಕ್ತಿಗಳನ್ನು ಹುಡುಕುವ ಶ್ರೇಷ್ಠ ಅವಕಾಶ

ನೀವು ಇಂತಹ ಜನರನ್ನು ಭೇಟಿಯಾಗುವ ಮೊದಲು ನೀವು ಏನು ಆಗಬೇಕೆಂದು ಇದ್ದೀರಿ ಎನ್ನುವುದನ್ನು ಮೊದಲು ನಿರ್ಧಾರ ಮಾಡಿ. ನೀವು ಏನು ಆಗಬೇಕು ಎಂದಿದ್ದೀರಾ, ಅದೇ ರೀತಿಯಾಗಿ ನಿಮ್ಮ ನಡವಳಿಕೆಯು ಇರಬೇಕು. ನೀವು ಭೇಟಿಯಾಗಲು ಬಯಸಿದ ವ್ಯಕ್ತಿಯಂತೆ ನೀವು ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ನೀವು ಅಂತಹ ಜನರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾತ್ಕಾಲಿಕವಾಗಿ ಇದು ತುಂಬಾ ಅಹಿತಕರ ಎಂದು ಅನಿಸಬಹುದು. ಆದರೆ ನೀವು ಸಣ್ಣ ಬೆಲೆ ಕೊಟ್ಟು ದೊಡ್ಡ ಮಟ್ಟದ ಉಡುಗೊರೆ ಪಡೆಯಬಹುದು. ಸರಿಯಾಗಿ ಇಂತಹ ಜನರೊಂದಿಗೆ ಸಂಬಂಧವನ್ನಿಟ್ಟುಕೊಂಡರೆ ಆಗ ಖಂಡಿತವಾಗಿಯೂ ಜೀವನವು ಅಬಿವೃದ್ಧಿ ಪಥದತ್ತ ಸಾಗುವುದರಲ್ಲಿ ಸಂಶಯವೇ ಇಲ್ಲ.

English summary

Types Of People You Need to Surround Yourself With in Life

The inspired people are those who create the urge or ability for you to do something within your life. These are the people who create a feeling of awe within you and create a state of mind that is empowering as opposed to disempowering. The inspired are those who spark a curiosity within your heart and mind and cause you to search for inspiration elsewhere as well. They breed n environment of inspiration which leads to high quality results in life.
X
Desktop Bottom Promotion