For Quick Alerts
ALLOW NOTIFICATIONS  
For Daily Alerts

ನಿಶ್ಚಿತಾರ್ಥ ಆದ ಮೇಲೆ ಈ ರೀತಿ ಅನಿಸಿದರೆ ಮದುವೆಯಾಗದಿರುವುದೇ ಬೆಸ್ಟ್

|

ಮದುವೆವೆಂಬುವುದು ಸ್ವರ್ಗದಲ್ಲಿ ನಿಶ್ಚಿಯವಾಗುತ್ತೆ ಅಂತಾರೆ, ಆದರೆ ನಿಶ್ಚಿಯವಾದ ಮೇಲೆ ಏನೋ ಸಮ್‌ಥಿಂಗ್‌ ರಾಂಗ್‌ ಇದೆ ಅನಿಸಿದರೆ ಆ ಮದುವೆ ಮಾಡಿರುವುದೇ ಬೆಸ್ಟ್‌. ಹೌದು ಎಷ್ಟೋ ಮದುವೆಗಳಲ್ಲಿ ನಿಶ್ಚಿಯವಾದಾಗಲೇ ಏಕೋ ಈ ಸಂಬಂಧ ಸರಿ ಬರುತ್ತಿಲ್ಲ ಎಂದು ಗೊತ್ತೊರುತ್ತದೆ, ಆದರೆ ಮುಂದೆ ಸರಿಹೋಗುತ್ತೆ, ಎಂದು ಭಾವಿಸಿ ಮದುವೆಯಾಗಲು ಮುಂದಾಗುತ್ತಾರೆ.

ಆದರೆ ಆ ರಿಸ್ಕ್‌ ತಗೋಬೇಡಿ , ಏಕೆಂದರೆ ಅಂಥ ಮದುವೆಯಿಂದ ಮುಂದೆ ಬದುಕು ನರಕವಾಗಬಹುದು, ಮದುವೆಯಾದ ಮೇಲೆ ಬೇರೆ-ಬೇರೆಯಾದರೆ ಮಾನಸಿಕ ನೋವು ಕೂಡ ಜಾಸ್ತಿ ಇರುತ್ತದೆ, ಅದಕ್ಕಿಂತ ಏಕೋ ಸರಿಬರುತ್ತಿಲ್ಲ ಎಂದು ಕಂಡು ಬಂದರೆ ಸಂಬಂಧ ಶುರುವಾಗುವ ಮುನ್ನವೇ ಗುಡ್‌ಬೈ ಹೇಳುವುದು ಬೆಸ್ಟ್.

ಅದರಲ್ಲೂ ನಿಶ್ಚಿಯವಾದ ಮೇಲೆ ಈ ರೀತಿ ಅನಿಸಿದರೆ ಆ ಸಂಬಂಧ ಮುಂದುವರಿಸದಿದ್ದರೆ ಒಳ್ಳೆಯದು:

ಮದುವೆ ಬಗ್ಗೆ ಯಾವುದೇ ಎಕ್ಸೈಟ್‌ ಇಲ್ಲದಿದ್ದರೆ

ಮದುವೆ ಬಗ್ಗೆ ಯಾವುದೇ ಎಕ್ಸೈಟ್‌ ಇಲ್ಲದಿದ್ದರೆ

ನಿಮಗೆ ಅಥವಾ ನಿಮ್ಮ ಸಂಗಾತಿಗೆ ಮದುವೆ ಬಗ್ಗೆ ಯಾವುದೇ ಎಕ್ಸೈಟ್‌ ಇಲ್ಲದಿದ್ದರೆ ಏಕೋ ನಿಮ್ಮಿಬ್ಬರ ಕೆಮಿಸ್ಟ್ರಿ ವರ್ಕ್‌ ಆಗ್ತಾ ಇಲ್ಲ ಎಂದರ್ಥ. ಮದುವೆ ನಿಶ್ಚಿಯವಾದ ಮೇಲೆ ಪ್ರೀತಿ ಹೆಚ್ಚುತ್ತೆ, ತುಂಬಾ ಮಾತನಾಡಬೇಕು, ಆದಷ್ಟ ಬೇಗ ಸಿಗಬೇಕು, ಕೂಡಿ ಬಾಳಬೇಕು ಎಂಬ ಎಕ್ಸೈಟ್‌ಮೆಂಟ್‌ ಇಲ್ಲದಿದ್ದರೆ ಏನೋ ಸಮ್‌ಥಿಂಗ್‌ ಮಿಸ್ಸಿಂಗ್‌ ಇದೆ ಎಂದರ್ಥ, ಹೀಗಿದ್ದಾಗ ಓಪನ್‌ ಆಗಿ ಇಬ್ಬರು ಮಾತನಾಡಿ, ಆಗ ಒಂದು ಸ್ಪಷ್ಟತೆ ಸಿಗುತ್ತೆ.

ನಿಮ್ಮ ಸಂಗಾತಿ ಬದಲಾಗಬಹುದು, ಬದಲಾಗಬೇಕು ಎಂದು ಬಯಸುತ್ತಿದ್ದರೆ

ನಿಮ್ಮ ಸಂಗಾತಿ ಬದಲಾಗಬಹುದು, ಬದಲಾಗಬೇಕು ಎಂದು ಬಯಸುತ್ತಿದ್ದರೆ

ನಮ್ಮ ಸಂಗಾತಿಯ ಕೆಲ ಗುಣಗಳು ನಮಗೆ ಇಷ್ಟವಿರಲ್ಲ, ಆದರೆ ನೀವು ಅವರ ಆ ಗುಣ ಅಥವಾ ಆ ಅಭ್ಯಾಸ ಬದಲಾಗಬೇಕೆಂದು ಬಯಸುತ್ತಿದ್ದರೆ ನೀವು ಅಂಥ ಸಂಬಂಧದಲ್ಲಿ ಮುಂದುವರೆಯದಿದ್ದರೆ ಒಳ್ಳೆಯದು, ಏಕೆಂದರೆ ಮುಂದೆ ಅವರು ಬದಲಾಗಬಹುದೆಂದು ಬಯಸಿ ನೀವು ಮದುವೆಯಾಗಿ ನಂತರ ಅವರು ಬದಲಾಗದಿದ್ದರೆ ದೊಡ್ಡ ನಿರಾಸೆ ಉಂಟಾಗುತ್ತೆ. ನಂತರ ಆ ಕಾರಣಕ್ಕೆ ದೊಡ್ಡ ಜಗಳವಾಗಬಹುದು, ನಂತರ ಅಂತರ ಹೆಚ್ಚಬಹುದು, ಆದ್ದರಿಂದ ಅವರ ಗುಣಗಳನ್ನು ಹಾಗೆಯೇ accept ಮಾಡಲು ಆದರೆ ಮಾಡಿ, ಇಲ್ಲಾ ಅಂದ್ರೆ ಮುಂದುವರಿಯಲು ಹೋಗಬೇಡಿ.

ಮದುವೆಗೆ ಮುನ್ನ ತುಂಬಾ ಡಿಮ್ಯಾಂಡ್‌

ಮದುವೆಗೆ ಮುನ್ನ ತುಂಬಾ ಡಿಮ್ಯಾಂಡ್‌

ಹುಡುಗ-ಹುಡುಗಿ ಬಳಿ, ಹುಡುಗಿ-ಹುಡುಗನ ಬಳಿ ತುಂಬಾ ಡಿಮ್ಯಾಂಡ್ ಮಾಡುತ್ತಿದ್ದರೆ ಅಂದರೆ ನಂಗೆ ಅದು ಬೇಕು, ಇದು ಬೇಕು ಅಥವಾ ನಿನ್ನ ಮನೆಯಿಂದ ಅದು ತಗೊಂಡು ಬರಬೇಕು ಎಂದೆಲ್ಲಾ ಡಿಮ್ಯಾಂಡ್ ಮಾಡುತ್ತಿದ್ದರೆ ಅಥವಾ ಫ್ರೆಂಡ್ಸ್‌ ಜೊತೆ ಮಾತನಾಡ ಬೇಡ ಎಂದೆಲ್ಲಾ ಇದ್ದರೆ ಆ ಸಂಬಂಧ ಶುರು ಮಾಡುವ ಮುನ್ನ ಮತ್ತೊಮ್ಮೆ ಯೋಚಿಸಿ.

ಬೇರೆಯವರಿಗಾಗಿ ನೀವು ಮದುವೆಯಾಗುತ್ತಿದ್ದರೆ

ಬೇರೆಯವರಿಗಾಗಿ ನೀವು ಮದುವೆಯಾಗುತ್ತಿದ್ದರೆ

ಕೆಲವರು ಅಪ್ಪ-ಅಮ್ಮನ ಒತ್ತಾಯಕ್ಕೆ ಮದುವೆಯಾಗುತ್ತಾರೆ, ಈ ರೀತಿ ಮದುವೆಯಾದರೆ ಖುಷಿಯಾಗಿರಲು ಸಾಧ್ಯವಿಲ್ಲ, ನಾವು ಮದುವೆಯಾಗುವ ಸಂಗಾತಿಯನ್ನುಇಷ್ಟಪಟ್ಟು ಮದುವೆಯಾಗಬೇಕು. ಇಷ್ಟವಿಲ್ಲದ ಮದುವೆಯಲ್ಲಿ ಸುಖ ಖಂಡಿತ ಇರಲ್ಲ, ಆ ರೀತಿಯಾಗಿ ಮದುವೆಯಾದರೆ ಸಂಗಾತಿಗೆ ನೀವೇ ಮೋಸ ಮಾಡಿದಂತೆ, ಇಷ್ಟವಿಲ್ಲದ ಮದುವೆಗೆ ಮೋಸ ಮಾಡಲೇಬೇಡಿ.

ಬೇರೆ ಪ್ರೀತಿಯಲ್ಲಿದ್ದರೆ

ಬೇರೆ ಪ್ರೀತಿಯಲ್ಲಿದ್ದರೆ

ಬೇರೆಯವರನ್ನು ಪ್ರೀತಿಸುತ್ತಿದ್ದು ಯಾವುದೋ ಕಾರಣ ಆ ಪ್ರೀತಿಯನ್ನು ಮನೆಯಲ್ಲಿ ಹೇಳಲು ಸಾಧ್ಯವಾಗದೆ ಮನೆಯವರು ತೋರಿಸಿದವರಿಗೆ ಯೆಸ್‌ ಹೇಳಲೇಬೇಡಿ, ಏಕೆಂದರೆ ಮದುವೆಯಾಗುವ ವ್ಯಕ್ತಿಗೆ 100% ಪ್ರೀತಿ ಕೊಡೋಕೆ ಸಾಧ್ಯವಾಗಲ್ಲ ಆದ್ದರಿಂದ ಇಷ್ಟವಿಲ್ಲದ ಸಂದರ್ಭದಲ್ಲಿ ಮುಂದುವರಿಯಲೇಬೇಡಿ.

ಪರಸ್ಪರ ಮೀಟ್‌ ಮಾಡಲು, ಕಾಲ್‌ ಮಾಡಲು ಆಸಕ್ತಿ ತೋರಿಸದಿದ್ದರೆ

ಪರಸ್ಪರ ಮೀಟ್‌ ಮಾಡಲು, ಕಾಲ್‌ ಮಾಡಲು ಆಸಕ್ತಿ ತೋರಿಸದಿದ್ದರೆ

ಎಂಗೇಜ್‌ಮೆಂಟ್‌ ಬಳಿಕ ಪರಸ್ಪರ ಮಾತನಾಡಲು ಅಥವಾ ಮೀಟ್ ಮಾಡಲು ಸಿಗದಿದ್ದರೆ, ಅವರು ಬೇಕಂತಲೇ ನಿಮ್ಮನ್ನು ಅವಾಯ್ಡ್‌ ಮಾಡುತ್ತಿದ್ದರೆ ಮುಂದೆ ಸರಿಹೋದೀತು ಎಂದು ಯೋಚಿಸಿ ಸುಮ್ಮನೆಯಾಗಬೇಡಿ, ಏಕೆಂದರೆ ಅಂಥವರು ಮದುವೆಯ ನಂತರ ಕೂಡ ಹಾಗೆಯೇ ಇರುತ್ತಾರೆ, ಆದ್ದರಿಂದ ಮದುವೆಗೆ ಮುನ್ನ ನಿಮ್ಮ ಸಂಗಾತಿಯ ವರ್ತನೆ ಕಡೆ ಗಮನ ನೀಡಬೇಕು, ಅವರು ನಿಮ್ಮ ಹತ್ರ ಮಾತನಾಡಲು ಆಸಕ್ತಿ ತೋರುತ್ತಿಲ್ಲ ಎಂದಾದರೆ ಆ ನಿಶ್ಚಿತಾರ್ಥ ಬ್ರೇಕ್‌ಅಪ್ ಮಾಡಿ, ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಸಿಕ್ಕೇ ಸಿಗುತ್ತಾರೆ.

English summary

Signs You Need to Break Off Your Engagement in Kannada

If you found these kind of signs after engagement better to breakup, read on...
Story first published: Monday, August 8, 2022, 16:00 [IST]
X
Desktop Bottom Promotion