For Quick Alerts
ALLOW NOTIFICATIONS  
For Daily Alerts

ಸಂಗಾತಿ ಜೊತೆ ಜಗಳವಾಡುತ್ತೀರಾ ಗುಡ್‌, ಆದರೆ ಈ ವಿಷಯ ನೆನಪಿರಲಿ

|

ನಿಮಗೆ ನಿಮ್ಮ ಸಂಗಾತಿ ಮೇಲೆ ಯಾವುದೋ ಕಾರಣಕ್ಕೆ ತುಂಬಾ ಕೋಪ ಬರುತ್ತದೆ ಆಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ? ಜೋರಾಗಿ ಕಿರುಚಾಡುತ್ತೀರಾ ಅಥವಾ ಸೈಲೆಂಟ್ ಆಗಿ ಇದ್ದು ಬಿಡುತ್ತೀರಾ? ಈ ಎರಡೂ ಮಾಡುವುದು ನಿಮ್ಮ ಸಂಬಂಧಕ್ಕೆ ಹಾನಿಯುಂಟು ಮಾಡುವುದು, ಅದರಲ್ಲೂ ಸೈಲೆಂಟ್‌ ಆಗಿರುವುದು ಇದೆಯೆಲ್ಲಾ ಅದು ತುಂಬಾನೇ ಅಪಾಯಕಾರಿ.

Right way to fight with your partner

ಜಗಳ ಮಾಡದೇ ಇರುವ ಗಂಡ-ಹೆಂಡತಿ ಇರಲ್ಲ, ಎಷ್ಟೇ ಪ್ರೀತಿ ಇರಲಿ ಏನೋ ಒಂದು ವಿಷಯಕ್ಕೆ ಚಿಕ್ಕ-ಪುಟ್ಟ ಜಗಳವಾಗದೇ ಇರಲ್ಲ, ಹಾಗೇ ಆಗಲಿಲ್ಲ ಅಂದ್ರೆ ಆ ಸಂಸಾರದಲ್ಲಿ ಏನೋ ತೊಂದರೆಯಿದೆ ಎಂದರ್ಥ, ಚಿಕ್ಕದಾಗಿ ಒಂದು ಜಗಳವಾಡಿ ನಂತರ ಮಾತನಾಡುವಾಗ ಇಬ್ಬರಲ್ಲೂ ಪ್ರೀತಿ, ರೊಮ್ಯಾಂಟಿಕ್‌ ಭಾವನೆ ಮತ್ತಷ್ಟು ಹೆಚ್ಚುವುದು. ಆದರೆ ಆ ಜಗಳ ಅಲ್ಲಿಗೇ ಮುಗಿಯಬೇಕಷ್ಟೇ... ಅದು ಮುಂದುವರೆದರೆ ನೆಮ್ಮದಿ ಹಾಳಾಗುವುದು.

 ಒಂದು ವಿಷಯವನ್ನು ತುಂಬಾ ಎಳೆಯಬೇಡಿ

ಒಂದು ವಿಷಯವನ್ನು ತುಂಬಾ ಎಳೆಯಬೇಡಿ

ಗಂಡ-ಹೆಂಡತಿ ನಡುವೆ ಏನಾದರೂ ಮನಸ್ತಾಪ ಉಂಟಾದರೆ ಅದು ಆ ಕ್ಷಣದಲ್ಲಿ ಹೇಳಿ ಪರಿಹರಿಸಿ ಬಿಡಬೇಕು, ಅದೇ ವಿಷಯವನ್ನು ಎಳೆಯುತ್ತಾ ಹೋಗಬಾರದು, ಆ ರೀತಿ ಮಾಡಿದರೆ ಜಗಳ ಮುಗಿಯುವುದಿಲ್ಲ. ಅಲ್ಲದೆ ಯಾವುದೋ ವಿಷಯಕ್ಕೆ ಜಗಳವಾದಾಗ ಹಳೆಯ ವಿಷಯವನ್ನು ಕೆದಕಲು ಹೋಗಬೇಡಿ ಹೀಗೆ ಮಾಡಿದರೆ ಇಬ್ಬರ ನಡುವೆ ಅಂತರ ಹೆಚ್ಚುವುದು.

ಸೈಲೆಂಟ್‌ ಆದರೆ ಅಪಾಯ ಹೆಚ್ಚು

ಸೈಲೆಂಟ್‌ ಆದರೆ ಅಪಾಯ ಹೆಚ್ಚು

ಅದೇ ರೀತಿ ಸಂಗಾತಿ ಮೇಲೆ ಯಾವುದೋ ವಿಷಯಕ್ಕೆ ಅಸಮಧಾನ ಅಥವಾ ಕೋಪ ಉಂಟಾದರೆ ಅದನ್ನು ನಿಮ್ಮ ಮನಸ್ಸಿನಲ್ಲಿಯೇ ಇಟ್ಟು ಸೈಲೆಂಟ್‌ ಆಗಬೇಡಿ, ಅದರಿಂದ ನಿಮ್ಮಿಬ್ಬರ ನಡುವಿನ ಗ್ಯಾಪ್‌ ಹೆಚ್ಚಾಗುವುದು. ಆದ್ದರಿಂದ ಏನಾದರೂ ನಿಮ್ಮ ಮನಸ್ಸಿನಲ್ಲಿದ್ದರೆ ಅವರೊಂದಿಗೆ ಆ ಕುರಿತು ಮಾತನಾಡಿ, ಈ ವಿಷಯಕ್ಕೆ ನಿಮ್ಮಿಬ್ಬರ ನಡುವೆ ಚಿಕ್ಕ ಜಗಳ ಆಗಬಹುದು, ಆದರೆ ಆ ಮನಸ್ತಾಪ ಅಲ್ಲಿಗೆ ಮುಗಿಯುವುದು, ಇಲ್ಲದಿದ್ದರೆ ಚಿಕ್ಕ ಕಿಡಿ ದೊಡ್ಡ ಬೆಂಕಿಯಾಗಿ ಕುಟುಂಬವನ್ನೇ ಭಸ್ಮ ಮಾಡುವುದು, ಆದ್ದರಿಂದ ಜಗಳವಾಗುತ್ತೆ ಎಂದು ಭಯಪಟ್ಟು ಸಂಬಂಧದಲ್ಲಿ ಅಂತರ ಉಂಟು ಮಾಡುವುದಕ್ಕಿಂತ ಮುಕ್ತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದು ಜಾಣತನ.

 ಜಗಳ ಹೆಚ್ಚಾಗದಂತೆ ತಡೆಯಲು ಈ ಟಿಪ್ಸ್ ಸಹಕಾರಿ:

ಜಗಳ ಹೆಚ್ಚಾಗದಂತೆ ತಡೆಯಲು ಈ ಟಿಪ್ಸ್ ಸಹಕಾರಿ:

1. ನಿಮ್ಮ ಸಂಗಾತಿ ಏನು ಹೇಳುತ್ತಿದ್ದಾರೆ ಎಂಬುವುದನ್ನು ಸಂಪೂರ್ಣವಾಗಿ ಕೇಳಿ, ಅವರ ಮಾತನಾಡುವಾಗ ಜೋರಾಗಿ ನೀವು ಕಿರುಚಿ ಅವರ ಮಾತನ್ನು ತುಂಡರಿಸಬೇಡಿ.

2. ಅವರ ಮಾತುಗಳನ್ನು ಕೇಳಿದ ಬಳಿಕ ನಿಮಗೆ ಹೇಳ ಬೇಕಾಗಿರುವುದನ್ನು ಹೇಳಿ.

3. ಪದೇ ಪದೇ ಜಗಳವಾಗುತ್ತಿದ್ದರೆ ಆ ಜಗಳ ಏಕೆ ಆಗುತ್ತಿದೆ ಎಂಬುವುದನ್ನು ಯೋಚಿಸಿ, ಅದನ್ನು ತಪ್ಪಿಸಲು ನಿಮ್ಮಿಂದ ಸಾಧ್ಯವೇ ಎಂದು ಯೋಚಿಸಿ, ಜಗಳ ಕಾರಣವಾಗುವ ವಿಷಯಗಳನ್ನು ತಪ್ಪಿಸಿ.

4. ನೀನು ಮಾಡಿದ್ದು, ನಿನ್ನಿಂದ ಆಗಿದ್ದು ಎಂದು ದೂಷಿಸುವ ಬದಲಿಗೆ ನನಗೆ ಅನಿಸಿದ್ದು ಅಂತ ಹೇಳಿ, ನೀನೇ ಮಾಡಿದ್ದು, ನಿನ್ನಿಂದಲೇ ಆಗಿದ್ದು ಎಂದು ದೂರುತ್ತಿದ್ದರೆ ಅವರಿಗೆ ಕೋಪ ಹೆಚ್ಚಬಹುದು, ಹೌದು ನಾನೇ ಹಾಗೇ ಮಾಡುತ್ತೀನಿ ಎಂದು ವಾದಿಸಬಹುದು, ಅದರ ಬದಲಿಗೆ ನಿಮ್ಮ ಪದ ಪ್ರಯೋಗವನ್ನು ಬದಲಾಯಿಸಿ.

5. ತುಂಬಾ ಕೋಪ ಬಂತು ನಿಮ್ಮನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದನಿಸಿದರೆ ಮಾತು ಬೆಳೆಸದೆ ಸ್ವಲ್ಪ ಹೊತ್ತು ಆ ಸ್ಥಳದಲ್ಲಿ ಇರಬೇಡಿ, ಆಗ ನಿಮ್ಮ ಕೋಪ ಕಡಿಮೆಯಾಗುವುದು ಸಮಸ್ಯೆಯ ಕುರಿತು ನಿಧಾನವಾಗಿ ಮಾತನಾಡಬಹುದು.

6. ಜಗಳವಾಡುವಾಗ ಕಿರುಚಾಡಬೇಡಿ, ಹೊಡೆಯಲು ಕೈಯತ್ತಬೇಡಿ, ಹೀಯಾಳಿಸಬೇಡಿ...

ಜಗಳವಾಡಿ ಆದರೆ ಅದು ಅತಿರೇಕವಾಗಲು ಬಿಡಬೇಡಿ, ಸುಂದರ ಸಂಸಾರದ ಗುಟ್ಟು ಹೊಂದಾಣಿಕೆ ಎಂಬುವುದು ನೆನಪಿರಲಿ.

English summary

Right Way To Fight With Your Partner in Kannada

Right way to fight with your partner in Kannada, read on..
Story first published: Tuesday, January 25, 2022, 21:11 [IST]
X
Desktop Bottom Promotion