For Quick Alerts
ALLOW NOTIFICATIONS  
For Daily Alerts

ಮಕ್ಕಳ ನಡುವಿನ ವಯಸ್ಸಿನ ಅಂತರ ಸಂಬಂಧಕ್ಕೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

|

ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರವೇ ಜಾಹೀರಾತು ಮೂಲಕ ಜನರನ್ನು ಜಾಗೃತಿಗೊಳಿಸುತ್ತಿದೆ. ಆದರೆ ಎಷ್ಟು ವರ್ಷಗಳ ಅಂತರ ಮಕ್ಕಳಿಗೆ ಒಳ್ಳೆಯದು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಯಾಕೆಂದರೆ ಮಕ್ಕಳ ನಡುವೆ ಹೆಚ್ಚಿನ ಅಂತರ ಕೂಡ ಒಳ್ಳೆಯದಲ್ಲ. ಮೊದಲ ಮಗುವಿನ ಬಳಿಕ ಮತ್ತೊಂದು ಮಗುವನ್ನು ಪಡೆಯಲು ಕೆಲವರು ಅವಸರ ಮಾಡಿದರೆ, ಇನ್ನು ಕೆಲವರು ಜನರು ವಿಳಂಬ ಮಾಡುವರು.

Which Is The Best Age Difference Between Childrens

ನಿಜವಾಗಿಯೂ ಎರಡು ಮಕ್ಕಳ ನಡುವಿನ ಅಂತರವು ಎಷ್ಟು ವರ್ಷಗಳು ಇರಬೇಕು ಎನ್ನುವ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಮಕ್ಕಳ ನಡುವಿನ ಅಂತರದ ಅನುಕೂಲಗಳು ಹಾಗೂ ಅನಾನುಕೂಲಗಳು ಕೂಡ ಇಲ್ಲಿವೆ.

ಮಕ್ಕಳ ಮಧ್ಯೆ ಹೆಚ್ಚು ವರ್ಷಗಳ ಅಂತರವಿದ್ದರೆ ಏನು ಲಾಭ

ಮಕ್ಕಳ ಮಧ್ಯೆ ಹೆಚ್ಚು ವರ್ಷಗಳ ಅಂತರವಿದ್ದರೆ ಏನು ಲಾಭ

ಮಕ್ಕಳ ಮಧ್ಯೆ ಅಂತರವಿದ್ದರೆ ಆಗ ನೀವು ಮಗುವಿನ ಸಂಪೂರ್ಣ ಬೆಳವಣಿಗೆ ಮೇಲೆ ಹೆಚ್ಚು ಗಮನ ನೀಡಬಹುದು. ದೊಡ್ಡ ಮಗುವಿನಿಂದ ಸಣ್ಣ ಮಗುವು ಮಾತನಾಡುವುದನ್ನು, ಓದುವುದನ್ನು ಮತ್ತು ಇತರ ಕೆಲವು ಕಲಿಯಬಹುದು.

ಪ್ರತೀ ಮಗುವಿಗೆ ಹೆಚ್ಚಿನ ಸಮಯ ನೀಡಬಹುದು

ಪ್ರತೀ ಮಗುವಿಗೆ ಹೆಚ್ಚಿನ ಸಮಯ ನೀಡಬಹುದು

ದೊಡ್ಡ ಮಗು ಶಾಲೆಗೆ ಹೋದ ವೇಳೆ ನೀವು ಸಣ್ಣ ಮಗುವಿನ ಜತೆಗೆ ಇರಬಹುದು ಮತ್ತು ಇದರಿಂದ ಆ ಮಗುವಿನ ಲಾಲನೆ ಪಾಲನೆಗೆ ಹೆಚ್ಚು ಗಮನ ನೀಡಬಹುದು.

ದೊಡ್ಡ ಮಗುವಿನ ಬಟ್ಟೆ, ಆಟಿಕೆ ಮತ್ತು ಇತರ ಸಾಮಗ್ರಿಗಳನ್ನು ನೀವು ಮರು ಬಳಕೆ ಮಾಡಬಹುದು. ದೊಡ್ಡ ಮಗುವು ಸಣ್ಣ ಮಗುವಿನ ಆರೈಕೆಯಲ್ಲಿ ನಿಮಗೆ ಸ್ವಲ್ಪ ನೆರವು ಕೂಡ ಆಗುವುದು. ಮುಖ್ಯವಾಗಿ ಡೈಪರ್ ಬದಲಾಯಿಸುವುದು, ಬಟ್ಟೆ ಬದಲಾಯಿಸುವುದು ಇತ್ಯಾದಿ. ನೀವು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಆಗ ದೊಡ್ಡ ಮಗು ಸಣ್ಣ ಮಗುವನ್ನು ಆಟವಾಡಿಸುತ್ತಿರಬಹುದು.

ಮಕ್ಕಳ ಮಧ್ಯೆ ಹೆಚ್ಚು ವರ್ಷಗಳ ಅಂತರವಿದ್ದರೆ ನೀವು ಏನು ಭಾವಿಸಬಹುದು?

ಮಕ್ಕಳ ಮಧ್ಯೆ ಹೆಚ್ಚು ವರ್ಷಗಳ ಅಂತರವಿದ್ದರೆ ನೀವು ಏನು ಭಾವಿಸಬಹುದು?

ನೀವು ಡೈಪರ್ ಬದಲಾಯಿಸುವುದು ಮತ್ತು ಮಗುವಿಗೆ ಆಹಾರ ನೀಡುವ ಆರೈಕೆಯಲ್ಲಿ ಮತ್ತೆ ಕಷ್ಟವಾಗಬಹುದು ಎಂದು ಭಾವಿಸಿರಬಹುದು. ಆದರೆ ಇದನ್ನು ನೀವು ಬೇಗನೆ ಕಲಿತುಕೊಳ್ಳುವಿರಿ. ನಿಮಗೆ ಹೆಚ್ಚು ವರ್ಷವಾದರೆ ಆಗ ಚುರುಕಾಗಿರುವಂತಹ ಮಗುವಿನ ಪಾಲನೆಗೆ ರಾತ್ರಿ ವೇಳೆ ಕಷ್ಟವಾಗಬಹುದು ಎಂದು ಭಾವಿಸುತ್ತೀರಿ.

ಇಬ್ಬರು ಮಕ್ಕಳು ಜತೆಯಾಗಿ ಸಮಯ ಕಳೆಯದೆ ಮತ್ತು ಆಟವಾಡದೆ ಇರುವ ಕಾರಣದಿಂದಾಗಿ ಅವರಿಬ್ಬರ ಮಧ್ಯೆ ಭಾಂದವ್ಯ ಬೆಳೆಯದೆ ಇರಬಹುದು ಎಂದು ಭಾವಿಸಬಹುದು.

ಎದುರಾಗಬಹುದಾದ ಸಮಸ್ಯೆಗಳು

ಎದುರಾಗಬಹುದಾದ ಸಮಸ್ಯೆಗಳು

  • ಇಬ್ಬರು ಮಕ್ಕಳ ಮಧ್ಯೆ ದೊಡ್ಡ ಮಟ್ಟದ ಅಂತರವಿದ್ದರೆ ಆಗ ಇದು ಸಮಸ್ಯೆಯಾಗಿ ಕಾಡಬಹುದು. ಯಾಕೆಂದರೆ ನೀವು ದೊಡ್ಡ ಮಗುವಿನ ನಾಟಕಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನೊಂದು ಮಗುವಿನ ಶಾಲೆಗೂ ಹೋಗಬೇಕು.
  • ಇಬ್ಬರು ಮಕ್ಕಳ ಆಸಕ್ತಿ ಮತ್ತು ಬೆಳವಣಿಗೆಗೆ ತಕ್ಕಂತೆ ಅದೇ ರೀತಿಯಾದ ಪ್ರವಾಸ ಮಾಡುವುದು ಕೂಡ ತುಂಬಾ ಕ್ಲಿಷ್ಟಕರವಾಗಿರುವುದು.
  • ಮಕ್ಕಳಿಗೆ ಇದನ್ನು ಅರ್ಥ ಮಾಡಿಸಿಕೊಳ್ಳಲು ನಿಮಗೆ ಕಷ್ಟವಾಗಬಹುದು.
  • ನೀವು ಇಬ್ಬರು ಮಕ್ಕಳ ಮಧ್ಯೆ ಅಂತರವನ್ನು ಹೆಚ್ಚು ಮಾಡಿದರೆ ಅದರಿಂದ ದೊಡ್ಡ ಸಮಸ್ಯೆಗಳಾಗಿರುವಂತಹ ಆರೋಗ್ಯ ಸಮಸ್ಯೆ ಮತ್ತು ಗರ್ಭಧಾರಣೆ ಸಮಸ್ಯೆ ಕಾಡಬಹುದು.
  • ಮೊದಲ ಗರ್ಭಧಾರಣೆ ವೇಳೆ ನಿಮಗೆ ಸಿಕ್ಕಿರುವಂತಹ ಕೆಲವೊಂದು ಲಾಭಗಳು ಇಲ್ಲಿ ಸಿಗದೆ ಇರಬಹುದು.
  • ಕೆಲವು ತಾತ್ಕಾಲಿಕ ಮತ್ತು ಲಾಭಕಾರಿ ಬದಲಾವಣೆಗಳು ಮೊದಲ ಗರ್ಭಧಾರಣೆ ವೇಳೆ ಹೆಚ್ಚಾಗಿರುವುದು.
  • ಇಬ್ಬರು ಮಕ್ಕಳ ಮಧ್ಯೆ ಸಣ್ಣ ಅಂತರ ಅಥವಾ ಹೆಚ್ಚು ವರ್ಷಗಳ ಅಂತರವಿರಬೇಕೇ ಎಂದು ನೀವು ಪ್ರಶ್ನಿಸಬಹುದು. ಆದರೆ ನಿಮ್ಮ ಕುಟುಂಬಕ್ಕೆ ಹೊಂದಿಕೊಂಡು ನೀವು ಇದರ ಯೋಜನೆ ಹಾಕಿಕೊಳ್ಳಿ.
  • ಮನೆಯಲ್ಲಿರುವಂತಹ ಕೋಣೆಯನ್ನು ಇಬ್ಬರು ಮಕ್ಕಳು ಹಂಚಿಕೊಳ್ಳಬಹುದೇ? ನಿಮ್ಮ ವೃತ್ತಿ (ಈಗಲೇ ಹೆಚ್ಚು ರಜೆ ತೆಗೆದುಕೊಳ್ಳಬಹುದೇ ಅಥವಾ ಕೆಲವು ವರ್ಷ ಬಿಟ್ಟು) ಆರ್ಥಿಕ ವಿಚಾರ (ನಿಮ್ಮಿಂದ ಹೆಚ್ಚುವರಿ ಖರ್ಚು ಭರಿಸಲು ಸಾಧ್ಯವೇ?). ಇಬ್ಬರು ಮಕ್ಕಳ ಮಧ್ಯೆ ಭಾಂದವ್ಯ ಬೆಳೆಯುವುದಿಲ್ಲವೆಂದು ನಿಮ್ಮ ಚಿಂತೆಯಾಗಿದ್ದರೆ ಆಗ ಅವರಿಬ್ಬರ ಮಧ್ಯೆ ಸ್ನೇಹ ಬೆಳೆಯಬಹುದು.
English summary

What's the Best Age Gap Between Childrens

Here we are discussing about Which Is The Best Age Difference Between Childrens. So is a big age difference between children a plus or a minus? The answer depends on a host of factors, most of them subjective and dependent entirely on your particular situation. Read more.
X
Desktop Bottom Promotion