For Quick Alerts
ALLOW NOTIFICATIONS  
For Daily Alerts

ಮದುವೆ ನಿಶ್ಚಯವಾಗಿರುವ ಪ್ರತಿ ಹೆಣ್ಣು, ಈ ಕೆಲಸಗಳನ್ನು ಮಾಡಲೇಬೇಕು..!

|

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಒಂದು ಮಹತ್ವದ ತಿರುವು. ಆದರೆ ಮದುವೆಯ ದಿನಾಂಕ ಅಂತಿಮಗೊಳಿಸಿದ ಮೇಲೆ ಮದುವೆ ಹುಡುಗಿಯ ಮನಸ್ಸಿನ ತಳಮಳ ಹೇಳತಿರದು. ಹೊಸ ಜೀವನದ ಆರಂಭದ ಬಗ್ಗೆ ಒಂದೆಡೆ ಸಂತೋಷ, ಆದರೆ ಮತ್ತೊಂದೆಡೆ ಎಲ್ಲವನ್ನು ತೊರೆದು ಹೋಗಬೇಕೆನ್ನುವ ನೋವು. ಇದರ ನಡುವೆ ಮದುವೆಯ ತಯಾರಿಯ ಭರಾಟೆ ಬೇರೆ. ಹೀಗೆ ನಾನಾ ಮಾನಸಿಕ ತಲ್ಲಣಗಳಿಂದ ಕೂಡಿರುತ್ತಾಳೆ ವಧು.

ಆದರೆ ಈಕೆ ಮದುವೆಯ ಮುನ್ನ ಮಾಡಬೇಕಾದ ಕೆಲವು ವಿಚಾರಗಳನ್ನು ಮರೆಯುವಂತಿಲ್ಲ. ಏಕೆಂದರೆ ಇದು ಮುಂದೆ ಬೇಕೆಂದರೂ ಮಾಡಲು ಆಗುವುದಿಲ್ಲ, ಜೊತೆಗೆ ನಿಮಗೊಂದು ತೃಪ್ತ ಭಾವನೆಯನ್ನು ನೀಡುವುದು. ಹಾಗಾದರೆ ಮದುವೆ ನಿಶ್ಚಯವಾದ ಹೆಣ್ಣು ಮಾಡಲೇಬೇಕಾದ ಕೆಲಸಗಳೇನು ಎಂಬುದನ್ನು ನೋಡಿಕೊಂಡು ಬರೋಣ.

ಮದುವೆ ನಿಶ್ಚಯವಾದ ಹೆಣ್ಣು ಮಾಡಲೇಬೇಕಾದ ಕೆಲಸಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕುಟುಂಬದೊಂದಿಗೆ ಸಮಯ ಕಳೆಯಿರಿ:

ಕುಟುಂಬದೊಂದಿಗೆ ಸಮಯ ಕಳೆಯಿರಿ:

ನಿಮ್ಮ ಪಟ್ಟಿಯಲ್ಲಿ ಇದು ಮೊದಲನೆಯದಾಗಿರಬೇಕು. ನಿಮ್ಮ ಪೋಷಕರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಏಕೆಂದರೆ ನಿಮ್ಮ ಅಪ್ಪ-ಅಮ್ಮನಿಗೆ ನೀವಿನ್ನೂ ಪುಟ್ಟ ಮಗುವೇ, ಮದುವೆ ಬಗ್ಗೆ ಉತ್ಸಾಹದ ಜೊತೆಗೆ ಆತಂಕ ನಿಮಗಿಂತಲೂ ಹೆಚ್ಚು ಅವರಿಗಿರುತ್ತದೆ. ಹೊಸ ಜೀವನ ಆರಂಭಿಸಲಿರುವ ತಮ್ಮ ಮಗಳನ್ನು ಕಳುಹಿಸಿಕೊಡುವ ನೋವು ಒಂದು ಕಡೆಯಾದರೆ, ಅವಳ ಮುಂದಿನ ಜೀವನದ ಸಂತೋಷ ಮತ್ತೊಂದು ಕಡೆಯಿರುತ್ದೆ. ಆದ್ದರಿಂದ ಅವರನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಮುದ್ದಿಸಲು, ಎಲ್ಲವೂ ಸರಿಯಾಗಿದೆ ಎಂದು ಭರವಸೆ ನೀಡಲು ಇದು ಅತ್ಯುತ್ತಮ ಸಮಯ. ಕುಟುಂಬ ಸಮೇತರಾಗಿ ಪ್ರವಾಸಗಳನ್ನು ಯೋಜಿಸಿ ಅಥವಾ ನಿಮ್ಮ ಹಿರಿಯರ ಮನೆಗೆ ಭೇಟಿ ನೀಡಿ. ಆ ಕೆಲವು ತಿಂಗಳುಗಳನ್ನು ನಿಮಗೆ ಮತ್ತು ನಿಮ್ಮ ಪೋಷಕರಿಗೆ ವಿಶೇಷವಾಗಿಸಿ.

ಬ್ಯಾಚಿಲ್ಲೋರೆಟ್ ಪಾರ್ಟಿ:

ಬ್ಯಾಚಿಲ್ಲೋರೆಟ್ ಪಾರ್ಟಿ:

ಕುಟುಂಬದ ನಂತರ ಬರುವುದು ಸ್ನೇಹಿತರು. ಮದುವೆಯ ವೇಳೆ ಅವರನ್ನು ಬಿಡಲು ಸಾಧ್ಯವೇ? ಆದ್ದರಿಂದ ನಿಮ್ಮ ಸ್ನೇಹಿತರೊಂದಿಗೆ ಬ್ಯಾಚಿಲ್ಲೋರೆಟ್ ಬ್ಯಾಷ್ ಅಥವಾ ಪಾರ್ಟಿಯನ್ನು ಪ್ಲಾನ್ ಮಾಡಿ. ಪಾರ್ಟಿ ಮಾಡುವುದು, ಕೇಕ್ ಕತ್ತರಿಸುವುದು, ನಿಮ್ಮ ಸ್ನೇಹಿತರಿಗೆ ಏನನ್ನಾದರೂ ಉಡುಗೊರೆ ನೀಡುವುದು, ಹೀಗೆ ನಾನಾ ಕಾರ್ಯಗಳನ್ನು ಮಾಡಬಹುದು. ಇವು ಆ ಸಂಜೆಯನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.

ಸಂಗಾತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ:

ಸಂಗಾತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ:

ಈ ಎಲ್ಲಾ ಯೋಜನೆಗಳ ನಡುವೆ, ನಿಮ್ಮ ಜೀವನ ಸಂಗಾತಿ ಆಗುವವನಿಗೂ ಸ್ವಲ್ಪ ಸಮಯ ಮೀಸಲಿಡಲು ಮರೆಯಬೇಡಿ. ಅವನ ಇಷ್ಟ-ಕಷ್ಟಗಳು, ಆಕಾಂಕ್ಷೆಗಳು ಮತ್ತು ಅವನು ಪ್ರಾಮುಖ್ಯತೆ ನೀಡುವ ವಿಚಾರಗಳ ಬಗ್ಗೆ, ನಿಮ್ಮಿಂದ ಮಾಡುತ್ತಿರುವ ನಿರೀಕ್ಷೆಗಳ ಬಗ್ಗೆ ಮಾತನಾಡಿ, ತಿಳಿದುಕೊಳ್ಳಿ. ಈ ಸಮಯ ನಿಮ್ಮ ನಡುವಿನ ಅಂತರವನ್ನು ದೂರಮಾಡಿ, ನಿಮ್ಮ ನಡುವೆ ಸಲುಗೆ ಬೆಳೆಯಲು ಸಹಾಯ ಮಾಡುವುದು. ಜೊತೆಗೆ ಸಂಬಂಧವನ್ನು ಬಲಪಡಿಸುವುದು. ಇದರ ಜೊತೆಗೆ ಅವನ ಕುಟುಂಬದೊಂದಿಗೆ ಸಮಯ ಕಳೆಯುವುದು ಒಳ್ಳೆಯದು. ಏಕೆಂದರೆ ನೀವು ಒಬ್ಬ ವ್ಯಕ್ತಿಯನ್ನಷ್ಟೇ ಮದುವೆಯಾಗುತ್ತಿಲ್ಲ, ಇಡೀ ಒಂದು ಕುಟುಂಬವನ್ನು ಮದುವೆಯಾಗುತ್ತೀದ್ದೀರಿ. ಆದ್ದರಿಂದ ನೀವು ಬಾಳಬೇಕಾದ ಜನರೊಂದಿಗೆ ಬೆರೆಯುವುದು ಅಷ್ಟೇ ಮುಖ್ಯ.

ಆರ್ಥಿಕ ಸ್ವತಂತ್ರ:

ಆರ್ಥಿಕ ಸ್ವತಂತ್ರ:

ಈಗ ಕೆಲವು ಗಂಭೀರ ವಿಷಯಗಳ ಬಗ್ಗೆ ಮಾತನಾಡೋಣ. ನಿಮ್ಮ ಬಾಳ ಸಂಗಾತಿಯಾಗುವವನು ಎಷ್ಟು ಸಂಪಾದಿಸಿದರೂ, ಆರ್ಥಿಕವಾಗಿ ಸ್ವತಂತ್ರರಾಗಿರುವುದು ಈಗಿನ ಕಾಲದಲ್ಲಿ ತುಂಬಾ ಮುಖ್ಯ. ನಿಮಗೆ ಬೇಕಾದ ಎಲ್ಲದಕ್ಕೂ ನಿಮ್ಮ ಗಂಡನನ್ನು ಅವಲಂಬಿಸುವುದು ಸರಿಯಲ್ಲ. ಅವನು ಕೂಡ ಹೊಸ ಜೀವನವನ್ನು ಆರಂಭಿಸುತ್ತಿದ್ದು, ಅವನನ್ನು ಬೆಂಬಲಿಸಬೇಕು ಎಂಬುದನ್ನು ಮರೆಯಬಾರದು. ಮದುವೆಯ ನಂತರ ಪುರುಷನು ಮಹಿಳೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ನಂಬಿಕೊಂಡು ಬಂದಿದ್ದೇವೆ, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಲ್ಲದೆ, ಯಾವಾಗ ಏನಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಹಣವು ಹೆಚ್ಚು ಮಹತ್ವದ್ದಾಗಿದೆ. ನಿಮ್ಮ ಎಲ್ಲಾ ಹೂಡಿಕೆಗಳು, ಬ್ಯಾಂಕ್ ಖಾತೆ ಮತ್ತು ನಿಮ್ಮ ತೆರಿಗೆಗಳ ಬಗ್ಗೆ ಸರಿಯಾಗಿ ತಿಳಿಸಿಕೊಡಿ ಜೊತೆಗೆ ನೀವು ಅರ್ಥಮಾಡಿಕೊಳ್ಳಿ. ಜೀವನದಲ್ಲಿ ಖರ್ಚನ್ನು ಹಂಚಿಕೊಳ್ಳುವುದು ಅರ್ಧಾಂಗಿ ಎಂಬ ಮಾತಿಗೆ ಅರ್ಥ ನೀಡುವುದು.

ಸಣ್ಣ-ಸಣ್ಣ ಅಡುಗೆ ಕಲಿಯುವುದು:

ಸಣ್ಣ-ಸಣ್ಣ ಅಡುಗೆ ಕಲಿಯುವುದು:

ನಿಮಗೆ ಅಡುಗೆ ಮಾಡಲು ತಿಳಿದಿದ್ದರೆ, ಒಳ್ಳೆಯದು. ಆದರೆ ನಿಮಗೆ ಬರದಿದ್ದರೆ, ಮೂರು-ಹೊತ್ತು ಊಟವನ್ನು ಬೇಯಿಸುವುದನ್ನು ಕಲಿಯಲು ನಾವೇನೂ ಕೇಳುತ್ತಿಲ್ಲ. ಕನಿಷ್ಠ, ನಿಮ್ಮ ಅಡುಗೆಯವಳು ಬರದಿದ್ದಲ್ಲಿ, ಅಥವಾ ಬೇರೆ ಯಾವುದಾದರೂ ತುರ್ತು ಪರಿಸ್ಥಿತಿ ಇದ್ದಲ್ಲಿ, ನೀವು ಮತ್ತು ನಿಮ್ಮ ಗಂಡ ಹೊಟ್ಟೆ ತುಂಬುವಷ್ಟು ಮಟ್ಟದ ಅಡುಗೆ ಕಲಿಯಿರಿ. ಇದು ಜೀವ ಉಳಿಸುವ ಕೌಶಲ್ಯ. ಮನುಷ್ಯನ ಹೃದಯಕ್ಕೆ ದಾರಿ ಅವನ ಹೊಟ್ಟೆಯಾದರೂ. ಎಲ್ಲವೂ ವಿಫಲವಾದಾಗ, ನಿಮ್ಮವನನ್ನು ಹೇಗೆ ಆನ್ ಮಾಡುವುದು ಎಂದು ನಿಮಗೆ ಖಂಡಿತವಾಗಿಯೂ ತಿಳಿಯುತ್ತದೆ.

ಲೈಂಗಿಕ ಜೀವನದ ಬಗ್ಗೆ ತಿಳಿಯಿರಿ:

ಲೈಂಗಿಕ ಜೀವನದ ಬಗ್ಗೆ ತಿಳಿಯಿರಿ:

ಹೌದು, ಲೈಂಗಿಕತೆಯ ಬಗ್ಗೆ ಎಲ್ಲವನ್ನೂ ಓದಿ, ಚರ್ಚಿಸಿ ಮತ್ತು ಕಲಿಯಿರಿ. ವಿವಾಹದ ನಂತರ ನೀವು ಆಯ್ಕೆ ಮಾಡಬಹುದಾದ ವಿವಿಧ ಗರ್ಭನಿರೋಧಕ ವಿಧಾನಗಳ ಬಗ್ಗೆ ಗೂಗಲ್‌ನಲ್ಲಿ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳಿ.

English summary

What Every Girl Needs To Do Once Your Marriage Gets Fixed

Here we talking about What Every Girl Needs To Do Once Your Marriage Gets Fixed, readon
Story first published: Saturday, September 18, 2021, 16:06 [IST]
X
Desktop Bottom Promotion