Just In
- 32 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 42 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Movies ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
ಆಲ್ ಮೋಸ್ಟ್ ಎಲ್ಲಾ ಪುರುಷರು ತಮ್ಮ ಸಂಗಾತಿ ಮುಂದೆ ಒಳ್ಳೆಯವರಂತೆ ಕಾಣಲು ಬಯಸುತ್ತಾರೆ. ಅವರ ಮುಂದೆ ಅತ್ಯಂತ ನಾಗರಿಕವಾಗಿಯೂ ವರ್ತಿಸುತ್ತಾರೆ. ವಿಚಿತ್ರ ಗುಣಗಳನ್ನು ತೋರಿಸಿ ತನ್ನ ನೈಜ ಸ್ವರೂಪವನ್ನು ತನ್ನ ಸಂಗಾತಿಗೆ ತೋರಲು ಬಯಸುವುದಿಲ್ಲ. ಅಥವಾ ತನ್ನ ವಿಚಿತ್ರವಾದ ಗುಣ ತೋರಿಸಿದರೆ ಅವಳು ಏನು ಅನ್ಕೋಳುತ್ತಾಳೋ ಅನ್ನುವ ಭಯ ಕೂಡ ಇರುತ್ತದೆ.
ಉದಾಹರಣೆಗೆ ಅನೇಕರು ಧೂಮಪಾನ, ಮದ್ಯಪಾನ ಮಾಡುತ್ತಾರೆ ಆದರೆ ತಮ್ಮ ಸಂಗಾತಿ ಮುಂದೆ ಅದನ್ನು ತೋರಲು ಅವರಿಗೆ ಭಯ ಇರುತ್ತದೆ. ಇಂತಹ ಅನೇಕ ಸಿಕ್ರೇಟ್ ಗಳನ್ನು ಪುರುಷರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಅದನ್ನು ಶೇರ್ ಮಾಡಲು ಹೋಗುವುದಿಲ್ಲ. ಇಂತಹ ತಮ್ಮ ಕೆಲವೊಂದು ಫನ್ನಿ ಹಾಗೂ ವಿಯರ್ಡ್ ಗುಣವನ್ನು ಪುರುಷರು ಸಂಗಾತಿ ಇಲ್ಲದಾಗ ಮಾಡುತ್ತಾರೆ.
ಹೌದು, ಪುರುಷರು ತಮ್ಮ ಸಂಗಾತಿ ಇಲ್ಲದ ವೇಳೆ ಅನೇಕ ತಮಾಷೆ ಹಾಗೂ ವಿಲಕ್ಷಣ ಗುಣಗಳನ್ನು ತೋರುತ್ತಾರೆ. ಈ ಮೂಲಕ ಅವರು ಖುಷಿ ಪಟ್ಟುಕೊಳ್ಳುತ್ತಾರೆ.
ಹಾಗಾದರೆ ನಿಮ್ಮ ಪುರುಷ ನೀವು ಇಲ್ಲದಾಗ ಏನು ಮಾಡುತ್ತಾನೆ ಅನ್ನುವ ಕುತೂಹಲ ಕಾಡಿತ್ತಿದ್ಯಾ? ಹಾಗಾದರೆ ಈ ಸ್ಟೋರಿನ ಸಂಪೂರ್ಣವಾಗಿ ಓದಿ.
ಟಾಯ್ಲೆಟ್ ಕಮೋಡ್ ನಲ್ಲಿ ಟೈಮ್ ಪಾಸ್!
ನಿಮಗೊಂದು ಗೊತ್ತ ನೀವು ಇಲ್ಲದಾಗ ನಿಮ್ಮ ಪುರುಷ ಟಾಯ್ಲೆಟ್ ನಲ್ಲಿ ಸಮಯ ಕಳೆಯಲು ಬಯಸುತ್ತಾನೆ ಅನ್ನುವುದನ್ನು?. ಅನೇಕರಿಗೆ ಈ ವಿಷಯ ಗೊತ್ತಿಲ್ಲ. ಅನೇಕ ಪುರುಷರು ನೀವು ಇಲ್ಲದಿದ್ದರೆ ಟಾಯ್ಲೆಟ್ ನಲ್ಲಿ ಕೂರಲು ಬಯಸುತ್ತಾರೆ. ಟಾಯ್ಲೆಟ್ ನಲ್ಲಿರುವ ಕಮಾಡ್ ನಲ್ಲಿ ಕುಳಿತು ಮೊಬೈಲ್, ಲ್ಯಾಪ್ ಟಾಪ್ ಬಳಸುತ್ತಾರೆ. ಇನ್ನು ಕೆಲ ಮದುವೆಯಾಗದ ಯುವಕರು ಟಾಯ್ಲೆಟ್ ನಲ್ಲಿ ಕುಳಿತು ಡೇಟಿಂಗ್ ಆಪ್ ಗಳನ್ನು ಬಳಸುತ್ತಾರೆ. ಇದೊಂದು ಪುರುಷರ ವಿಲಕ್ಷಣ ಗುಣ. ತನ್ನ ಸಂಗಾತಿ ಇಲ್ಲದಾಗ ಈ ರೀತಿ ಶೇ.60 ರಷ್ಟು ಮಾಡುವುದುಂಟು.
ಲೈಂಗಿಕ ಪ್ರಚೋದನಾತ್ಮಕ ವೀಡಿಯೋಗಳನ್ನು ನೋಡುವುದು!
ಪುರುಷರ ಪೈಕಿ ಅನೇಕರು ಈ ವಿಚಿತ್ರ ಗುಣವನ್ನು ಹೊಂದಿದ್ದಾರೆ. ತಮ್ಮ ಜೊತೆ ಸಂಗಾತಿ ಇಲ್ಲದಿದ್ದರೆ ಆ ಸಮಯವನ್ನು ಅನೇಕ ಪುರುಷರು ಲೈಂಗಿಕ ಪ್ರಚೋದನಾತ್ಮಕ ವಿಡೀಯೋಗಳನ್ನು ನೋಡುತ್ತಾರೆ. ಪಾರ್ನ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಎಲ್ಲಾದರೂ ನೀವು ಹೊರಗೆ ಹೋಗಿ ಮನೆ ಸೇರಿದ ಟೈಂ ನಲ್ಲಿ ನಿಮ್ಮ ಪುರುಷ ರೊಮ್ಯಾಂಟಿಕ್ ಆಗಿದ್ದರೆ ಅಥವಾ ಸೆಕ್ಸ್ ಮಾಡೋಣ ಎಂದು ಕೇಳಿದರೆ ಆತ ಸೆಕ್ಸ್ ವಿಡಿಯೋವನ್ನು ನೋಡಿದ್ದಾನೆ ಎಂದು ಅರ್ಥ.
ದೇಹದ ಭಾಗದ ಸ್ಮೆಲ್ ತೆಗೆದುಕೊಳ್ಳುವುದು!
ಕೆಲವು ಬಾರಿ ಪುರುಷರು ಅತ್ಯಂತ ಕೆಟ್ಟದಾಗಿ ವರ್ತಿಸುವುದುಂಟು. ಹೌದು, ನೀವು ಇಲ್ಲದ ವೇಳೆ ಪುರುಷರು ತಮ್ಮ ದೇಹದ ಸ್ಮೆಲ್ ತೆಗೆದುಕೊಳ್ಳುತ್ತಾರೆ. ತಮ್ಮ ಕಂಕುಳನ್ನು, ತಮ್ಮ ಒಳ ಉಡುಪಿನ ವಾಸನಎ ತೆಗೆದುಕೊಳ್ಳುವುದುಂಟು. ಇನ್ನು ಕೆಲವರು ತಮ್ಮ ಸಂಗಾತಿಯ ಒಳ ಉಡುಪುಗಳನ್ನು ವಾಸನೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ದೇಹದ ಭಾಗದ ಕೊಳಕು ಸ್ಮೆಲ್ ತೆಗೆದುಕೊಳ್ಳುವುದು ಕೆಲವರಿಗೆ ಭಾರೀ ಹಿತ ಅನಿಸುತ್ತದೆ. ನಿಮ್ಮ ಪುರುಷ ಈ ರೀತಿ ಮಾಡಿದ್ದು ಕಂಡು ಬಂದಲ್ಲಿ ಕೂಡಲೇ ಒಳ್ಳೆಕ ಕೌನ್ಸಿಲಿಂಗ್ ಕೊಡಿಸಿ.
ವಿಚಿತ್ರ ಆಹಾರ ಸೇವನೆ!
ಕೆಲವು ಪುರುಷರಿರುತ್ತಾರೆ. ಸಂಗಾತಿ ಜೊತೆಗಿನ ಡಿನ್ನರ್ ಆಗಲಿ ಅಥವಾ ಲಂಚ್ ಆಗಲಿ ಎಷ್ಟು ನೀಟ್ ಆಗಿ ಮಾಡುತ್ತಾರೆ ಎಂದರೆ ನೀವು ಅದರಿಂದ ಶಾಕ್ ಗೆ ಒಳಗಾಗುತ್ತೀರ. ಇಷ್ಟು ನೀಟ್ ಆಗಿ ಊಟ ಮಾಡುತ್ತಾರೆ ಅಲ್ವಾ ಎಂದು ಶಹಬ್ಬಾಸ್ ಎನ್ನುತ್ತೀರಾ. ಆದರೆ ನೀವು ಇಲ್ಲದಾಗ ಅವರು ಆಹಾರ ಸೇವನೆ ಸಂಬಂಧ ಮತ್ತೊಂದು ಮುಖವನ್ನು ಹೊಂದಿದ್ದಾರೆ. ವಿಲಕ್ಷಣವಾದ ಆಹಾರ ಸೇವನೆ ಮಾಡುವುದನ್ನು ಅವರು ಇಷ್ಟ ಪಡುತ್ತಾರೆ. ಉದಾಹರಣೆಗೆ ದಾಲ್ ಜೊತೆಗೆ ಚೈನೀಸ್ ನೂಡಲ್ಸ್ ಸೇರಿಸಿ ತಿನ್ನುವುದು, ದಾಲ್ ಜೊತೆಗೆ ಸ್ಪ್ರಿಂಗ್ ರೋಲ್ ತಿನ್ನುವುದು. ಚಹಾದೊಳಗೆ ಬಿಸ್ಕಟ್ ಹಾಕಿ ಕೈಯಿಂದ ತಿನ್ನುವುದು ಹೀಗೆ. ಅನೇಕ ವಿಯರ್ಡ್ ಗುಣಗಳನ್ನು ಆಹಾರ ಸೇವನೆಯಲ್ಲಿ ಮಾಡುತ್ತಾರೆ ಪುರುಷರು.
ಪುರುಷರು ಅಳುವುದು!
ಅನೇಕ ಮಹಿಳೆಯರು ಅಂದುಕೊಂಡಿರುತ್ತಾರೆ ಪುರುಷರು ಅಳುವುದಿಲ್ಲ ಎಂದು. ಆದರೆ ನಿಜಕ್ಕೂ ಪುರುಷರು ಅಳುತ್ತಾರೆ ಆದರೆ ಅವರ ಸಂಗಾತಿ ಇಲ್ಲದಾಗ ಮಾತ್ರ. ಹೌದು, ಪುರುಷರು ತಮ್ಮ ಸಂಗಾತಿ ಇಲ್ಲದಾಗ ಅಳುವುದು ಜಾಸ್ತಿ. ತಮ್ಮ ಸಮಸ್ಯೆಗಳನ್ನು ನೆನೆದು ಕೊರಗುವುದು ಕೂಡ ಯಾರು ಇಲ್ಲದಾಗ ಮಾತ್ರ. ಇನ್ನು ಸಿನಿಮಾ ನೋಡುತ್ತಾ ಅಳು ಬಂದರೆ ಕೂಡಲೇ ಅವರು ಸಂಗಾತಿಯಿಂದ ದೂರ ಹೋಗಿ ಅಳುವುದುಂಟು. ಯಾವ ಪುರುಷ ಕೂಡ ತನ್ನ ಸಂಗಾತಿ ಮುಂದೆ ಅಳಲು ಬಯಸುವುದಿಲ್ಲ. ತನ್ನ ಸಂಗಾತಿ ದೂರ ಉಳಿದಾಗ ಅಳುತ್ತಾನೆ. ಇದು ಕೂಡ ಪುರುಷನ ಮತ್ತೊಂದು ಲಕ್ಷಣ.
ಮೇಕಪ್ ಮಾಡಿಕೊಳ್ಳುವುದು!
ಕೆಲವು ಪುರುಷರು ಮೇಕಪ್ ಮಾಡಲು ಇಷ್ಟಪಡುತ್ತಾರೆ ಎಂದು ನಿಮಗೆ ತಿಳಿದಿದೆಯೇ?. ಹೌದು, ಕೆಲ ಪುರುಷರು ನೀವು ಇಲ್ಲದ ವೇಳೆ ನಿಮ್ಮ ಮೇಕಪ್ ಕಿಟ್ ಗಳನ್ನು ಬಳಸಿಕೊಂಡು ಮೇಕಪ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಸಂಗಾತಿಯ ಬಟ್ಟೆಗಳನ್ನು ತೊಡುತ್ತಾರೆ. ಈ ರೀತಿಯ ಕೆಲಸ ನೀವು ಇಲ್ಲದಾಗ ಮಾತ್ರ ಪುರುಷರು ಮಾಡಲು ಸಾಧ್ಯ.
ಮಾತನಾಡುವುದು!
ಇನ್ನು ತಮ್ಮ ಸಂಗಾತಿ ಇಲ್ಲದಾಗ ಕೆಲವೊಂದು ಸಿಕ್ರೇಟ್ ಕೆಲಸಗಳನ್ನು ಪುರುಷರು ಮಾಡುತ್ತಾರೆ. ಅನೇಕ ಪುರುಷರು ತಮ್ಮ ಸಂಗಾತಿ ಇಲ್ಲದ ಸಮಯದಲ್ಲಿ ತಮ್ಮ ಸಿಕ್ರೇಟ್ ಗರ್ಲ್ ಫ್ರೆಂಡ್ಸ್ ಜೊತೆ ಮಾತನಾಡುವುದು, ಚ್ಯಾಟ್ ನಡೆಸುವುದು ಮಾಡುತ್ತಾರೆ. ಈಗ ವಿಡಿಯೋ ಕಾಲ್ ಗಳ ಝಮಾನವಾಗಿರೋದ್ರಿಂದ ತನ್ನ ಸಂಗಾತಿ ಇಲ್ಲದ ವೇಳೆ ತನ್ನ ಸಿಕ್ರೇಟ್ ಗರ್ಲ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ ಟೈಂ ಪಾಸ್ ಮಾಡುವುದುಂಟು.
ಡ್ಯಾನ್ಸ್ ಮಾಡುವುದು!
ಸಂಗಾತಿ ಇಲ್ಲದ ವೇಳೆ ಕೆಲವು ಪುರುಷರು ತಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ರೀತಿ ಖುಷಿ ಪಡುವುದುಂಟು. ಈ ಸಮಯದಲ್ಲಿ ಒಳ್ಳೆ ಮ್ಯೂಸಿಕ್ ಹಾಕಿ ಕೆಲ ಕ್ರೇಜಿ ಪುರುಷರು ಡ್ಯಾನ್ಸ್ ಮಾಡುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಒಂದಲ್ಲ ಒಂದು ವಿಚಿತ್ರ, ಫನ್ನಿ ಕೆಲಸಗಳನ್ನು ಪುರುಷರು ಸಂಗಾತಿ ಇಲ್ಲದಾಗ ಮಾಡುತ್ತಾರೆ.