Just In
- 10 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 12 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
ಅತ್ಯಾಚಾರದ ಅಳಲು; ಸೋನಿಯಾ ಗಾಂಧಿಯ ನಿರ್ಧಾರವೇನು?
- Sports
ವಿರಾಟ್ ಕೊಹ್ಲಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು
- Movies
ಅಮೀರ್ ಬಹು ವರ್ಷದ ಆಸೆಯನ್ನು ಈಡೇರಿಸಿದ್ದು ಕನ್ನಡದ ಈ ಕಲಾವಿದ
- Technology
ಗರ್ಭಿಣಿಯರಿಗೆ ಮುದ ನೀಡುವ ಆಪ್- ನಿಮ್ಮ ಮಗು ಹೇಗಿರುತ್ತದೆ ಎಂದು ತಿಳಿಸುವ ಆಪ್
- Finance
ಈ ಜೈಲಲ್ಲಿ ಇರುವ ನಲವತ್ತು ಕೈದಿಗಳಿಗೆ ವರ್ಷಕ್ಕೆ 3,900 ಕೋಟಿ ಖರ್ಚು
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಗಂಡನ ಬಟ್ಟೆ ಧರಿಸಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು!
ಅಮೃತವರ್ಷಿಣಿ ಚಿತ್ರದ ತುಂತುರು ಅಲ್ಲಿ ನೀರ ಹಾಡು ಈ ಗೀತೆಯಲ್ಲಿ ಸುಹಾಸಿನಿ ತನ್ನ ಗಂಡನ ಶರ್ಟ್, ಶೂ ಇತ್ಯಾದಿಗಳನ್ನು ತೊಟ್ಟು ಪುಸ್ತಕ ಓದುವ ದೃಶ್ಯವೊಂದಿದೆ. ನಿಮಗದು ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಈ ರೀತಿ ತಮ್ಮ ಗಂಡನ ಅಥವಾ ಸಂಗಾತಿಯ ಶರ್ಟ್, ಟಿ-ಶರ್ಟ್ ಅಥವಾ ಇತರೆ ಯಾವುದೇ ವಸ್ತುವನ್ನು ಧರಿಸುವ ಅಭ್ಯಾಸವಿರುವವರ ಬಗ್ಗೆಯೊಂದು ಸಿಹಿಸುದ್ದಿ ಇಲ್ಲಿದೆ ನೋಡಿ. ಇದು ಅಧ್ಯಯನದಿಂದ ಸಾಬೀತಾಗಿರುವ ಅಂಶವಾಗಿದೆ.
ಹೌದು ಯಾರು ಹೀಗೆ ತಮ್ಮ ಸಂಗಾತಿಯ ಬಟ್ಟೆಗಳನ್ನು ಇಲ್ಲವೇ ಇತರೆ ಯಾವುದೇ ವಸ್ತುವನ್ನು ಧರಿಸುತ್ತಾರೆಯೋ ಅವರ ಮಾನಸಿಕ ಒತ್ತಡ ಕಡಿಮೆಯಾಗಿರುತ್ತದೆಯಂತೆ. ಅಷ್ಟೇ ಅಲ್ಲ ಇದು ಏಕಾಂಗಿತನವನ್ನು ಕೂಡ ಹೋಗಲಾಡಿಸುತ್ತದೆಯಂತೆ.

ಸಂಗಾತಿಯ ಪರಿಮಳದ ಬಟ್ಟೆ
ಒಂದು ವೇಳೆ ನೀವು ಒತ್ತಡ ಮತ್ತು ಏಕಾಂಗಿತನದಿಂದ ಆಗಾಗ ಬಳಲುತ್ತಿದ್ದರೆ ನಿಮ್ಮ ಸಂಗಾತಿಯ ಬಟ್ಟೆಯನ್ನು ಧರಿಸುವ ಪ್ರಯತ್ನವನ್ನು ಖಂಡಿತ ಮಾಡಬಹುದು. ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಅಧ್ಯಯನಕಾರರು ತಿಳಿಸುವ ಪ್ರಕಾರ ಸಂಗಾತಿಯ ಪರಿಮಳವನ್ನು ಹೊಂದಿರುವ ಯಾವುದೇ ವಸ್ತುವನ್ನು ಧರಿಸುವುದರಿಂದಾಗಿ ಒಂಟಿತನ ಮತ್ತು ಒತ್ತಡ, ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದಂತೆ.

ಅಧ್ಯಯನದ ಬಗ್ಗೆ ಇನ್ನಷ್ಟು ಮಾಹಿತಿ
ಅಧ್ಯಯನಕಾರರು ಒಂದಷ್ಟು ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಮೂರು ವಿಭಿನ್ನ ರೀತಿಯ ಪರಿಮಳವನ್ನು ಗ್ರಹಿಸುವುದಕ್ಕೆ ಬಿಡುತ್ತಾರೆ- ಒಂದು ಅಪರಿಚಿತ ವ್ಯಕ್ತಿಯ ಪರಿಮಳ, ಮತ್ತೊಂದು ಅವರ ಸಂಗಾತಿಯ ಪರಿಮಳ ಹಾಗೂ ತಟಸ್ಥವಾಗಿರುವ ಇತರೆ ಪರಿಮಳ. ಸಂಗಾತಿಯ ಬಟ್ಟೆಯನ್ನು ಮಹಿಳೆಯರಿಗೆ ನೀಡುವ ಮುನ್ನ ಅದನ್ನು ಅವರ ಸಂಗಾತಿಯ ಬಳಿ 24 ತಾಸುಗಳ ಕಾಲ ಧರಿಸಿರುವಂತೆ ಸೂಚಿಸಲಾಗಿತ್ತು ಮತ್ತು ಅದರಲ್ಲಿ ಅವರ ಗಾಢ ಪರಿಮಳ ಇರುವಂತೆ ಮಾಡಲಾಗಿತ್ತು.

ಕಡಿಮೆ ಮಟ್ಟದ ಒತ್ತಡ ದಾಖಲಾಗಿದೆ
ಈ ರೀತಿಯ ಶರ್ಟಿನ ವಾಸನೆಯನ್ನು ನೋಡಿದ ನಂತರ ಆ ಮಹಿಳೆಯರನ್ನು ಅಣಕು ಕೆಲಸದ ಸಂದರ್ಶನ (ಮಾಕ್ ಜಾಬ್ ಇಂಟರ್ವ್ಯೂ)ಗೆ ಒಳಪಡಿಸಲಾಯಿತು ಮತ್ತು ಅವರ ಒತ್ತಡದ ಮಟ್ಟವನ್ನು ಲೆಕ್ಕ ಹಾಕುವ ಕೆಲಸವನ್ನು ಮಾಡಲಾಯಿತು.
ಸಂಶೋಧಕರು ಇವರ ಒತ್ತಡದ ಮಟ್ಟ ಮತ್ತು ಕಾರ್ಟಿಸೋಲ್ ಲೆವೆಲ್ ಅನ್ನು ದಾಖಲಿಸಿದಾಗ ಕುತೂಹಲಕಾರಿಯಾಗಿರುವ ಅಂಶ ಬೆಳಕಿಗೆ ಬಂತು. ಯಾವ ಮಹಿಳೆಯರಿಗೆ ತಮ್ಮ ಸಂಗಾತಿಯ ವಾಸನೆ ಇರುವ ಬಟ್ಟೆಯನ್ನು ನೀಡಲಾಗಿತ್ತೋ ಅವರ ಒತ್ತಡದ ಮಟ್ಟ ಬಹಳ ಕಡಿಮೆ ದಾಖಲಾಗಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ. ಅದೇ ಯಾವ ಮಹಿಳೆಯರು ಇತರೆ ವಾಸನೆಯನ್ನು ಸೇವಿಸಿದ್ದರೋ ಅವರ ಒತ್ತಡದ ಮಟ್ಟ ಸಂಗಾತಿಯ ಬಟ್ಟೆಯ ವಾಸನೆಯನ್ನು ಗ್ರಹಿಸಿದ ಮಹಿಳೆಯರ ಒತ್ತಡದ ಮಟ್ಟಕ್ಕಿಂತ ಅಧಿಕವಾಗಿರುವುದು ಇದರಿಂದ ತಿಳಿದು ಬಂದಿದೆ. ಹಾಗಾಗಿ ನೀವೂ ಕೂಡ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಈ ವಿಧಾನವನ್ನು ಬೇಕಿದ್ದರೆ ಟ್ರೈ ಮಾಡಿ ನೋಡಬಹುದು.