For Quick Alerts
ALLOW NOTIFICATIONS  
For Daily Alerts

ನಿಮ್ಮ ವೈವಾಹಿಕ ಜೀವನವನ್ನು ಹಾಳುಮಾಡುವ ಹೋಲಿಕೆಗಳು, ಇದರಿಂದ ಮುಕ್ತಿ ಹೇಗೆ?

|

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಹಿರಿಯ ಕವಿ ಜಿ. ಎಸ್ ಶಿವರುದ್ರಪ್ಪ ಅವರ ಈ ಸಾಲು ಸರ್ವ ಕಾಲಕ್ಕೂ ಸತ್ಯ. ಜೀವನದಲ್ಲಿ ಪ್ರತಿಯೊಬ್ಬರು ಬಯಸುವುದು ನೆಮ್ಮದಿ, ಸಂತೋಷವನ್ನು. ನಮ್ಮಲ್ಲೇ ನಾವೇ ಕಂಡುಕೊಳ್ಳುವ ನೆಮ್ಮದಿ, ಸಂತೋಷ ವನ್ನು ಇನ್ನೆಲ್ಲೋ ಹುಡುಕುವ ಪ್ರಯತ್ನ ಮಾಡುತ್ತೇವೆ ಹೌದಲ್ಲವೆ.

ಇತರರ ಹೋಲಿಕೆ ಮಾಡಿಕೊಂಡು ನಮ್ಮ ಬಳಿಯೇ ಇರುವ ಅಮೂಲ್ಯ ವಸ್ತುವಿನ, ವ್ಯಕ್ತಿಯ ಮೌಲ್ಯವನ್ನು ನಿರ್ಲಕ್ಷಿಸುತ್ತಾರೆ. ನೀವು ಆಂತರಿಕವಾಗಿ ಸಂತೃಪ್ತತೆ ಕಂಡುಕೊಂಡರೆ ಜೀವನಲ್ಲಿ ನೆಮ್ಮದಿ ಕಾಣಬಹುದು. ಆದರೆ ಹೊರಜಗತ್ತಿಗಾಗಿ ನೀವು ಬದುಕುತ್ತಿದ್ದು, ಅದರಿಂದ ನಿಮ್ಮ ಜೀವನದ ಸಂತೃಪ್ತತೆ ಹುಡುಕ ಹೊರಟರೆ ಎಂದಿಗೂ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಆದರೆ ಪ್ರಪಂಚದಲ್ಲಿ ಬಹುತೇಕ ನಡೆಯುತ್ತಿರುವುದೇ ಎರಡನೇಯದು.

ಅದರಲ್ಲೂ ನವ ವಿವಾಹಿತ ಮಹಿಳೆಯರಂತೂ ಇತರ ದಂಪತಿಗಳ ಹೋಲಿಕೆಯಿಂದಲೇ ತಮ್ಮ ಜೀವನದ ರಸಾನುಭಾವವನ್ನು ಅನುಭವಿಸುವುದೇ ಇಲ್ಲ. ಯಾವೆಲ್ಲಾ ವಿಷಯಗಳ ಹೋಲಿಕೆಯಿಂದ ವಿವಾಹಿತ ಹೆಣ್ಣುಮಕ್ಕಳು ಜೀವನದಲ್ಲಿ ಬೇಸರ ಅನುಭವಿಸುತ್ತಾರೆ. ಯಾವೆಲ್ಲಾ ವಿಷಯಗಳು ಅವರ ವೈವಾಹಿಕ ಜೀವನದ ನೆಮ್ಮದಿಯನ್ನು ಹಾಳುಮಾಡುತ್ತದೆ? ಅದರಿಂದ ಹೊರಬರುವುದು ಹೇಗೆ? ನೋಡೋಣ.

ಗೆಳತಿಯ ಪ್ರಣಯ ಜೀವನ ಹಾಗೂ ನನ್ನ ಜೀವನ

ಗೆಳತಿಯ ಪ್ರಣಯ ಜೀವನ ಹಾಗೂ ನನ್ನ ಜೀವನ

ಮದುವೆಯಾದ ಕೆಲವೇ ದಿನಗಳಲ್ಲಿ ಬಹುತೇಕ ಮಧುಮಗಳ ಸಂತೋಷ ಕಳೆದೇ ಹೋಗುತ್ತದೆ. ಕಾರಣ ಮದುವೆಗೂ ಮುನ್ನವೇ ತಮ್ಮದೇ ಭ್ರಮಾಲೋಕದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ಆ ಎಲ್ಲಾ ಕನಸುಗಳ ನನಸಾಗುತ್ತವೇ ಎಂದೇ ಊಹಿಸಿರುತ್ತಾರೆ ಆದರೆ ನಿಜವಾದ ವೈವಾಹಿಕ ಜೀವನವೇ ಬೇರೆ ಇರುತ್ತದೆ. ತಾನು ಗೋವಾ ಅಥವಾ ಊಟಿಗೆ ಹನಿಮೂನ್ ಗೆ ಹೋಗಿ ಬಂದರೆ, ತಮ್ಮ ಗೆಳತಿಯರು ತಮ್ಮ ವಿದೇಶಿ ಹನಿಮೂನ್ ಕತೆಗಳನ್ನು ಹೇಳುವಾಗ ತಮ್ಮ ಹನಿಮೂನ್ ಬಹಳ ನೀರಸ ಎನಿಸಿ ನಿರಾಸೆ ಉಂಟಾಗಬಹುದು. ವಿದೇಶಿ ಹನಿಮೂನ್ ಮುಂದೆ ತಾನು ಪತಿಯ ಜತೆ ಕಳೆದ ಅದ್ಭುತವಾದ ಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಉಂಟಾಗಬಹುದು ಅಥವಾ ಮರೆಯಾಗಬಹುದು. ಇಂತಹ ಹೋಲಿಕೆಗಳು ದಾಂಪತ್ಯದಲ್ಲಿ ಎಂದಿಗೂ ಸಲ್ಲದು.

ಸಾಮಾಜಿಕ ಜಾಲತಾಣವೆಂಬ ಎಂಬ ದುಃಸ್ವಪ್ನ

ಸಾಮಾಜಿಕ ಜಾಲತಾಣವೆಂಬ ಎಂಬ ದುಃಸ್ವಪ್ನ

ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳು ಹಾಳಾಗಲು ಬಹುಮುಖ್ಯ ಕಾರಣ ಸಾಮಾಜಿಕ ಜಾಲತಾಣ ಎಂದರೆ ತಪ್ಪಾಗಲಾರದು. ಹಲವರ ಬದುಕಲ್ಲಿ ಸಾಮಾಜಿಕ ಜಾಲತಾಣ ದುಃಸ್ವಪ್ನದಂತೆ ಕಾಡದೆ ಇರದು. ಮಹಿಳೆಯರು ಇರುವುದರಲ್ಲೆ ನೆಮ್ಮದಿಯಿಂದ ಇರಲು ಎಷ್ಟೇ ಪ್ರಯತ್ನಿಸಿದರೂ, ತಮ್ಮ ಗೆಳತಿಯರು ವಿದೇಶಕ್ಕೆ ಹೋದ, ಅಲ್ಲಿನ ಪ್ರವಾಸದ, ಅದ್ಧೂರಿ ವಿವಾಹ ಸಂಭ್ರಮ, ಸ್ನೇಹಿತರ ಕೂಟ, ಶಾಪಿಂಗ್, ಹೊಸ ಬಟ್ಟೆಯ ಹೀಗೆ ಐಷಾರಾಮಿ ಬದುಕನ್ನು ಸಾಮಾಜಿಕ ಜಾಲತಾಣದಲ್ಲಿ ಅನಾವರಣ ಮಾಡುವುದರಿಂದ ನಮ್ಮ ನೆಮ್ಮದಿ ಅಲ್ಲೇ ಕಳಚಿ ಬೀಳುತ್ತದೆ. ನಮ್ಮ ಜೀವನ ಒಂದು ಅಳತೆಯಲ್ಲೇ ಸಾಗುತ್ತಿರುತ್ತದೆ. ಈ ಸಂದರ್ಭಗಳಲ್ಲಿ ನಮಗೊಂದು ಸಂಶಯ ಹುಟ್ಟಿಕೊಳ್ಳಲೂ ಬಹುದು, ನಾನು ಹಿಂದೆಂದೂ ಇಂತಹ ಜೀವನ ಬದುಕಿಲ್ಲ ಇದೀಗ ಏಕೆ ಈ ರೀತಿ ಎಲ್ಲದಕ್ಕೂ ರಾಜಿ ಮಾಡಿಕೊಳ್ಳುವ ಜೀವನ ಎಂದು. ಇದಿಷ್ಟೇ ಸಾಕು ಎಲ್ಲಾ ಸವಿಕ್ಷಣಗಳನ್ನು ಸಮುದ್ರದಲ್ಲಿ ಹುಣಸೆಹಣ್ಣು ಕಿವುಚಿದಂತೆ ಮಾಡಿಬಿಡುತ್ತದೆ.

ನನಗೆ ಮಾತ್ರ ಎಲ್ಲಾ ಸಮಸ್ಯೆಗಳು ಇದೆಯೇ?

ನನಗೆ ಮಾತ್ರ ಎಲ್ಲಾ ಸಮಸ್ಯೆಗಳು ಇದೆಯೇ?

ಮದುವೆಯಾದ ನಂತರ ಸಮಯ ಕಳೆದಂತೆ ಕೆಲವು ಸಮಸ್ಯೆಗಳ ಬಗ್ಗೆ ಹುಟ್ಟಿಕೊಳ್ಳುತ್ತದೆ. ಪತಿಯ ಕುಟುಂದವರೊಂದಿಗೆ ಸಂಬಂಧ ಹಳಸಬಹುದು, ಸಣ್ಣಪುಟ್ಟ ಕೌಟುಂಬಿಕ ಕಲಹ ನಡೆಯಬಹುದು. ಇದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ನಮ್ಮ ಪರಿಸ್ಥಿತಿಯ ಬಗ್ಗೆ ಕರುಣೆ ತೋರುತ್ತಾರೆ. ಇಂತಹ ಸಂದರ್ಭದಲ್ಲಿ ನನಗನಿಸುವ ಒಂದೇ ಪ್ರಶ್ನೆ ಈ ಸಮಸ್ಯೆಗಳು ನನಗೆ ಮಾತ್ರ ಇದೆಯೇ, ನನ್ನ ಸ್ನೇಹಿತೆಯರು ಪತಿಯ ಕುಟುಂಬಸ್ಥರೊಂದಿಗೆ ಸಂತೋಷದಿಂದ ಇದ್ದಾರೆಯೇ, ಅವರಿಗೇನು ಸಮಸ್ಯೆಗಳೇ ಇಲ್ಲವೇ ಎಂಬುದು. ಆದರೆ ಒಂದು ನೆನಪಿಡಿ!, ಜೀವನ ಎಂದ ಮೇಲೆ ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ, ಆದರೆ, ನಿಮ್ಮಂತೆ ಅವರು ಹೇಳಿಕೊಂಡಿರುವುದಿಲ್ಲ ಅಥವಾ ಅದನ್ನು ಧೈರ್ಯವಾಗಿ ಎದುರಿಸಿರುತ್ತಾರೆ.

ಇತರ ಪುರುಷರೊಂದಿಗೆ ಪತಿಯ ಹೋಲಿಕೆ

ಇತರ ಪುರುಷರೊಂದಿಗೆ ಪತಿಯ ಹೋಲಿಕೆ

ಅತ್ಯಂತ ಕೆಟ್ಟ ಹೋಲಿಕೆಗಳಲ್ಲಿ ಇದು ಪ್ರಮುಖವಾಗುತ್ತದೆ. ನಿಮ್ಮ ಪತಿಗೆ ಅವರದ್ದೇ ಆದ ವಿಶೇಷ ಗುಣಗಳು ಮತ್ತು ಸಾಮರ್ಥ್ಯಗಳಿರಬಹುದು. ನಿಮ್ಮ ಪತಿ ನೀವು ಅಂದುಕೊಂಡಂತೆ ವರ್ತಿಸದಿರಬಹುದು ಅಥವಾ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿರಬಹುದು. ಕೂಡಲೇ ಪತಿಯನ್ನು ಇತರ ಪುರುಷರಿಗೆ ಹೋಲಿಕೆ ಮಾಡುವುದು ಅತ್ಯಂತ ಕೆಟ್ಟ ದುರಭ್ಯಾಸ. ಇದು ನಿಮ್ಮ ವೈವಾಹಿಕ ಸಂಬಂಧವನ್ನು ಕೆಡಿಸುತ್ತದೆ ಅಲ್ಲದೇ ನಿಮ್ಮನ್ನು ತಪ್ಪು ದಾರಿಗೆ ಎಳೆಯಬಹುದು. ಅಲ್ಲದೇ ಒಂದನ್ನು ನೆನಪಿಡಿ ಅವರೂ ಸಹ ಪತ್ನಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ.

ಹೋಲಿಕೆಯ ಭೂತದಿಂದ ಹೊರಬರುವುದು ಹೇಗೆ?

ತಜ್ಞರ ಸಲಹೆ ಪಡೆಯಿರಿ

ತಜ್ಞರ ಸಲಹೆ ಪಡೆಯಿರಿ

ಇಂತಹ ಹೋಲಿಕೆಗಳಿಂದ ಮಹಿಳೆಯರು ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಾರೆ ಅಲ್ಲದೇ ಸಾಕಷ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಆಪ್ತ ಸಲಹೆಗಾರರ ಸಲಹೆ ಪಡೆಯಿರಿ. ಹೋಲಿಕೆ ಯಾವ ರೀತಿ ನಿಮ್ಮ ಜೀವನವನ್ನು ಹಾಳುಮಾಡುತ್ತಿದೆ ಅರಿಯಿರಿ. ಹೋಲಿಕೆಯಿಂದ ನಿಮ್ಮ ಮನಸ್ಸಿಗೆ ಘಾಸಿ ಮಾಡುವಂಥ ಸ್ನೇಹಿತರಿಂದ ಸಾಧ್ಯವಾದಷ್ಟು ದೂರವಿರಿ. ಆಗ ನಿಮ್ಮ ನೆಮ್ಮದಿಯ ಸುಖವನ್ನು ನೀವೆ ಕಂಡುಕೊಳ್ಳಬಹುದು.

ಪ್ರತಿಯೊಬ್ಬರ ಬದುಕು ವಿಶಿಷ್ಟ

ಪ್ರತಿಯೊಬ್ಬರ ಬದುಕು ವಿಶಿಷ್ಟ

ನಾನು ಇತರರೊಂದಿಗೆ ಹೋಲಿಕೆ ನಿಲ್ಲಿಸಿದಾಗ ಅಸೂಯೆ ಅಥವಾ ಅಸುರಕ್ಷಿತ ಭಾವನೆ ನಮ್ಮಿಂದ ದೂರಾಗುತ್ತದೆ. ನಮ್ಮ ಸಂದರ್ಭಗಳ ಬಗ್ಗೆ ಅಸಮಧಾನ ಬೇಡ. ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರಿ. ನಿಮ್ಮ ಬದುಕಿನ ಪ್ರತಿ ಕ್ಷಣವನ್ನು ಸಂತೋಷದಿಂದ ಅನುಭವಿಸಲು ಆರಂಭಿಸಿ. ನಿಮ್ಮ ಸುಂದರ ಬದುಕನ್ನು ಹೊಗಳಲು ಆರಂಭಿಸಿ. ಈ ಎಲ್ಲಾ ನಿಮ್ಮ ಪ್ರಯತ್ನಗಳಿಗೂ ನಿಮ್ಮ ಪತಿಯ ಸಹಕಾರ ಪಡೆಯಿರಿ. ಜೀವ ತುಂಬಾ ಸುಂದರವಾಗಿದೆ ಆದರೆ ಹೋಲಿಕೆ ನಿಲ್ಲಿಸಿದಾಗ ಮಾತ್ರ ಎಂಬ ಸತ್ಯ ನಿಮ್ಮ ಅರಿವಿಗೆ ಬರಲಿದೆ.

English summary

Ways to stop comparing your Married Life with Others

One of the most successful investors of all times and a billionaire, Warren Buffet had once said, “The big question about how people behave is whether they’ve got an inner scorecard or an outer scorecard. It helps if you can be satisfied with an inner scorecard.” Most people have an outer scorecard, which means there is a comparison between them and someone else. For example, if your friend has a luxury car, you would definitely want to have one too. Comparison drives our behaviour and it can be quite dangerous. And I too had experienced the same.
Story first published: Monday, September 30, 2019, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X